ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀನಿದ್ದರೆ ಹಿತವೆನಿಸಿತ್ತು..

ಹೊದಿಕೆ

ಹೇಮಾ ಸದಾನಂದ್ ಅಮೀನ್

 

ಅನಾಥವಾಗಿ  ಬಿದ್ದುಕೊಂಡಿದೆ ಹೊದಿಕೆ

ಅಲ್ಲಿ ರಸ್ತೆಬದಿಯಲ್ಲಿ  ದಿಕ್ಕು ದೆಸೆಯಿಲ್ಲ

ಇಂದು ಯಾರಿಗೂ ಬೇಕಾಗಿಲ್ಲ

 

ಅಂದು  ಚಳಿಯಿತ್ತು

ಮೈಯೆಲ್ಲಾ ಆವರಿಸಿಕೊಂಡು

ನೀನಿದ್ದರೆ ಹಿತವೆನಿಸಿತ್ತು

ಜ್ವರ ಬಂದಾಗ  ನಿನ್ನ ಬೆಚ್ಚಗಿನ

ಸ್ಪರ್ಶದೆದುರು ಔಷಧಿಯೂ ನಗಣ್ಯವಾಗಿತ್ತು

 

ಮನೆಯೊಳಗಿನ ಸುಖನಿದ್ರೆಯ  ಭಾಗ್ಯ ಪಡೆದಿಲ್ಲ

ಹೃದಯದಂಗಳದ ಬೆಳಕ ನೋಡಿಲ್ಲ

ಏನಿದ್ದರೂ ಕತ್ತಲೆಯಲ್ಲೇ   ಉಸಿರಾಟ

ವರುಷಗಳಿಂದ ಸ್ವಚ್ಚಗೊಳಿಸದ ಮನ

ಕರಗಿ ಹೋಗಿದೆ

 

ನಿರ್ಲಕ್ಷದ ದೃಷ್ತ್ರಿ ಇದಕೆ ತಾಕಿ ಹೋಗಿದೆ ಇಂದು

ಬಳಲಿದೆ ಸವೆದಿದೆ ನುಚ್ಚುನೂರಾಗಿದೆ

ತೇಪೆಗಳನ್ನಚ್ಚಿ   ಕೌದಿಯ ಬದುಕು ಸಾಗಿದೆ

 

ಇದೀಗ ಬೆಚ್ಚಗೆ ಇದರ ಹಿಡಿತದಲಿಲ್ಲ

ಸುಮಧುರ ಕನವರಿಕೆ ಇದರ ಕೈಯಲಿಲ್ಲ

ನಿಶಬ್ದ ರಾತ್ರಿಯಲಿ ನರಳುವಿಕೆಯು ಕರ್ಕಶ

ಸುಕ್ಕುಗೊಂಡ ಮೈ ಸ್ಪರ್ಶದ ಕಾವು ಮನಸಿಂದಿಳಿದಿದೆ

 

ಕತ್ತಲೆಯಲ್ಲಿ  ನೀನು ಹಚ್ಚಿಟ್ಟ ಹಣತೆಯೂ

ಬೆಳಕೂ ಇಂದು ದುಸ್ತರವಾಗಿದೆ

‍ಲೇಖಕರು admin

15 April, 2017

2 Comments

  1. Nikhil

    What an awesome kavana madam……….Too good

  2. Anonymous

    ಯ್ಔವನ ಹಾಗು ಮುಪ್ಪಿನಡುವಿನ ಅಂತರದ ನವಿರಾದ ಮೌನವ ನಾಕಂಡೆ ಗೆಳತಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading