ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನೀನು ಬೆಳಗಿಸಲಾರೆ, ನಾ ಇನ್ನ್ಯಾವ ದೀಪದ ಬಳಿ ಸುಳಿಯಲಾರೆ’ – ಹರವು ಸ್ಪೂರ್ತಿ

ಹರವು ಸ್ಫೂರ್ತಿ ಗೌಡ

ಆ ರಾತ್ರಿ ನಾವು ನಿದ್ದ್ರಿಸಿದಂತಿಲ್ಲ
ನನ್ನ ನಿದ್ದೆ ಜೊಂಪಿಗೆ ಹೊರಳಿ ಮುದ್ದಿಸುತ್ತಿದ್ದೆ
ಮುತ್ತಿಟ್ಟು, ನೀಲಿ ಮುಖವನ್ನ ನೋಡುತ್ತಿದ್ದೆ
ನಾನು ಭಾವನೆಗಳ ಬಿಟ್ಟುಕೊಡದ ಭೀಕರ ಕಡಲಾಗಿದೆ
ಉಳಿಸಿಕೊಳ್ಳಲಾಗದ ಆತಂಕ ಎರಗುವ ಅಲೆಗಳಾಗಿದ್ದವು
ಪ್ರತಿ ತಬ್ಬಿಗೂ ಬೆಚ್ಚುತ್ತಿದ್ದೆ..ಬಿಗಿಗೆ ಉಸಿರ ಕಳೆದುಕೊಳ್ಳುತ್ತಿದ್ದೆ
ಗೊತ್ತಿತ್ತು ಇಂಥದೊಂದು ದಿನ ಬರಿದೆದೆಯಾಗಲಿದೆನೆಂದು
 
ತುಟಿ ಮೇಲೆ ಬೀಳುತ್ತಿದ್ದ ಪ್ರತಿ ಪ್ರೀತಿ ಹನಿ
ದಾಹ ಹೆಚ್ಚಿಸುತ್ತಿತ್ತು.. ಹೆದರಿಸುತ್ತಿತ್ತು
ನನಗೆ ಗೊತ್ತಿತ್ತು ಇಂಥದೊಂದು ದಿನ ಕಾದಿದೆ
ನಿನ್ನ ಮುತ್ತಿಲ್ಲದೆ ನಾನು ಬಾಯಾರಲಿದ್ದೇನೆ!
 
ಎಲ್ಲ ಗದ್ದಲ, ಸುದ್ದಿ ಮನೆಗಳಿಂದ ದೂರವಿದ್ದವು
`ನಿಶಬ್ದ’ ಒಂಟಿಯಾಗಿಬಿಡುವ ಭಯ ತರಿಸುತ್ತಿತು
ನಮ್ಮವರಲ್ಲದಿದ್ದರೇನು ಸುತ್ತ ಒಂದಿಷ್ಟು ಜನ ಬೇಕಾಗಿದ್ದರು
ನೀನೆನೋ ಉಸಿರು ತಾಕಿಸುವಷ್ಟು ಮಗ್ಗಲಲಿ ಮಲಗಿದ್ದೆ
ನೀನು ನನ್ನವನಲ್ಲವಲ್ಲ.. ಸುತ್ತ ಒಂದಿಷ್ಟು ಜನ ಬೇಕಾಗಿದ್ದರು

ಅರ್ಥವಿಲ್ಲದ ಸಂಬಂಧ ಬೆಳೆಯಲೇಕೆ ಬಿಡಲಿ
ಸಾವಿನ ಗಂಗೆ ಹರಿಯುತಿರೆ ನಮ್ಮೊಡಲಲಿ
`ರೊಮ್ಯಾನ್ಸ್ ಪ್ರಜ್ಞೆ’ ಟ್ಯಾಗ್ಲೈನ್ನಲ್ಲಿ ಫ್ರೀಯಾಗಿ ಬರುತ್ತೆ
ಗಾಂಜಾ ಸೇದಿದ ಅರ್ಧಕ್ಷಣವಷ್ಟೇ ಹೆದರುತ್ತೀ
 
ರಾಗತಪ್ಪಿದ ಹಾಡಿನಲ್ಲಿ ಬೆಳಕೊಂದ ಹಚ್ಚಲು ಯೋಚಿಸುವೆ
ಮರೆತವಳಂತೆ ಸುಮ್ಮನಾಗುವೆ, ಕತ್ತಲು ತುಂಬ ಆಪ್ತವಾಗಿದೆ
ಯಾವುದಾದರು ಮೂಲೆಯಲ್ಲೆ ನೀನೂ ಜಡವಾಗಿರುವೆ
ಬೆಳಕ ಹಚ್ಚಿ, ಇಬ್ಬರು ಬಿಳಚು ದೇಹಗಳ ನೋಡಿಕೊಳ್ಳುವುದೇಕೆ
ನೀನು ಬೆಳಗಿಸಲಾರೆ, ನಾ ಇನ್ನ್ಯಾವ ದೀಪದ ಬಳಿ ಸುಳಿಯಲಾರೆ
 

‍ಲೇಖಕರು avadhi

11 April, 2014

4 Comments

  1. Anonymous

    nivu ontitanavanna heluva pari thumba channagide

  2. mmshaik

    nice..very nice..!!

  3. nagraj.harapanahalli

    ಅಪ್ಪಟ ತಾಜಾತನವನ್ನು ಪ್ರಾಮಾಣಿಕವಾಗಿ ಕಟ್ಟಿಕೊಡುವುದು ಕವಿಗೆ ಒಂದು ಸವಾಲು. ಇದು ನಿಜಕ್ಕೂ ಕವಿತೆ.

  4. Anonymous

    Anthryada saagathya illavaguva pari dehabasheya olage aathmasagathada palukugalu thumba kaadive nim e kavithe nannanu thumba kaadide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading