ಸುನೈಫ್
ಗಝಲ್

ನೀನೆಂಬ ಕನಸಿಗೆ ರೆಕ್ಕೆ ಕಟ್ಟಿದ್ದು ಯಾರು ಹೇಳು
ನಾನೆಂಬ ಕಡು ಪಾಪಿಗೆ ಬಣ್ಣ ತುಂಬಿದ್ದು ಯಾರು ಹೇಳು
ನಿಂತ ನೆಲ ಕುಸಿಯುವಾಗೆಲ್ಲ ನಕ್ಕವರು ಈಗ ಕಲ್ಲಾಗಿದ್ದಾರೆ
ಮಂದಹಾಸವಾಗಿ ನನ್ನೊಂದಿಗೆ ಇರು ಎಂದು ನಿನಗೆ ಹೇಳಿದ್ದು ಯಾರು ಹೇಳು
ನನ್ನದೋ ನಿನ್ನದೋ, ಬದುಕು ಹೊಸ ದಿಕ್ಕು ಹುಡುಕುತ್ತಲೇ ಇರುತ್ತದೆ
ಕಳಕೊಂಡಿಲ್ಲದೇ ಹುಡುಕುತ್ತಿರುವ ನನ್ನನ್ನು ತಿದ್ದಿದ್ದು ಯಾರು ಹೇಳು
ನಶೆಯೆಂಬುದೀಗ ನನ್ನದಲ್ಲದ ಸೊತ್ತಾಗಿ ಬಿಟ್ಟಿದೆ ಸಾಕಿ
ಇಲ್ಲದ ಮದಿರೆಗೆ ಬಟ್ಟಲು ಚಾಚುವಾಗ ಕಾಡಿದ್ದು ಯಾರು ಹೇಳು
ಕಾಯುವಿಕೆಗೂ ಒಂದು ಅರ್ಥವಿರಲೇಬೇಕು ‘ಸುನೈಫ್’
ಅದ ನೀನು ಕಂಡುಕೊಂಡಿಲ್ಲವೆಂದರೆ ತಪ್ಪಿದ್ದು ಯಾರು ಹೇಳು






Nice….
ಕಳಕೊಂಡಿರದೆ ಹುಡುಕುತ್ತಿದ್ದ ನನ್ನನ್ನ ತಿದ್ದಿದ್ದು…!
ಚಂದದ ಸಾಲುಗಳು ಸರ್..