ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀನುಟ್ಟ ಸೀರೆ ಸೆರಗ ತಾಗಿದ ಗಾಳಿ..

ಹನಿಗಳು 

nagaraja harapanahalli

ನಾಗರಾಜ ಹರಪನಹಳ್ಳಿ. (ಕಾರವಾರ)

-1-

she on cloudsಮೌನದಲ್ಲೂ ನಾನು ಸುಳಿದಾಡುವೆ
ಒಬ್ಬಳೇ ಇರುವೆ ಎಂದು ಭಾವಿಸಬೇಡ
ಸುಳಿಯುವ ಗಾಳಿಯಲ್ಲಿ
ಎರಡು ನಿಟ್ಟುಸಿರುಗಳಿವೆ
ಅವು ಪ್ರೇಮದ ಪಲ್ಲವಿಗಳಾಗಿ

ಬದಲಾಗಿ ಬಿಡಲಿ
ಕಣ್ಣಲ್ಲಿ ನಕ್ಷತ್ರಗಳು ಹಾಡಲಿ
ಕಾಲ್ಗೆಜ್ಜೆಗಳಲ್ಲಿ
ಏಳು ಸುತ್ತಿನ ಮಲ್ಲಿಗೆ ಅರಳಲಿ

-2-
ನೀನುಟ್ಟ ಸೀರೆ ಸೆರಗ ತಾಗಿದ ಗಾಳಿ
ಪ್ರೇಮದ ನವಿರು ಹೊತ್ತುತಂತು
ಆಡಿದ  ಆಡದೇ ಉಳಿದ ಮಾತು
ಮೌನಗಳ ಸಂಕಲನ ಮೋಡಗಳಲ್ಲಿ
ಚಿತ್ರ ಬಿಡಿಸಿತು
ನೀನಿಡುವ ಪ್ರತಿ ಹೆಜ್ಜೆಯಲಿ
ಕನಸು ಇಣುಕುತ್ತಿದೆ ಗೆಳತಿ
ಮನಸುಗಳ ಅಗಣಿತ ತರಂಗಗಳು
ಎದೆತಾಕುತ್ತಲೇ ಇರುವ ಸೋಜಿಗಕ್ಕೆ ಏನೆನ್ನಲಿ ?

-3-
ನಿನ್ನ ದನಿ ಕೇಳದ ಭೂಮಿಗೆ
ಆಕಳಿಕೆ ಸಮಯ
ಅದಕ್ಕೆ ಮಗ್ಗಲು ಬದಲಿಸುತ್ತಿದೆ
ಮುಗಿಲಿಗೆ ದಿಗಿಲು ಬಡಿದಿದೆ
ಎಲ್ಲಿ ಹೋದೆ ?
ಗೆಜ್ಜೆ ಸದ್ದಿಗೆ ಅರಳುತ್ತಿದ್ದ ಹೂ ಸಹ ಮೌನವಾಗಿದೆ

 

‍ಲೇಖಕರು Admin

7 August, 2016

2 Comments

  1. Renuka ramananda

    ಆಹಾ ತುಂಬ ಚಂದ

  2. Anonymous

    super

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading