ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಶಿಕ್ಷಿಸಿದರೂ ನಾನೂ ಹೊತ್ತಿರುವೆ ಶಿಲುಬೆ…

ಗಜಲ್

– ಎಂ ಎಂ ಶೇಕ್ ಯಾದಗಿರಿ

ನನ್ನದಲ್ಲದ ತಪ್ಪಿಗೆ ನಾನೂ ಹೊತ್ತಿರುವೆ ಶಿಲುಬೆ
ಪ್ರಕೃತಿ ಇಟ್ಟ ತಪ್ಪಿಗೆ ನಾನೂ ಹೊತ್ತಿರುವೆ ಶಿಲುಬೆ.
.
ಹೂವ ಹೊಸಗಿ ದಳಗಳೆಲ್ಲಾ ಉದುರಿಸಿದೆ
ನಿನ್ನ ಶಿಕ್ಷಿಸಿದರೂ ನಾನೂ ಹೊತ್ತಿರುವೆ ಶಿಲುಬೆ.
.
ಘಾಸಿಯಾದ ಈ ಬದುಕಿಗೆ ಹಕ್ಕುಂಟೇ ಬದುಕಲು
ಇಲ್ಲವೆನ್ನಲು ಹಕ್ಕಿರದಿದ್ದರೂ ನಾನೂ ಹೊತ್ತಿರುವೆ ಶಿಲುಬೆ .
.
ಆ ಸ್ವರ್ಗ ಆ ನರಕದ ಮಾತುಗಳು ಬೇಡ ನನಗೆ
ದೋಚಿದ ಕನ್ಯತ್ವದ ಹುಡು ಕಾಟದಲಿ ನಾನೂ ಹೊತ್ತಿರುವೆ ಶಿಲುಬೆ.
.
ಕ್ಷಮೆಯೀಗ ಗಾಯಗೊಂಡಿದೆ ಸುಡುತ್ತಿರುವ ಎದೆಯಲ್ಲಿ
‘ಏಸುಕ್ರಿಸ್ತೆ ‘ಯಾಗಿ ಗೋಲ್ಗಥದಲ್ಲಿ ನಾನೂ ಹೊತ್ತಿರುವೆ ಶಿಲುಬೆ.
 

‍ಲೇಖಕರು G

10 January, 2013

1 Comment

  1. hipparagi Siddaram

    …………ನಿಜ…..ಶಿಕ್ಷೆಯೆಂಬುದು ಅಪರಾಧಿಗಳಿಗಾಗಬೇಕು……ಅಧಿಕಾರದ ಅಮಲಿನ….ಅರ್ಥಹೀನ…..ಮೂಢರಿಂದ ಶಕಪುರುಷರು ಇತಿಹಾಸದಲ್ಲಿ ತೊಂದರೆ ಅನುಭವಿಸಿದ್ದು ಮಾನವ ಸಮಾಜದ ದುರಂತ !
    ಗಜಲ್_ಗಳು ಮನಮುಟ್ಟುವಂತಿವೆ !
    ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading