ಮೇಣದ ಬತ್ತಿ
– ಮ೦ಜುಳಾ ಬಬಲಾದಿ
ನೀನೆಂಬ ಮೇಣದಲಿ
ನಾನೆಂಬ ಬತ್ತಿ
ಜೊತೆಯಾಗಿ ಹಿತವಾಗಿ
ಬೆರೆತಾಯ್ತು ನೂರ್ಕಾಲ
ಬೆಳಗಲಿಲ್ಲ ಇನ್ನೂ ಪ್ರೀತಿ ಹಣತೆ…
ನನ್ನಲ್ಲೂ, ನಿನ್ನಲ್ಲೂ
ನಮ್ಮ ಮೌನಗಳಲ್ಲೂ
ನುಸುಳಲಿಲ್ಲ ಯಾವ ಕುಂದು-ಕೊರತೆ!
ಸುಮ್ಮನೇ ಕಾಯುವುದೂ
ಒಂದು ತೆರನಾದ ತಪಸ್ಸು
ಆರಾಮಾಗಿದ್ದುಬಿಡೋಣ
ಆಗುವವರೆಗೂ ತಮಸ್ಸು..
ಆಮೇಲೆ..
ಅನು-ಕ್ಷಣವೂ ನಾ ಬೆಂದು ಸುಡುತಿರುವಾಗ
ಹನಿ-ಹನಿಯಾಗಿ, ನೀ ಕರಗಿ ಬೆರೆಯಬೇಕು
ನಾ ಕಾಯಬೇಕು, ನೀ ಕರಗಬೇಕು
ಜಗದ ತುಂಬೆಲ್ಲ ಆಗ
ಝಗ-ಮಗ ಬೆಳಕು..!
ನಿನ್ನಲ್ಲಿ ನಾನು,
ನನಗಾಗಿ ನೀನು
ಕರಗಿ ಬೆಳಗುವಾಗ
ಜಗವೆಲ್ಲ ಬೆರಗು..
ನೀ ಕರಗದೇ
ನಾ ಬೆಳಗಲಾರೆ
ನಾ ಬೆಳಗದೇ
ನೀ ಕರಗಲಾರೆ..
ಬಾ
ಜೊತೆ-ಜೊತೆಯಾಗಿ
ಜ್ವಾಲಾಮುಖಿಯಾಗೋಣ
ನಮಿಸುತ್ತ ನಮ್ಮನೊಂದು
ಮಾಡಿದ ಕೈಗಳಿಗೆ
ಸ್ಮರಿಸುತ್ತ ಬೆಳಕ ಕಿಡಿ
ಹೊತ್ತಿಸಿದ ಕೈಗೆ
ಅಡಿಯಿಂದ-ಮುಡಿವರೆಗೆ
ಮೊದಲಿಂದ ಕೊನೆವರೆಗೆ
ನಾವೇ ಅಲ್ಲವೇ
ಸಾರ್ಥಕ ಸಾಂಗತ್ಯದನುಕರಣೆ
ಅಮರ ಪ್ರೇಮದ
ಜ್ವಲಂತ ಉದಾಹರಣೆ…!
]]>





ಬಾ
ಜೊತೆ-ಜೊತೆಯಾಗಿ
ಜ್ವಾಲಾಮುಖಿಯಾಗೋಣ
ನಮಿಸುತ್ತ ನಮ್ಮನೊಂದು
ಮಾಡಿದ ಕೈಗಳಿಗೆ
ಸ್ಮರಿಸುತ್ತ ಬೆಳಕ ಕಿಡಿ
ಹೊತ್ತಿಸಿದ ಕೈಗೆ
ಈ ಸಾಳುಗಲ್ಲಿನ ಭಾವನೆಗಳು ಮನಮುಟ್ಟಿ ,ಮನತಟ್ಟಿ. ಹೊಸ ಥ್ರಿಲ್ ನೀಡುವಂತಿವೆ
Bahala sogasaagi ide Manju…:)
majula badukina uttam chitra neediddiri…shubhavaagali
sogasaagide ri innastu bareeri
ಧನ್ಯವಾದಗಳು ಎಲ್ಲರಿಗೂ.. ನಿಮ್ಮ ಮೆಚ್ಚುಗೆಯ ನುಡಿಗಳು ನಿಜವಾಗಿಯೂ ಪ್ರೋತ್ಸಾಹದಾಯಕ 🙂
nice
ಆಗುವವರೆಗೂ ತಮಸ್ಸು.. it should be i think neeguvavaregu tamassu. tamassu means darkness. else all words showered from heven to the heart