ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀರಾಗಿ ಹರಿದು ಒಂದಾಗುತ್ತೇನೆ,…..

ಭುವಿ

ನಿನ್ನನ್ನು ಬೇಷರತ್ ಪ್ರೀತಿಸುತ್ತೇನೆ
ನಿನ್ನ ನೆರಳ ಹಾಸಿನ ಮೇಲೆ

ನೀರಾಗಿ ಹರಿದು ಒಂದಾಗುತ್ತೇನೆ,

ದೂರದಿಂದಲೇ ನಿನ್ನ ಚಲನವಲನಗಳ ನಡುವೆ
ಸುಳಿಯುವ ನನ್ನ ನೆನಪ ಗಮನಿಸಿ ನಸುನಕ್ಕಾಗ ಪುಳಕಿತಗೊಳ್ಳುತ್ತೇನೆ,

ಚಂದ್ರನ ಜೊತೆಗೆ ಜಗಳಕ್ಕಿಳಿಯುತ್ತೇನೆ
ನಿನಗೆ ತೊಡಿಸಿದ ಬೆಳದಿಂಗಳುಡುಗೆಯ ಗುಂಡಿಬಿಚ್ಚಿ ನನಗೂ ತಂದು ತೊಡಿಸೆಂದು,

ನಿನಗಾಗಿ ತುಡಿಯುವ
ನನ್ನೆದೆಯ ದರಬಾರಿನಲ್ಲಿ ಬಲೆ ಹೆಣೆದಿದ್ದೇನೆ
ನಿನ್ನನ್ನು ಕೆಡವಿಕೊಳ್ಳಲು,

ನಿನ್ನ ಹೃದಯ ಶ್ರೀಮಂತಿಕೆಯ
ಕೊಳ್ಳೆ ಹೊಡೆದು ತಿಜೋರಿಯಲ್ಲಿಡಲು
ಹೊಂಚುಹಾಕಿದ್ದೇನೆ,

ನಿನ್ನ ಬಟ್ಟಲುಗಣ್ಣಿನೊಳಗೆ
ಈಜು ಕಲಿಯುವ ನೆಪದಲಿ
ಮುಳುಗಿ ಹೋಗುತ್ತೇನೆ….

 

 

‍ಲೇಖಕರು admin

24 February, 2018

2 Comments

  1. ಅಕ್ಕಿಮಂಗಲ ಮಂಜುನಾಥ

    ಪದ್ಯ ಚೆನ್ನಾಗಿದೆ

  2. ಅಕ್ಕಿಮಂಗಲ ಮಂಜುನಾಥ

    ಪದ್ಯ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading