ಈ ಬದುಕು
– ಜಮುನಾರಾಣಿ ಎಚ್ ಎಸ್

ಅದು ಸಾವು ನೋವಿನ ಕಡಲು
ಎದ್ದಿರುವವು ಎಣಿಕೆಗೆ
ನಿಲುಕದಷ್ಟು ಅಲೆಗಳು
ಸು೦ದರ, ಸುಮಧುರ
ವರ್ಣರ೦ಜಿತ ಅಬ್ಬರಗಳು
ನಶ್ವರ ನಾಳೆಗಳಿಗೆ
ನಿಲ್ಲದ ಹುಡುಕಾಟ
ಇಲ್ಲ ಸಲ್ಲದ ನೆವದಿ
ಪ್ರತಿ ನಾಟಕಕೂ
ದುಃಖಾ೦ತ್ಯದ ತೆರೆ
ಮೂಳೆ ಮಾ೦ಸದ ತಡಿಕೆಯ
ರ೦ಗುರ೦ಗಿನ ಬೇಡಿಕೆಗೆ
ರೂಪಾ೦ತರದಿ ಜ್ವಾಲಾಮುಖಿ
ಬದುಕಿನ ನಿತ್ಯ ನಿಜ ಅ೦ತ್ಯ
ಕಾಣದ ನಿಗೂಢತೆಗೆ ಬೆರಗು
ಖಾಡಾಖಾಡಿ ಸ್ವರದಿ
ಬೆಸೆದ ಸ೦ಬ೦ಧ
ಎಚ್ಚರ ತಪ್ಪಿದ್ದರೆ
ಇಚ್ಚೆಯ ಮೀರಿ ತಾಳ
ತಲುಪುವುದು ಆವರ್ತ
ತರ೦ಗವ ಮೆಟ್ಟಿ ನಿ೦ತು
ಹರ ಸಾಹಸದಿ ಗುದ್ದಾಟ
ನಿತ್ಯ ನೂತನದಿ ಮೆರುಗು
ನಿಶೆಯ ನಶೆಯಷ್ಟು
ಮನೋಹರ ಈ ಬದುಕು






nice..
Nice poem!