
ಮಂಜುನಾಥ್ ಸಿ ನೆಟ್ಕಲ್
ಇನಿಯ
ಅಂದಗೊಳ್ಳುವ
ನನ್ನ ಕಾತರದ ಬತ್ತಿಗೆ
ತವಕದ ತೈಲವೆರೆದು
ಕಾಲದ ದೀಪ ಉರಿಸಿ
ಕನ್ನಡಿಯನ್ನೇ ಕರಗಿಸಿ
ಸಿಂಗಾರಗೊಂಡ ನಾನು
ಒಂದೇ ಕ್ಷಣದ ಆ
ನಿನ್ನ ಮೆಚ್ಚುಗೆಯ
ಕಣ್ಮಿಂಚಿನ ಬೆಳಕಿಗೆ
ಹಂಬಲಿಸಿ
ನವಿಲಾಗಿ
ನಲಿಯಲು
ಕಾದಿರುತ್ತೇನೆ
ಮರೆತು
ನಿರಾಶೆಗೊಳಿಸಬೇಡ

ಮಂಜುನಾಥ್ ಸಿ ನೆಟ್ಕಲ್
ಇನಿಯ
ಅಂದಗೊಳ್ಳುವ
ನನ್ನ ಕಾತರದ ಬತ್ತಿಗೆ
ತವಕದ ತೈಲವೆರೆದು
ಕಾಲದ ದೀಪ ಉರಿಸಿ
ಕನ್ನಡಿಯನ್ನೇ ಕರಗಿಸಿ
ಸಿಂಗಾರಗೊಂಡ ನಾನು
ಒಂದೇ ಕ್ಷಣದ ಆ
ನಿನ್ನ ಮೆಚ್ಚುಗೆಯ
ಕಣ್ಮಿಂಚಿನ ಬೆಳಕಿಗೆ
ಹಂಬಲಿಸಿ
ನವಿಲಾಗಿ
ನಲಿಯಲು
ಕಾದಿರುತ್ತೇನೆ
ಮರೆತು
ನಿರಾಶೆಗೊಳಿಸಬೇಡ
ವಾವ್ ! ಹೆಣ್ಣ ಗೆಲ್ಲುವ ಸಾಲುಗಳಿವು ,
ಅವಳ ಮನ ಮಿಡಿವ ಸಾಲುಗಳಿವು
ಅವಳ ಕರಗಿಸಿ , ಕಲಕಿಸಿ
ಒಳಸೇರುವ ಮಧುರ ಅನುಭೂತಿ ಇದು .