ಲಡಾಯಿ ಪ್ರಕಾಶನ
ನೀನೆದ್ದು ಹೋಗಿ
ದಿನಗಳೇ ಉರುಳಿದವು
ಕೆನ್ನೆ ಮೇಲಿನ ಕುರುಹು
ಹೊತ್ತು ನಿಂತಿದೆ ನೂರು ಪ್ರಶ್ನೆಗಳನ್ನು
ಮೂಲೆಮೂಲೆ ಮಿನುಗುವ
ಕಳೆದ ಕ್ಷಣಗಳ ನೆನಪು
ಜೀವ ಬಿಗಿ ಹಿಡಿದು ಕಂಗೆಡಿಸಿದೆ
ಮತ್ತೆ ಕಿಂಕಿಣಿಯ ಸದ್ದಿಗೆ ಎದೆ ಕಾತರಿಸಿದೆ
***
ಆ ರಾತ್ರಿಯ ಏಕೈಕ ಸಾಕ್ಷಿ
ನಸು ನಗುತ್ತಿದ್ದ ಎಳೆಯಚಂದ್ರ
ಈ ಖಾಲಿ ಕೋಣೆ ನೋಡಲಾರದೇ
ದಿನದಿನವೂ ಕ್ಷಯಿಸುತ್ತಿದ್ದಾನೆ
ನಿನ್ನ ಬಳಿ ಅತ್ತು ಕರೆದು
ದನಿಯ ಕರುಣೆಗೇ ಕರಗುವ ಮೋಡಗಳು
ನನ್ನ ಬಳಿ ಬಿಕ್ಕುತ್ತ
ಬಿಸಿಯುಸಿರು ಸುರಿಸುತ್ತಿವೆ..
***
ಎಲ್ಲ ಅಡೆತಡೆ ಒಡೆದು
ಹಿಗ್ಗಿ ಒಳ ನುಗ್ಗಿರುವೆ
ಗೆದ್ದ ನೆಲದಲಿ ಮತ್ತೆ
ಮೂಡತಾವೆ ಹೆಜ್ಜೆ
ಒಂಟಿ ಸಲಗದ ಮದವು
ಇಳಿಯಲಾರದು ಬೇಗ
ತಲ್ಲಣಿಸದಿರು ಕಂಡ್ಯ
ತಾಳು ಮನವೆ
***
ಮಧುರ ನೆನಪುಗಳೆಲ್ಲ
ಸುಖದ ಕನಲಿಕೆಗಳಾಗಿರುವಾಗ
ಯಾವ ನೆರಳೂ ನನಗೆ ಬೇಡ
ನಿನ್ನ ನಿರೀಕ್ಷೆಯ ಬಿಸಿಯೇ ಸುಡಲಿ
ಆ ಭೀಮ ಬಾಹುಗಳ
ಬರಸೆಳೆವ ಅಪ್ಪುಗೆಯ ನೆನಪಿಗೆ
ಇಕೋ ಈ ಮೌನ ರಾತ್ರಿಗಳ ಅರ್ಪಣೆ…]]>
ಮಧುರ ನೆನಪುಗಳೆಲ್ಲ
ಸುಖದ ಕನಲಿಕೆಗಳಾಗಿರುವಾಗ
ಯಾವ ನೆರಳೂ ನನಗೆ ಬೇಡ
ನಿನ್ನ ನಿರೀಕ್ಷೆಯ ಬಿಸಿಯೇ ಸುಡಲಿ
ಆ ಭೀಮ ಬಾಹುಗಳ
ಬರಸೆಳೆವ ಅಪ್ಪುಗೆಯ ನೆನಪಿಗೆ
ಇಕೋ ಈ ಮೌನ ರಾತ್ರಿಗಳ ಅರ್ಪಣೆ……….ತುಂಬಾ ಅರ್ಥಪೂರ್ಣವಾದ ಹಾಗು ಮೈನವಿರೇಳಿಸುವ ಹಾಗೆ ನಿಮ್ಮ ಭಾವನೆಗಳನ್ನು ಹೊರಹೊಮ್ಮಿವೆ. ಅಭಿನಂದನೆಗಳು
ರವಿ ವರ್ಮ ಹೊಸಪೇಟೆ .
Loading...
Rashmi
on 4 May, 2012 at 5:11 PM
vastavadalli ee bhavanegalu irutta?
beralenike janara manada mataage uliutteno ee bhavanegalu anta annisuttade……..
Beautiful poem…….. Thank you………
ಮಧುರ ನೆನಪುಗಳೆಲ್ಲ
ಸುಖದ ಕನಲಿಕೆಗಳಾಗಿರುವಾಗ
ಯಾವ ನೆರಳೂ ನನಗೆ ಬೇಡ
ನಿನ್ನ ನಿರೀಕ್ಷೆಯ ಬಿಸಿಯೇ ಸುಡಲಿ
ಆ ಭೀಮ ಬಾಹುಗಳ
ಬರಸೆಳೆವ ಅಪ್ಪುಗೆಯ ನೆನಪಿಗೆ
ಇಕೋ ಈ ಮೌನ ರಾತ್ರಿಗಳ ಅರ್ಪಣೆ……….ತುಂಬಾ ಅರ್ಥಪೂರ್ಣವಾದ ಹಾಗು ಮೈನವಿರೇಳಿಸುವ ಹಾಗೆ ನಿಮ್ಮ ಭಾವನೆಗಳನ್ನು ಹೊರಹೊಮ್ಮಿವೆ. ಅಭಿನಂದನೆಗಳು
ರವಿ ವರ್ಮ ಹೊಸಪೇಟೆ .
vastavadalli ee bhavanegalu irutta?
beralenike janara manada mataage uliutteno ee bhavanegalu anta annisuttade……..
Beautiful poem…….. Thank you………