ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಶ್ಯಬ್ದ ಮಿಡಿತ ನಿಂತಂತೆ ಅಷ್ಟೇ!

-ಸರೋಜಿನಿ ಪಡಸಲಗಿ

ನಿಶ್ಯಬ್ದ ಅಷ್ಟೇ!

ಗಂಗೆ ಯಮುನೆಯ ತಾವು ಕಡಲತಡಿ
ಏನುಂಟು ಏನಿಲ್ಲ ನೋಟ ನೂರೆಂಟು ನುಜ್ಜುಗುಜ್ಜು ಅರ್ಥ ಕೊಚ್ಚಿಹೋದ ಕನಸು
ಭ್ರಮೆಯ ದ್ವೀಪದಲಿ ಹಳವಂಡಗಳ ಆಟ

ತಟದುದ್ದದ ಮುರುಟಿದ ಒಣ ಬಳ್ಳಿಯಂತೆ
ಸ್ತಬ್ಧ ಬಾಗು ಬಳುಕಿಲ್ಲದೆ ನೆಟ್ಟಗೆ ನಿಂತಂತೆ
ಸಪಾಟ ಹೆಪ್ಪುಗಟ್ಟಿದ ಮಂಜುಗಡ್ಡೆಯಂತೆ
ಏನೂ ಕಾಣದ ತೋರದ ಭೀಕರ ಶೀತಲತೆ

ಬಿಸಿಕಳೆದ ಆ ಮನ ತುಂಬಿ ಪ್ರಶ್ನೆ ತಲ್ಲಣಿಸಿ
ಜೀವ ಝಲ್ಲೆಂದು ಇಣುಕಿ ಆಳದಾಳ ಕೆದಕಿ
ಕಾಣಲೇನಿದೆ ಬರಿ ಬರಡು ಬರ ನಿರ್ವಾತ
ತುಂಬಿದರೂ ನೋಟ ನೂರೆಂಟು ಕುರುಡು

ಬಲು ಅಗಾಧ ಕಡಲದಡ ತುಂಬ ಮರಳು
ಅದರೊಡಲ ತುಂಬ ಅಲೆಗಳಾಟದ ಅಬ್ಬರ
ಅದೇನು ಹಾರಾಟ ಆದರೇನು ಎಲ್ಲ ಅಸ್ಪಷ್ಟ
ಗುದ್ದಾಟ ಗಾಳಿಯೊಡನೆ ನೋವೂ ಖಾಲಿನೆ!

ತಿರುಗಿ ಜೀವ ಮರಳಿ ಮುಳುಗಿ ಲೆಕ್ಕಾಚಾರದಿ
ಏನಿದೆಲ್ಲ ಎಲ್ಲಿ ಸಿಕ್ಕೀತೀಗ ತಪ್ಪಿ ಹೋದ ಎಳೆ
ನಡುಗಿ ಒಮ್ಮೆ ನೆನೆದು ಕೊಚ್ಚಿ ಹೋದ ಕನಸನ
ಮರುಗಳಿಗೆ ನಿಶ್ಯಬ್ದ ಮಿಡಿತ ನಿಂತಂತೆ ಅಷ್ಟೇ!!!

‍ಲೇಖಕರು Admin

25 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading