ಎಂ ಎಂ ಶೇಖ್ ಯಾದಗಿರಿ
ನೀನು ಆ ದಂಡೆಯಿಂದ
ತೇಲಿಬಿಟ್ಟ ಕಾಗದದ ಹಡಗು
ಈ ದಂಡೆ ಮೇಲಿರುವ ನನಗೆ ತಲುಪಲೇ ಇಲ್ಲ..!
ವಿಳಾಸ ತಪ್ಪಿಸಿದ ಅಲೆಗಳು
ಯಾವ ದಿಕ್ಕಿಗೆ ಎಳೆದುಕೊಂಡು ಹೋದವೋ ..
ಅದರ ವಿಳಾಸ ದಿನದ ಮೂಲೆಗಳಲಿ
ಹುಡುಕಿದ ನನ್ನ ಕಣ್ಣುಗಳೀಗ ಆಸಕ್ತಿ
ಕಳೆದುಕೊಂಡು ಕುಳಿತಿವೆ ..
ಅವುಗಳನ್ನೇ ಶಪಿಸುತ್ತ ,
ನಿಂತ ನೀರಲ್ಲಿ ಕಲ್ಲೆಸೆಯುತ್ತಾ !!!!

ಹುಡುಕಲೇನು ಸಮುದ್ರದಲ್ಲಿ ?
ಅದಕಾಸೆ ಪಡದ ಬಯಕೆಗಳು
ಮುನಿದು ನಿಂತಿವೆ ಅದರ ಮೇಲೇನೇ !!
ಇಲ್ಲಿ ಮುನಿಸುಗಳಿಗೆ ಮನ್ನಣೆಯಿಲ್ಲ .
ಮನದ ಮಿಡಿತಗಳನ್ನೇ ಕದಿಯುವ
ಅವುಗಳೊಂದಿಗೆನೇ ಅನುಸಂದಾನ
ದಾಟಲೇ ಬೇಕಾಗಿದೆ ಅನಿವಾರ್ಯತೆಗಳೀಗ .
ಅದಕ್ಕೇನೆ ನಾ ಬಿಟ್ಟ ದೋಣಿಯ
ನೀನೂ ಹುಡಕಲೆತ್ನಿಸಬೇಡ ..






sarala,sundara kavite-smitha
meaningful poem, needs more and more,
vibinna kavite eshtavaythu
sangeetha raviraj
sundaravada kavite
good poem