ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀರದಾರಿಯಲೊಬ್ಬ ಚಂದಿರ…

ಅಜೀತ ಪಾತ್ರೋಟ

ಮೂರು ಬಿಂದುಗಳಲಿ
ಮೂಳಗಿಹನು ಚಂದಿರ
ಲೋಕದ ಹಿಡಿ ಶಾಪಕ್ಕೊ
ಅರ್ದ ಪೂರ್ಣದಂತಿಹನೂ
ದುಖಃ ತಿಂದು ತಿಂದು ಕಕ್ಕಿಹನೂ

ಮೂರು ಬಿಂದುವಿನಾಚೆ
ಒಂದು ಚಿದ್ಬಿಂದು ಚಾರಿ
ನಾಲ್ಕಾಗಲರಿಯದೆ ಒದ್ದಾಡಿಹನು
ಕಾಣಲರಿಯದ ಒಣಕೆ
ಗಿರಾಣದ ಮುಳ್ಳಾಗಿ ಮನಕೆ ತಾಕಿ
ಬೆನಕನಾಗಬಾರದೆನೋ ಮಣ್ಣಲಿ

ಅನತಿ ದೂರದ ಕೆರೆಯ
ಇನುಕಿ ನೋಡಿದಾ
ಬಿಂಬದ ಕಣ್ಣೀರ ನೀರಾ
ಒರಸ ನೋಡಿದ
ತೀರ ಸೇರೋ ದೂರಾ ದೂರಾ

ಚಂದದ ಮೈ ಬಣ್ಣ
ನಾಕಾಶೆ ತೇಪೆಯ ಗೇರೆಗಳ
ನೀರದಾರಿಯಲೊಮ್ಮೆ ನೋಡ ನೋಡಿದ
ನೀರಿಗೆ ಅವನು
ಅವನಿಗೆ ನೀರೂ
ಇವೆ ಗತಿ ಅದೆ ಸ್ಥಿತಿ

ಬಿಂಬದಾಚೆಯ ಬದುಕು
ಎದಕೂ ಎದಕೂ
ಇಂದ ನಾಳೆ ನಾಡಿದಿನ ತೀರವೇಕೋ
ಕರಗುವ ಹಿಮದಹಾಗೆ ಕರಗಬೇಕೊ

‍ಲೇಖಕರು Admin

9 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading