ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಸಾರ್ ಸರ್: ಲಲಿತಾ ಸಿದ್ಧಬಸವಯ್ಯ ಕವಿತೆ ಶ್ರದ್ಧಾಂಜಲಿ

ನಾವೂ ನಿಮ್ತರಾನೇ..

ಲಲಿತಾ ಸಿದ್ಧಬಸವಯ್ಯ

ರೇಖೆ: ಎಂ ಎಸ್ ಪ್ರಕಾಶ್ ಬಾಬು 

ಆವೊತ್ತು
ರಾಮನ್ ಸತ್ತ ಸುದ್ದಿ
ಕವನ ಮಾಡಿದಿರಿ
ಈವೊತ್ತು
ನೀವು ಹಳೆಯ ಕೋಟು ಕಳಚಿದ್ದು
ನನಗೆ ಸುದ್ದಿಯಲ್ಲ
ಕವನವಲ್ಲ
ಮೂಕಸಂಕಟ

ನಿಮ್ಮ ಕವಿತೆ
ಗಳನ್ನೆಲ್ಲ ಪ್ರೀತಿಸಿದ್ದೆ
ಪದೇಪದೇ ನಾವೂ
ನಿಮ್ತರಾನೇ ಎಂಬುದ
ಸಾಬೀತಾಗಿಸಲು
ಒದ್ದಾಡುವ ಗೆಳತಿಯ
ಮೆಸೇಜುಗಳ ಕಂಡಾಗ
ನೀವು ಅಲ್ಲಿರುತ್ತಿದ್ದಿರಿ
ಇರುತ್ತೀರಿ ಈಮೇಲೂ

ಇರಬಹುದು
ಅವಳ ಕಷ್ಟ
ನಿಮ್ಮಷ್ಟೇ ಚೆನ್ನಾಗಿ
ಅರ್ಥ ಮಾಡಿಕೊಂಡವರು.
ಇರಲಾರರು
ಅದನ್ನು ತಣ್ಣಗೆ
ಕವನ ಮಾಡಿದವರು
ಮಂಜುಗಡ್ಡೆ
ಯೂ ಬೆವರಿಸುತ್ತದೆ

ನಿಮ್ಮವುಗಳ ತರಹವೆ
ಇದಾವೆ ನನ್ನ ‌ಕವನವೂ
ಅಂತನ್ನಲಿ ಜನ ಅಂತ
ಬಯಸಿದ್ದೆ,,, ಅನಲಿಲ್ಲ
ಈಗನ್ನಿಸಿದೆ, ಹಾಗೆ
ನಿಮ್ಮ ಹಾಗಿರಲು
“ನಿಮ್ಮಂತಾಗುವ”
ಅಗ್ನಿಗೊಂಡ ಹಾಯ
ಬೇಕು, ಬೇಕು.

 

‍ಲೇಖಕರು avadhi

4 May, 2020

3 Comments

  1. Jayalaxmi Patil

    ‘ನಿಮ್ಮ ಹಾಗಿರಲು ನಿಮ್ಮಂತಾಗಿರಲು ಅಗ್ನಿಗೊಂಡ ಹಾಯಬೇಕು’ ನಿಜ ಲಲಿತಕ್ಕ.

  2. T S SHRAVANA KUMARI

    ಕಡೆಯ ಪಂಕ್ತಿಗಳ ಮಾತುಗಳು ಮನ ತಟ್ಟುತ್ತವೆ

  3. Ahalya

    ಓಹ್…!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading