ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀವು ಹಕ್ಕಿ ರೆಕ್ಕೆಬಿಚ್ಚಿ ಹಾರುವುದನು ನೋಡಿದ್ದೀರಾ..

ನಾನೊಮ್ಮೆ ಕೇಳಬೇಕಿದೆ…

– ರಮೇಶ್ ನೆಲ್ಲಿಸರ


ಜಗತ್ತಿನ ಭಾರವನ್ನೆಲ್ಲ ಹೊತ್ತಂತಿರುವ
ಜನರಿಗೆ ನಾನೊಮ್ಮೆ ಕೇಳಬೇಕಿದೆ
ನೀವು ಹಕ್ಜಿ ರೆಕ್ಕೆಬಿಚ್ಚಿ ಹಾರುವುದನು ನೋಡಿದ್ದೀರಾ ಎಂದು
 
ನೂರು ಸಮಸ್ಯೆಗಳಿಗೆ ತಾವೇ ಸಿಕ್ಕಿಕೊಂಡು
ಒದ್ದಾಡುತಿರುವ ಸ್ನೇಹಿತರಿಗೆ ನಾನೊಮ್ಮೆ ಕೇಳಬೇಕಿದೆ
ಕೈಕಾಲು ಇರದವರೂ ಬದುಕಿದ್ದಾರೆ,ನೋಡಿದ್ದೀರಾ ಎಂದು
 
ಮನೆಯೊಳಗೊಂದು ಮನೆಕಟ್ಟಿ
ಅದನ್ನೇ ಪ್ರೀತಿಸುವ
ಜೊತೆಗಾರರಿಗೆ ನಾನೊಮ್ಮೆ ಕೇಳಬೇಕಿದೆ
ನಿಮ್ಮ ಸುತ್ತಲಿನವರನ್ನು ಪ್ರೀತಿಸಿದ್ದೀರಾ ಎಂದು
 
ಥೂ ಮಣ್ಣು,ಗಲೀಜೆಂದು
ಮಕ್ಕಳ ಗದರಿಸುವ ಪೋಷಕರಿಗೆ
ನಾನೊಮ್ಮೆ ಕೇಳಬೇಕಿದೆ
ನಿಮ್ಮ ಬಾಲ್ಯ ಮರೆತಿರಾ ಎಂದು
 
ಹೌದು…ನಾನೊಮ್ಮೆ ನನಗೂ ಕೇಳಬೇಕಿದೆ
ಜೀವನದ ಅನಂತ ಸಾಧ್ಯತೆಗಳಿಗೆ ಕೊನೆಯುಂಟೆ ಎಂದು…..
 

‍ಲೇಖಕರು G

21 November, 2014

1 Comment

  1. mmshaik

    nice…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading