ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನೀನಂದ್ರೆ ನಂಗೆ ಇವತ್ತಿಗೂ ಇಷ್ಟಾನೇ!..' – ಕುಮುದವಲ್ಲಿ ಬರೀತಾರೆ

ಕುಮುದವಲ್ಲಿ ಅರುಣ್ ಮೂರ್ತಿ

…ನೀನು ನಮ್ಮನ್ನೆಲ್ಲಾ ಬಿಟ್ಟು ಹೋದಾಗ ನಿಂಗೆ ಜಸ್ಟ್ ೪೫ ವರ್ಷ! ಅದೇನು ಅಂತಹ ಅವಸರ ಆಗಿತ್ತು? ಮೂರು ಮದ್ವೆಯಾದೋನು ಅಂತ ಗೊತ್ತಿದ್ರೂ…ನಿನ್ನ ಇಷ್ಟಪಡೋರು ಎಷ್ಟು ಜನ ಇದ್ರು ಗೊತ್ತಾ? ಅದ್ರಲ್ಲಿ ನಾನೂ ಒಬ್ಳು! ನೀನು ಸೂಪರ್ ಹೀರೋ ಆಗೋಕ್ಕಿಂತ…ಮೊದ್ಲು ಮೊದ್ಲು ಕೆಟ್ಟವ್ನಾಗಿ…ಆಮೇಲಾಮೇಲೆ ರಿಯಲೈಸ್ ಮಾಡ್ಕೊಂಡು…ಕೊನೇಲಿ ಒಳ್ಳೇವನಾಗ್ತಿದ್ದೆ ನೋಡು…ಅಂಥಾ ಪಾತ್ರಗಳಲ್ಲಿ ನಂಗೆ ಹುಚ್ಚು ಹಿಡಿಸ್ತಿದ್ದೆ. ನಿನ್ ಹೈಟು…ಸ್ಮಾರ್ಟ್ ನೆಸ್…ಕಲರ್…ಸದಾ ನಗೋ ಕಣ್ಗಳು…ಜೊಂಪೆಯಾಗಿ ಹಣೆ ಮೇಲೆ ಬೀಳುತ್ತಿದ್ದ ನಿನ್ನ ಕ್ರಾಫಿನ ಸಿಲ್ಕೀ ಕೂದಲು…ನೀನು ಭಾವೋದ್ವೇಗಕ್ಕೆ ಒಳಗಾದಾಗ ಅಲುಗಾಡುತ್ತಿದ್ದ ನಿನ್ನ ಮೂಗಿನ ಹೊಳ್ಳೆ…ಯಾವಾಗಲೂ ಅರೆತೆರೆದು ನಿನ್ನ ವಿಶಾಲ ವಕ್ಷ ತೋರುತ್ತಿದ್ದ ನಿನ್ನ ಶರಟು…ಕಂಡು ಕಾಣದ ಹಾಗೇ ಗಲ್ಲದ ಮೇಲಿದ್ದ ಮಚ್ಚೆ…ಓಹ್!!! ಇವತ್ತಿಗೂ ಮರೆಯೋಕ್ಕಾಗ್ತಿಲ್ಲ!

ಕಿಶೋರ್ ಕುಮಾರ್ ಹೀರೋ ಆಗಿದ್ದ ಸಿನಿಮಾದಲ್ಲಿ…ಅವರ ಪಾತ್ರದ ಚಿಕ್ಕ ಹುಡುಗನಾಗಿ ಬೆಳ್ಳೆತೆರೆಗೆ ಬಂದೋನು…ಮುಂದೆ ಕಿಶೋರ್ ದಾ ಅವರ ಆಗಿನ ಹೆಂಡತಿ ಯೋಗಿತಾ ಬಾಲಿಗೆ ಹೀರೋ ಆಗಿ…ಅವಳ ಕಂಗಳಲ್ಲಿ ಕನಸು ತುಂಬಿ ಬಿಟ್ಯಲ್ಲಾ? ನ್ಯಾಯಾನಾ? ಹೋಗ್ಲಿ…ಅಂದ್ರೆ, ವಿಧಿವತ್ತಾಗಿ ಮದ್ವೆಯಾಗಿದ್ದ ಮೀನಾಳನ್ನ ಬಿಟ್ಟು ಬಿನ್ನಾಣಗಿತ್ತಿ ಬಿಂದಿಯಾ ಗೋಸ್ವಾಮಿ ಹಿಂದೆ ಹೋದೆ. ಅದೇನೋ…ನೀನು ಇಷ್ಟ ಅನ್ನೋ ಒಂದೇ ಕಾರಣಕ್ಕೆ…ಆ ಬಿಂದಿಯಾ ಗೋಸ್ವಾಮಿ ಕೂಡಾ ನಂಗೆ ಭಾರೀ ಹಿಡಿಸಿಬಿಟ್ಳು. ಚೆನ್ನಾಗೇ ಇದ್ರಿ ಇಬ್ರೂ…ನೋಡೋರು ಕರುಬೋ ಹಾಗೆ. ಯಾಕೆ? ಏನಾಯ್ತು? ಯಾಕೆ ಬಿಟ್ಟೆ ಅವಳನ್ನ? ಎಲ್ಲಾ ಸಿನಿಮಾದಲ್ಲೂ ಕೊನೇಲಿ ಒಳ್ಳೇವ್ನಾಗೋ ನೀನು…ಇಲ್ಲಿ ಮಾತ್ರ ಯಾಕೆ ಆಗ್ಲಿಲ್ವೋ ಗೊತ್ತಾಗ್ಲಿಲ್ಲ!
ನಿಂದು ಮತ್ತೆ ರೇಖಾದು ಕೂಡಾ ತುಂಬಾನೇ ಗಾಸಿಪ್ಸ್ ಇತ್ತು. ನೀನು ಅವಳನ್ನ ಮದ್ವೇನೇ ಆಗೋಗಿದ್ಯಾ ಅಂತ ಮಾತಾಡ್ತಿದ್ರು ಎಲ್ರೂ…ಅದು ಎಷ್ಟು ಸುಳ್ಳು? ಎಷ್ಟು ನಿಜ…ಯಾರಿಗ್ಗೊತ್ತು? ಏನೇ ಆದ್ರೂ ನಿಮ್ಮಿಬ್ರ ಜೋಡಿಯ “ಘರ್” ಮಾತ್ರ ಅಲ್ಟಿಮೇಟ್ ಸಿನಿಮಾನಪ್ಪ! ಏನ್ ಇಂಟಿಮೇಟ್ ಆಗಿ ಅಭಿನಯಿಸಿದೀರ ಇಬ್ರೂ…ಒಳ್ಳೇ ನಿಜವಾದ ಗಂಡಹೆಂಡಿರಂತೆ!!! ಇವತ್ತೂ…ಒಂದ್ಸಲ ಆ ಸಿನಿಮಾನ ಮತ್ತೆ ನಿನ್ನ ನೋಡೋಕ್ಕಂತಾನೇ ನೋಡ್ತೀನಿ! ಹೋಗ್ಲಿ ಬಿಡು…”ಕಿರಣ್” ನ ಮೂರನೇ ಮದ್ವೆ ಮಾಡ್ಕೊಂಡ್ರೂ, ಅವಳ ಜೊತೆ ಹೆಚ್ಚು ದಿನ ಬಾಳ್ವೆ ನಡೆಸೋಕ್ಕಾಗ್ಲಿಲ್ಲ ನಿಂಗೆ. ನೋಡುಗರ ಹಾರ್ಟ್ ಕದ್ದಿದ್ದ ನಿಂಗೆ ಹಾರ್ಟ್ ಪ್ರಾಬ್ಲಂ ಇತ್ತೂ ಅಂತ ಗೊತ್ತೇ ಇರ್ಲಿಲ್ವಾ? ಹೀಗೊಂದು ಸಡನ್ನಾಗಿ…ನಿನ್ನ ಹೆಂಡ್ತೀರ್ನ ಸಲೀಸಾಗಿ ಬಿಟ್ ಹೋದ ಹಾಗೇನೇ…ನಮ್ಮನ್ನೆಲ್ಲಾ ಬಿಟ್ ಹೋಗ್ಬಿಟ್ಯಲ್ಲಾ?? ಆಗ ನಂಗೆ ೧೮ ವರ್ಷ…ಅಳು ಬಂದಿತ್ತು! ನಮ್ಮಪ್ಪ ಅಮ್ಮಂಗೆ ಅನುಮಾನ ಬರಬಾರ್ದೂ ಅಂತ, ನೆಗಡಿ ನೆಪ ಹಾಕೊಂಡು ಅತ್ತಿದ್ದೆ ಮನಸಾರೆ! ಇವತ್ತಿಗೆ ನೀನು ಹೋಗಿ ೨೩ ವರ್ಷಗಳಾಯ್ತು…ಇನ್ನೂ ಮರೆಯೋಕ್ಕಾಗಿಲ್ಲ ನಂಗೆ! …ಮತ್ತೆ ನೆಗಡಿ ಬಂದಿದೆ ಗೊತ್ತಾ? …………………………….
ಸರಿ…ಹೋಗ್ಲಿ ಬಿಡು. ನಿನ್ನ ಸಿನಿಮಾನೆಲ್ಲಾ ಲೈನ್ಡ್ ಅಪ್ ಮಾಡ್ಕೊಂಡಿದೀನಿ. ಮೊದ್ಲು ಘರ್, ಆಮೇಲೆ ಸ್ವರ್ಗ್ ನರಕ್, ಪತ್ತರ್ ಕೇ ಫೂಲ್, ಪ್ಯಾರ್ ಕಾ ಕರ್ಝ್, ಅನ್ ಕಹೀ, ಅನುರೊಧ್, ಬರ್ನಿಂಗ್ ಟ್ರೈನ್, ಫ್ರೊ.ಪ್ಯಾರೇಲಾಲ್, ರಫ್ತಾರ್, ಸಾಜನ್ ಕಿ ಸಹೇಲಿ…..
ಗೊತ್ತು…ಗೊತ್ತು! ನೀನು ನಟಿಸಿರೋ ೧೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನೀನಿನ್ನೂ ಜೀವಂತ ಅಂತ! ಅದಕ್ಕೇ ತಾನೇ ನೀನು ಎಲ್ಲರ ಮನಸ್ಸಿನಲ್ಲಿ ಉಳ್ಕೊಂಡಿರೋದು! ಯಾರ್ ಏನೇ ಅಂದ್ಕೊಳ್ಳಿ…ನಿಜ ಬದುಕಲ್ಲಿ ನೀನ್ ಏನೇ ಆಗಿದ್ರೂ…ನೀನಂದ್ರೆ ನಂಗೆ ಇವತ್ತಿಗೂ ಇಷ್ಟಾನೇ! ನಿನ್ನ ನೆನಪಿಗೊಂದು ಪುಟ್ಟ ಥ್ಯಾಂಕ್ಸ್!!
 

‍ಲೇಖಕರು G

31 October, 2013

4 Comments

  1. bharathi b v

    Ayyo Vinod jothene mathadthidireno anno haagide nimma baraha … loved it kumuda 🙂

  2. malathi S

    🙂 me too had a crush on him.and wanted him to wed Rekha.
    monne makkaLa jate ghar nODtaa idde. makkaLige nanage avana meliruva crush bagge hELidaaga, chi avanige karaDi taraha koodlide anta nagtaa idroo. 🙂
    Nice write up Kumudavalli.
    malathi S

  3. sandhya

    nanna fav hero….eeglu avara kelavu haaDugaLannu keLtaa irodu nange tumbaaa ista…tumbaa chennagi bardiddiri…

  4. Vidyashankar H

    ಕುಮುದವಲ್ಲಿ ಸ್ವಲ್ಪ ದೀರ್ಘ ಬರೀರಿ… ಸ್ವಲ್ಪ ಸ್ವೀಟ್ ಕೊಟ್ಟು, ಆಸೆ ತೋರ್ಸಿ ಆಮೇಲೆ ಅಷ್ಟೇ ಅಂದುಬಿಡ್ತಿರಾ… ಇದು ಮೊಸನಪ್ಪಾ… 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading