ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿವೇದಿತಾ ಎಚ್ ಅನುವಾದಿತ ಕವಿತೆ – ಪುಟ್ಟ ಮೊಗ್ಗು…

ಮೂಲ: ರೂಮಿ

ಅನುವಾದ : ನಿವೇದಿತಾ ಎಚ್

ಇದು ಗುಲಾಬಿಯ ಪುಟ್ಟ ಮೊಗ್ಗು
ದೇವನ ಅಕ್ಕರಾಸ್ಥೆಯಿಂದ ಅಂಕುರಿಸಿದ್ದು
ನನ್ನ ಈ ಕೊಳಕಾದ ಒರಟು ಕೈಗಳಿಂದ
ಕೋಮಲ ದಳಗಳ ನಾನರಳಿಸಲಾರೆ…

ಮೊಗ್ಗ ಹೂವಾಗಿಸುವ ರಹಸ್ಯಕಲೆ
ಬಾರದು ನನ್ನಂತಹವರಿಗೆ
ಅವನದೆಷ್ಟು ನವಿರಾಗಿ ಅರಳಿಸುತ್ತಾನೆ!
ಕಮರಿಯೇ ಹೋದೀತು ಕರಕಮಲಗಳಲ್ಲಿ!

ಅವನ ಸೃಷ್ಟಿಯ ಸರಳ ಸುಂದರ ಗುಲಾಬಿಯ
ಪುಟ್ಟ ಮೊಗ್ಗ ಅರಳಿಸಲಾರೆನೆಂದರೆ…
ಅಮೂಲ್ಯ ಬಳುವಳಿ, ಅವನಿತ್ತ ಜೀವನ
ಅದನರಳಿಸುವ ವಿವೇಕಿ ಹೇಗಾದೇನು ನಾನು?

ಅದಕಾಗಿ
ಅವನನ್ನೇ ನಂಬಿ ಬಿಟ್ಟಿದ್ದೇನೆ ನಾನು
ಅನುದಿನದ ಅನುಕ್ಷಣವೂ ಸಲಹುತ್ತಾನವನು
ಅವನ ಮಾರ್ಗದರುಶನಕೆ ಎದುರುನೋಡುವೆ
ಅವನಾಣತಿಯಡಿ ಹೆಜ್ಜೆಹೆಜ್ಜೆಗೂ ಪುಣ್ಯಸಂಚಯನ

ನನ್ನ ಮುಂದೆ ಹರಡಿಕೊಂಡಿರುವ ಪಥ
ಅವನಿಗಷ್ಟೇ ಪರಿಚಿತ
ಬದುಕ ತೆರೆದಿಡುವನೆಂದು ನಂಬಿದ್ದೇನೆ
ಗುಲಾಬಿ ಮೊಗ್ಗ ತೆರೆದರಳಿಸಿದಂತೆ

‍ಲೇಖಕರು avadhi

6 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading