ನಿರಂಜನರೇ ಬರೆದ ಕಯ್ಯೂರ ಕಥೆ

ಜಿ ಎನ್ ಮೋಹನ್ 

ಚಿರಸ್ಮರಣೆ-
ಯಾರಿಗೆ ಗೊತ್ತಿಲ್ಲ?

ಈ ಕಾದಂಬರಿ ಹಚ್ಚಿದ ಕಿಚ್ಚು ಹಲವರ ಮನೆ, ಮನದಲ್ಲಿ ಇನ್ನೂ ಆರದೆ ಉಳಿದಿದೆ. ಹಲವು ಹೋರಾಟಗಳಿಗೆ, ಹೋರಾಟಗಾರರಿಗೆ ಸ್ಫೂರ್ತಿ ತುಂಬಿದ ಕೃತಿ ಇದು.

ಚಿರಸ್ಮರಣೆ ಕಾದಂಬರಿ ನಡೆದಿದ್ದು ಕೇರಳದ ಕಯ್ಯೂರಿನಲ್ಲಿ. ಚಿರಸ್ಮರಣೆ- ಕಯ್ಯೂರು -ನಿರಂಜನ ಈ ಮೂರೂ ಒಂದನ್ನೊಂದು ಆಗಲಿ ಇರಲಾರದ ತ್ರಿವಳಿಗಳು. ಚಿರಸ್ಮರಣೆಯನ್ನು ಓದಿ ಕಯ್ಯೂರನ್ನು ನೋಡಬೇಕೆಂದು ಹಂಬಲಿಸಿದವರು ಅದೆಷ್ಟೋ.

ಚಿರಸ್ಮರಣೆ ಓದಿದ ಎಲ್ಲರಿಗೂ ಕಯ್ಯೂರಿನ ಬಗ್ಗೆ, ಅಲ್ಲಿನ ರೈತ ವೀರರ ಬಗ್ಗೆ ಒಂದು ಕುತೂಹಲ. ಫಕೀರ್ ಮಹಮದ್ ಕಟ್ಪಾಡಿ ಅವರು ಕಯ್ಯೂರಿಗೆ ಭೇಟಿ ಕೊಟ್ಟು ನಡೆಸಿದ ಅಧ್ಯಯನವನ್ನು ಜನಪ್ರಿಯ ‘ನವಕರ್ನಾಟಕ ಪ್ರಕಾಶನ’ ‘ಕಯ್ಯೂರಿನ ರೈತ ವೀರರು’ ಎನ್ನುವ ಹೆಸರಿನಲ್ಲಿ ಪ್ರಕಟಿಸಿದೆ.

ಈ ಮಧ್ಯೆ ನಿರಂಜನರು ‘ಸಮುದಾಯ’ ಚಳವಳಿಯ ಭಾಗವಾಗಿ ನಡೆಯುತ್ತಿದ್ದ ಸಾಂಸ್ಕೃತಿಕ ಜಾಥಾದ ಸಂದರ್ಭದಲ್ಲಿ ‘ಚಿರಸ್ಮರಣೆಯ ಕಯ್ಯೂರು’ ಎನ್ನುವ ಕೃತಿಯನ್ನು ರಚಿಸಿದ್ದರು. ಚಿರಸ್ಮರಣೆಯನ್ನು ಬರೆದ ಲೇಖಕರೇ ಹಲವು ವರ್ಷಗಳ ಕಾಲ ತಾವು ಕಂಡ, ಕಯ್ಯೂರಿನ ರೈತ ವೀರರ ವಿಚಾರಣೆಯನ್ನು ಖುದ್ದು ಹಾಜರಿದ್ದು ನೋಡಿದ, ಪತ್ರಿಕೆಗಳಿಗೆ ವರದಿ ಮಾಡಿದ, ಕಯ್ಯೂರು ರೈತರ ಮರಣದಂಡನೆ ತಪ್ಪಿಸಲು ಸಹಿ ಸಂಗ್ರಹ ನಡೆಸಿದ ಅನುಭವವನ್ನ ದಾಖಲು ಮಾಡಿದ್ದು ವಿಶೇಷ.

ನಿರಂಜನರು, ಚಿರಸ್ಮರಣೆಯಷ್ಟೇ ನಮ್ಮ ಮನದಲ್ಲಿ ನೆಲೆಗೊಂಡಿರುವ ಲೇಖಕ. ಅವರ ಕೃತಿಗಳು ಹೋರಾಟವನ್ನೂ, ಸಮ ಸಮಾಜಕ್ಕಾಗಿ ತುಡಿಯುವವರನ್ನು ಹುರಿದುಂಬಿಸಿದೆ. ಅವರ ‘ಜ್ಞಾನ ಗಂಗೋತ್ರಿ’ ಸಂಪುಟ ಹಾಗೂ ‘ವಿಶ್ವ ಕಥಾ ಕೋಶ’ ಸರಣಿ ಕನ್ನಡದ ಮನಸ್ಸಿನಲ್ಲಿ ಅಚ್ಚೊತ್ತಿದೆ.

ಅಂತಹ ನಿರಂಜನರೇ ತಾವು ಕಂಡ ಕಯ್ಯೂರನ್ನು ಬಣ್ಣಿಸಿರುವುದನು ಇಂದಿನ ಪೀಳಿಗೆ ಓದಬೇಕು ಎನ್ನುವ ಹಂಬಲ ನಮ್ಮದು. ಜಾಗತೀಕರಣದ ಬಿರುಗಾಳಿಯಲ್ಲಿ ಸಿಕ್ಕಿ ಹೋಗಿರುವ ಈ ದಿನಗಳಲ್ಲಿ ಒಂದು ಚಳವಳಿ ಅರಳುವ, ಬೆಳೆಯುವ, ಹರಡಿ ನಿಲ್ಲುವ, ಉಂಟು ಮಾಡುವ ಪರಿಣಾಮವನ್ನು ತಿಳಿಯಲೇಬೇಕು.

ಜಿ ಎನ್ ಮೋಹನ್ ಅವರು ‘ವಿಜಯ ಕರ್ನಾಟಕ’ಕ್ಕೆ ಬರೆಯುತ್ತಿದ್ದ ಅಂಕಣದಿಂದ ‘ ಚಿರಸ್ಮರಣೆಯ ಪುಟಗಳಲ್ಲಿ ಅಡ್ಡಾಡುತ್ತಾ..’ ಎನ್ನುವ ಬರಹವನ್ನು ಆಯ್ದು ಪ್ರಕಟಿಸಿದ್ದೇವೆ. ಕಯ್ಯೂರು ಜನಮಾನಸದಲ್ಲಿ ಉಳಿದಿರುವ ಬಗೆಗೆ ಇದು ತೋರುಬೆರಳು

ಈ ಕೃತಿ ಪ್ರಕಟವಾದ ೩೭ ವರ್ಷಗಳ ನಂತರ ಮತ್ತೆ ಬೆಳಕು ಕಾಣುತ್ತಿದೆ. ಈ ಕೃತಿಯಲ್ಲಿನ ಭಾಷೆ, ಶೈಲಿ ಎಲ್ಲವೂ ಅಪ್ಪಟ ‘ನಿರಂಜನರ ಶೈಲಿ’.

‍ಲೇಖಕರು avadhi

August 14, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: