ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿರ್ಮಲಾ ಬಟ್ಟಲ ಹೊಸ ಕವಿತೆ- ಕಳೆದುಕೊಳ್ಳುವ ಕಳವಳ…

ಡಾ ನಿರ್ಮಲಾ ಬಟ್ಟಲ

ಬಿಡದೆ ಬೆನ್ನ ಹಿಂದೆ
ಸುತ್ತುವ ನೀ ಪದೇ ಪದೇ
ಹೇಳುವೆ ನೆನಪಾಗಿತ್ತಿಯೆಂದು….!
ಹೇಳು… ಮರೆತದ್ದಾದರು
ಯಾವಾಗ…?
ಕೋಳಿ ಕೂಗುವ ಮುಂಚೆಯೆ
ಸುಪ್ರಭಾತ, ಚಿಂತನ
ಮಧ್ಯಾನದೊಳಗೆ ಗದ್ಯ ಪದ್ಯಗಳ ಮಂಥನ
ಸಂಜೆ ಖಂಡಕಾವ್ಯ ಮಹಾಕಾವ್ಯಗಳ ಮನನ
ಅವರಿವರ ಸುದ್ದಿಯ ಜೊತೆಗೊಂದಿಷ್ಟು

ಹರಟೆ ಲಲಿತ ಪ್ರಬಂಧಗಳ ಸಂಕಲನ
ನನ್ನ ನಿನ್ನ ಕಥೆ ಇನ್ನು ಶುರುವಾಗಿಯೇ ಇಲ್ಲ…!
ಪಿಸುಮಾತಿನ ಪ್ರೇಮ ಗೀತೆಗಳಿಗಿಗ
ಯಾರದೊ ಕೊರಳ ರಾಗ ಸುಧೆಯಾಗಿ
ರಾತ್ರಿಯ ನಿದ್ದೆಗೆ ಲಾಲಿಯಾಗಿ
ಕರೆದೊಯ್ಯುತ್ತವೆ ಕನಸಿನೂರಿಗೆ
ಮತ್ತೆ ನಿನ್ನ ನೆನಪು ಹಸಿಹಸಿರು….!
ಈಗ ಹೇಳು….!
ಕಳೆದುಕೊಳ್ಳಲು ಒಂದಿಷ್ಟು
ಜಾಗವಾದರೂ ಇದೆಯಾ
ನಮ್ಮ ನಡುವೆ…..?
ಕಳೆದುಕೊಳ್ಳುವ ಕಳವಳ
ಕಾಡಲಿ ಬಿಡು….!
ಹೊಸ ಕವಿತೆಯ ಹುಟ್ಟಿಗಾಗಿ….!!

‍ಲೇಖಕರು Admin

16 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading