ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಹೆರಳ ಪರಿಮಳ ನನ್ನೆದೆಯಲ್ಲಿ..

ವಿರಹಿ ಭೂಮಿಯ ಹನಿಗಳು

nagaraja harapanahalli

ನಾಗರಾಜ್ ಹರಪನಹಳ್ಳಿ

-1-
ಇರುಳಲ್ಲಿ ಕನಸು
ಕಟ್ಟುವ ಮನಸು
ಪಕ್ಕದಲ್ಲಿ ಅಣಕಿಸುವ ಬೆಕ್ಕು
ಕೇವಲ ಶಬ್ದಧ್ಯಾನ ಸ್ವಪ್ನದಲಿ
ಬೆಳಗಾಗುತ್ತಲೆ
ಮುಸಿ ಮುಸಿ ನಗುವ ಗುಬ್ಬಚ್ಚಿಗಳು

nude-2-

ಮೌನವೆಂಬ ಆಗಸವ
ಅಪ್ಪಿದ್ದ ಮೋಡ ಕವುಚಿ ಬಿತ್ತು
ವಿರಹಿ ಭೂಮಿ
ಕಚಗುಳಿಯಲಿ ಒದ್ದೆಯಾಯಿತು

-3-

ರಸ್ತೆಯಲಿ ನಡೆದಳು
ಪಕ್ಕದ ಗಿಡಬಳ್ಳಿಗಳು
ಕಣ್ಣುಮಿಟುಕಿಸದೆ ನಿಂತವು
ಬೆಳಕಿಗೆ
ಯಾಕೋ ನಾಚಿಕೆ

-4-

ಯಾಕೋ ಈಚೆಗೆ
ಹಗಲಿಗೆ ಬೇಸರ
ಇರುಳಿಗೆ ಆಕಳಿಕೆ
ನೀನಿಲ್ಲದ ಹಗಲಿರುಳು
ಬೆತ್ತಲು ಆಕಾಶದಲಿ
ಸೂರ್ಯ ಒಬ್ಬಂಟಿ

-5-

ಹಗಲು ರಾತ್ರಿಗಳನ್ನುಂಡು ನಿಶಬ್ದವಾಗಿ
ಮಲಗಿರುವ ಬೆಟ್ಟಸಾಲುಗಳೇ
ಬಯಲು ಕಣಿವೆ ಮುದ್ದಿಸಿ ಸಾಗುವ
ಮಂಜು ಮೋಡಗಳೇ
ಆಕೆಗೆ
ಮುಗಿಲ ಸಂದೇಶವ ಅನುವಾದಿಸಿ ಬಿಡಿ

-6-
ಈಗೀಗ
ಪ್ರತಿ ಮಾತು ಒಲವಿನ ಸಂದೇಶ
ಹೊತ್ತು ತರುತ್ತಿದೆ
ಬದುಕು ಹಿತವೆನಿಸುತ್ತಿದೆ
ಹಕ್ಕಿಯ ಇಂಚರ
ಮಳೆಯ ಧ್ಯಾನಕ್ಕೂ
ಹೊಸ ಅರ್ಥವ್ಯಾಪ್ತಿ ದಕ್ಕುತ್ತಿದೆ…….

-7-

ನಿನ್ನ ಬೆರಳ
ಸ್ಪರ್ಶದಿಂದ
ಕವಿತೆಗೆ ಹೊಸ
ಅರ್ಥ ದಕ್ಕಿತು
ನಿನ್ನ ಹೆರಳ
ಪರಿಮಳ ನನ್ನೆದೆಯಲ್ಲಿ
ಹೊಸ ತರಂಗಗಳ
ಅಲೆ ಎಬ್ಬಿಸಿತು       

‍ಲೇಖಕರು Admin

19 July, 2016

2 Comments

  1. Shama, Nandibetta

    “ನಿನ್ನ ಹೆರಳ
    ಪರಿಮಳ ನನ್ನೆದೆಯಲ್ಲಿ
    ಹೊಸ ತರಂಗಗಳ
    ಅಲೆ ಎಬ್ಬಿಸಿತು

    ವಾಹ್ ಅನ್ನಿಸಿದ ಸಾಲುಗಳು

    • nagraj harapanahalli

      thank u

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading