ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ರೂಪದ ಅಮಲು ಹಿಡಿದಿವೆ `ಪ್ರಕಾಶ'ನಿಗೆ

ಗಜಲ್

Prakash B. Jalahalli

ಪ್ರಕಾಶ ಬಿ ಜಾಲಹಳ್ಳಿ

ಮಳೆ ಹನಿಗೂ ಮಂಕು ಕವಿದಿದೆ ನೀನಿಲ್ಲದ ಈ ದಿನ
ಚಳಿಯೊಂದು ಬಿಸಿ ಉಸಿರು ಬೇಡಿದೆ ನೀನಿಲ್ಲದ ಈ ದಿನ

ಆಷಾಡವೆಂದು ಗೊತ್ತಿದ್ದು ಮುರಿದು ಬಿಡೋಣ ಲೋಕದ ನಿಯಮ
ದಾರಿಯಲಿ ಹಾಕಿದ ಹೆಜ್ಜೆಗಳು ಎಲ್ಲಿಯವಳೆಂದು ಕೇಳಿವೆ ನೀನಿಲ್ಲದ ಈ ದಿನ

ಮಾತು, ನಗು, ಮುನಿಸು ಎಲ್ಲವೂ ಕಣ್ಣೊಳಗೆ ಕುಣಿಯುತ್ತಿವೆ ಪ್ರತಿ ಗಳಿಗೆ
ಹಾದಿ ತುಂಬಿದ ನಮ್ಮಿಬ್ಬರ ಕನಸು ಮತ್ತೆ ಮತ್ತೆ ಗರಿ ಬಿಚ್ಚಿವೆ ನೀನಿಲ್ಲದ ಈ ದಿನ

ಎದೆಯ ಸದ್ದಿಗೆ ಭಯವಾಗುತ್ತಿದೆ ನೀನೆಲ್ಲಿ ಬರುವುದಿಲ್ಲವೊ ಎಂದು
ರೂಪದ ಬಿಂಬವಿಡಿದ ಕಣ್ಣುಗಳು ನಿನ್ನ ನೋಡಲು ಕಾದಿವೆ ನೀನಿಲ್ಲದ ಈ ದಿನ

ಎಲ್ಲ ಎಲ್ಲವುಗಳಲ್ಲೂ ನಿನ್ನ ರೂಪದ ಅಮಲು ಹಿಡಿದಿವೆ `ಪ್ರಕಾಶ’ನಿಗೆ
ಖುದಾ ಕರುಣಿಸಿದ ಸ್ವರ್ಗ ಬಿಟ್ಟೆ ನಿನ್ನಿರುವ ನಂಬುವೆ ನೀನಿಲ್ಲದ ಈ ದಿನ

 

‍ಲೇಖಕರು admin

27 December, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading