
ದಿಲಾವರ್ ರಾಮದುರ್ಗ
ಹೊಸ ವರ್ಷದ ಸ್ಪೂರ್ತಿ ಇವನು..
ಬೆಳ್ಳಾವಿ ಕ್ರಾಸ್ ಹತ್ತಿರ ಒಂದು ಪುಟ್ಟ ಲಾಂಡ್ರಿ ಇಟ್ಟುಕೊಂಡಿರುವ ಈ ಕಾಯಕ ಜೀವಿ ಹೆಸರು ನರಸಿಂಹಮೂರ್ತಿ.
ನನಗೆ ಎಮರ್ಜನ್ಸಿಯಾಗಿ ಒಂದು ಶರ್ಟ್ ಇಸ್ತ್ರಿ ಮಾಡಿಕೊಳ್ಳಬೇಕಿತ್ತು. ಇವನ ಬಳಿ ಹೋದೆ
ಸರ್ ಕಾಟನ್ ಬಟ್ಟೆ ಅರ್ಜಂಟ್ ಆಗಲ್ಲ. ಇದಕ್ಕೆ ನೀರು ಹೊಡೆದು ಇಡಬೇಕು. ಆಮೇಲೆ ಮಾಡಿದರೆ ಇಸ್ತ್ರೀ ನೀಟಾಗಿರುತ್ತೆಂದ.
ಹೇಗಾದರಾಗಲಿ ಹಾಗೇ ಮಾಡಿಕೊಡು ಅಂದೆ. ಆಗಲ್ಲ ಸರ್.
ಇಸ್ತ್ರೀ ಸರಿ ಆಗಲಿಲ್ಲಾಂದ್ರೆ ನನಗೆ ನೆಮ್ಮದಿ ಇರಲ್ಲ ಅಂದ.
ಸರಿ, ಅಂದೆ. ಇಸ್ತ್ರೀ ಸಖತ್ತಾಗಿ ಮಾಡಿಕೊಟ್ಟ. ಅಲ್ಲಿಯೇ ಬಟ್ಟೆ ಬದಲಾಯಿಸಿಕೊಂಡೆ.
ಖುಷಿಯಿಂದ ಇಪ್ಪತ್ತು ರೂಪಾಯಿ ಕೊಟ್ಟೆ. ಸರ್ ಹತ್ತೇ ರೂಪಾಯಿ ಅಂದ
ಪರವಾಗಿಲ್ಲ ಇಟ್ಕೊಳ್ಳಿ ಅಂದೆ.
ಇಲ್ಲ ಸರ್ ನನ್ನ ಕಾಯಕ ಇದು. ಹತ್ತು ರೂಪಾಯಿ ಆಗತ್ತೆ ಅಷ್ಟು ಮಾತ್ರ ತಗೊಳ್ಳೋದು ಅಂದ!
ನಿಮಗೆ ದಿಲ್ ಸೇ ಸಲಾಂ ಅಂದೆ. ನಕ್ಕು ಕೈಬೀಸಿದ.







As soon as a I read the title, I recognised that this is from Dilawar. None else uses Dil se as he uses Dil se!