ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಬುಜದೆತ್ತರಕ್ಕೆ ನಾನು ಬೆಳೆಯಲೇಬಾರದಿತ್ತು…

ಅಪ್ಪ, ನಿನ್ನ ಬುಜದೆತ್ತರಕ್ಕೆ ಬೆಳೆಯಬಾರದಿತ್ತು

ಪ್ರವರ ಕುಂ ವೀ


ಮೊನ್ನೆ ಮೊನ್ನೆಯಷ್ಟೇ
ಕೆನ್ನೆ ಮೇಲೆ ನಿನ್ನ ಐದೂ ಬೆರಳುಗಳು
ಮೂಡಿದ್ದುದನ್ನು ಕನ್ನಡಿಯಲಿ
ನೋಡಿಕೊಂಡು ಅತ್ತುಬಿಟ್ಟಿದ್ದೆ,
ಜೋರಾಗಿ ಬಿಕ್ಕಳಿಸುವಾಗ
ಒತ್ತಾಯವಾಗಿ ನೀರು ಕುಡಿಸಿದ್ದರು..
ಬಳೆ ಸದ್ದು ಕಿವಿಯಲ್ಲಿತ್ತು
ಅಮ್ಮ ಇರಬೇಕು…
 
ರಾತ್ರಿ ಪಾಪಸ್ ಕಳ್ಳಿಯ ನೆರಳು
ನೋಡಿ ದೆವ್ವವೆಂದು ಹೆದರಿದ್ದೆ
ಉಚ್ಚೆ ಹೊಯ್ಯಿಸಲು ನನ್ನ ಜೊತೆ
ನಿದ್ದೆಗಣ್ಣಲಿ ನೀನಿದ್ದೆ,
ಎದುರು ಮನೆ ಐನಾರಪ್ಪನ
ಹೂಸಿನ ಸದ್ದಿಗೆ
ಇಬ್ಬರೂ ಜೋರಾಗಿ ನಕ್ಕಿದ್ದೆವು
 
ಓದುವಾಗ ಪುಸ್ತಕದ ಮೇಲೆ
ಹಾಗೆ ಮಲಗಿದ್ದೆ,
ನೀನೆ ಕೈಯ್ಯಲ್ಲಿ ಬಾಚಿಕೊಂಡು
ಮಂಚದ ಮೇಲೆ ಹಾಕಿ
ಹೊಚ್ಚಿದ್ದೆ,
ನಾನೂ ಬೆಚ್ಚಗೆ ಮಲಗಿದ್ದೆ.
ಅಲ್ಪ ಸ್ವಲ್ಪ ಎಚ್ಚರವಿದ್ದೆ
ಮಲಗಿದವನಂತೆ ನಾಟಕವಾಡಿದ್ದೆ ಅಷ್ಟೆ.
 
ಥೂ ಅದೆಷ್ಟು ಬೇಗ
ಬೆಳೆದುಬಿಟ್ಟೆ,
 
ಕನ್ನಡಿಯಲ್ಲಿ ಕೆನ್ನೆ ಮುಟ್ಟಿ
ನೋಡಿಕೊಳ್ಳುವ ನನ್ನ ಪ್ರತಿಬಿಂಬ
ಗೊಣಗುತ್ತದೆ ನಿನ್ನ ಕೈಬೆರಳಚ್ಚಿಲ್ಲವೆಂದು,
 
ನಿನ್ನ ಬುಜದೆತ್ತರಕ್ಕೆ
ನಾನು ಬೆಳೆಯಲೇಬಾರದಿತ್ತು!
ಬೆಳೆದುಬಿಟ್ಟೆ,
ನಿನ್ನ ಹೆಗಲ ಮೇಲಾಡುವ ಆಸೆ
ಇನ್ನೂ ಇದೆ
ಅಮ್ಮ ಬಯ್ಯುತ್ತಾಳೆ
ಕತ್ತೆ ವಯಸ್ಸಾಯ್ತೆಂದು
ಅದಕ್ಕೇ ಸುಮ್ಮನಿದ್ದೇನೆ
 
ಇಷ್ಟು ಬೇಗ ಬೆಳೆಯಬಾರದಿತ್ತು
ನಾನು
ನಿನ್ನ ಬುಜದೆತ್ತರಕ್ಕೆ
 

‍ಲೇಖಕರು avadhi

5 March, 2013

26 Comments

  1. Raghunandan K

    ಇಷ್ಟವಾಯಿತು…

  2. mmshaik

    baalya sundara nenapu …idi namma badukina sundara kaayya..ollyea kavana!!!

  3. chalam

    ತುಂಬಾ ಆಪ್ತವಾದ ಕವಿತೆ…

  4. Sowmya

    Chenda ide….ishta aytu Pravara….

  5. Sandhya, Secunderabad

    Pravara,
    Chanda baredeeri…

  6. Kavya Kadame

    ಚೆನ್ನಾಗಿದೆ, ಆತ್ಮ ತಟ್ಟುತ್ತದೆ.

  7. Shrivatsa Kanchimane

    ಇಷ್ಟವಾಯಿತು…

  8. ganigar n s

    ಚನಾಗಿದೆ ಸರ್ ಪ್ರತಿ ಮಕ್ಕಳ ಮಹದಾಸೆ ಇದು. ಪ್ರೀತಿ ಅಂದ್ರೆ ಹೀಗೆ

  9. -ರವಿ ಮೂರ್ನಾಡು

    ಕವಿತೆ ಬೆಳೆದಿದೆ. ಅಪ್ಪನೂ ಹೀಗೆ ತಾನು ಬೆಳೆದ ಬಗ್ಗೆ ಕವಿತೆ ಬರೆಯಬಹುದು. ಬೆಳೆಸುವ ಮತ್ತು ಬೆಳೆದ ಆಟವೇ ಜೀವನ
    ಮೂಡಿಸಿದ್ದುದ್ದನ್ನು = ಮೂಡಿಸಿದ್ದನ್ನು ( ಕಾವ್ಯಕ್ಕೆ ಅರ್ಥ ತುಂಡರಿಸದೆ ಪದಗಳು ಕಡಿಮೆಯಾದಷ್ಟು ಒಳ್ಳೆಯದು)
    ಬುಜ = ಭುಜ
    ಚೆನ್ನಾಗಿ ಪ್ರತಿಮೆ ಬೆಳೆಸಿದ್ದೀರಿ.

    • ಜಗದೀಶ್

      ತುಂಬಾ ಚನ್ನಾಗಿದೆ

  10. Jayalaxmi Patil

    🙂 ಪ್ರವರ,ಅಪ್ಪನ ಕುರಿತು ಕನ್ನಡದಲ್ಲಿ ಕವನಗಳು ವಿರಳ. ಖುಷಿಯಾಯ್ತು ಕವನ ಓದಿ. 🙂

  11. Gopaal Wajapeyi

    ಅಪ್ಪನನ್ನು ಕಂಡಿರದ ನನಗಿಂತ ಅನುಭವವೂ ಇಲ್ಲ, ಅನಿಸಿಕೆಯೂ ಇಲ್ಲ… ಆದರೂ, ಪ್ರವರ ಅಪ್ಪ ಅಂದರೆ ಏನು ಅಂತ ಒಂದು ಚಿತ್ರವಂತೂ ನನ್ನಲ್ಲಿ ಮೂಡುವಂತೆ ಮಾಡಿದಿ ಹುಡಗಾ…

  12. VEDA

    Chendada kavana Pravara

  13. pravara

    ರವಿ ಮೂರ್ನಾಡ್ ಅವರೆ,
    ಖಂಡಿತಾ ಕವಿತೆ ಬರೆಯುವಾಗ ಪಾಲಿಸುತ್ತೇನೆ, ಸಲಹೆಗೆ ಧನ್ಯವಾಗಳು:)

  14. chetana y

    ನನ್ನ ಬಾಲ್ಯದ ದಿನಗಳ ನೆನೆಸಿತು ನಿಮ್ಮ ಕವಿತೆ..
    ಪ್ರವರ ಅಪ್ಪನ ಪ್ರೀತಿಯ ವರ್ಣಿಸಿದ ಬಗೆ ಚೆನ್ನಾಗಿದೆ…

  15. Beluru Raghunaandan

    Good one…….kavite chennagide

  16. kum.veerabhadrappa

    pravara, ninna kavitheyannu odide, karulalli kattariyaadidantha anubhava, ninna kenne melina nanna berala gurutugalannu upasamharisikolluvantiddare! neenu ninnannu hettavara ettarakkoo meeri beleyabeku, idu ella hettavara aase. gaayagalu kavitheya roopa padedaagale avugala maalakaru hemme paduvudu, allave?
    kumvee

    • ಸುಧಾ ಚಿದಾನಂದಗೌಡ

      ಪ್ರವರನ ಕವಿತೆಯಷ್ಟೇ ನಿಮ್ಮ ಪ್ರತಿಕ್ರಿಯೆಯೂ ಸೊಗಸಾಗಿದೆ ಸರ್.
      ಕಣ್ಣಲ್ಲಿ ನೀರಾಡುವಷ್ಟು ಆಪ್ತವೆನಿಸಿತು.

  17. bharathi

    pravara yaako ninna kavithe odi gantalu bigida haagaaythu kano …

  18. D.V.P

    HRUDAYA SPARSHI KAVITE PRAVARANNA., ELLA HAREYADA MANAGALA BHAVAVANNU KAVITEYAGI HARAVIDDIRI. SHUBHAVAGALI.

  19. nagraj.harapanahalli

    ರಾತ್ರಿ ಪಾಪಸ್ ಕಳ್ಳಿಯ ನೆರಳು
    ನೋಡಿ ದೆವ್ವವೆಂದು ಹೆದರಿದ್ದೆ
    ಉಚ್ಚೆ ಹೊಯ್ಯಿಸಲು ನನ್ನ ಜೊತೆ
    ನಿದ್ದೆಗಣ್ಣಲಿ ನೀನಿದ್ದೆ,
    ಎದುರು ಮನೆ ಐನಾರಪ್ಪನ
    ಹೂಸಿನ ಸದ್ದಿಗೆ
    ಇಬ್ಬರೂ ಜೋರಾಗಿ ನಕ್ಕಿದ್ದೆವು
    beauty of the poem

  20. lakshmi

    tumbha chennagide nimma kavite, esttavayitu nanage….

  21. RAJ

    ಕವಿತೆ ತುಂಬಾ ಚೆನ್ನಾಗಿದೆ ಸಾರ್

  22. Sunil Rao

    just dreamt ma dada
    and his love filled arraogance
    ….
    just loved it pravara…one of ur exellent’s

Trackbacks/Pingbacks

  1. ನಿನ್ನ ಕೆನ್ನೆ ಮೇಲಿನ ನನ್ನ ಬೆರಳ ಗುರುತುಗಳನ್ನು ಉಪಸಂಹರಿಸಿಕೊಳ್ಳುವಂತಿದ್ದರೆ.. « ಅವಧಿ / avadhi - [...] ನಿನ್ನೆ ಅವಧಿಯಲ್ಲಿ ಪ್ರವರ ಕುಂ ವೀ ಬರೆದ ಅಪ್ಪ, ನಿನ್ನ ಬುಜದೆತ್ತರಕ್ಕೆ ಬೆಳೆಯಬಾರದಿ... ಕವಿತೆ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading