ಮಾಹಿ
ಮೂಲ : Christine Rigden
ನಾನು, ನಿನ್ನ ನೋವನ್ನು ಅನುಭವಿಸಬಲ್ಲೆ
ಅದನ್ನೇ ಸ್ಪರ್ಶಿಸಿ ಕರಗಿ ಹೋಗುವ ಹಾಗೆ ಮಾಡಲು ಹಾತೊರೆಯುತ್ತೇನೆ
ಹೌದು
ನನಗೆ ಗೊತ್ತಿದೆ
ನಾನು ನಿನ್ನ ನೋವನ್ನು ನೋಡುವುದು ಅಸಾಧ್ಯ
ಆಳ ಅಗಲವಂತೂ ದೂರದ ಮಾತು
ಕತ್ತಲೆ ಎಷ್ಟು ಆವರಿಸಿದೆಯೆಂದು
ನನಗೇನು ಗೊತ್ತು?
ನನಗೇನು ಗೊತ್ತಿಲ್ಲ,
ಹರಿತ ಚೂರಿ
ನಿನ್ನ ಆತ್ಮಕ್ಕೆ ಎಷ್ಟು ಆಳಕ್ಕಿಳಿದಿದೆಯೆಂದು?
ನೋವಿನ ದಾರಿ ನಿನ್ನದು
ನನ್ನದೆಂದೂ ಅಲ್ಲ
ಆದರೂ,
ನನಗೆ ಗೊತ್ತಿದೆ
ಇಂತಹ ನೋವಿನ ಕಂದರಗಳ
ಆಳ….
ಹೃದಯದಲ್ಲಿ ಇನ್ನೂ ಉಳಿದಿವೆ
ಗಾಯದ ಕಲೆಗಳು
ಆದಾಗ್ಯೂ,
ನಿನ್ನ ನೋವನ್ನೇ ನಡೆಯಬಲ್ಲೆ
ನಾನು ಬಯಸಿದರೆ,…
ನನಗಾಗದು! ಈ ಕತ್ತಲೆ
ಆದರೂ
ಕೈಹಿಡಿಯಬಯಸುತ್ತೇನೆ
ನೋವಿನ ತೀಕ್ಷ್ಣತೆಯನ್ನು
ಕುಗ್ಗಿಸಲು
ಇದೆಲ್ಲ ನಿನಗೆ ಸ್ವಲ್ಪವೇ
ಸಹಾಯಕ್ಕೆ ಬರಬಹುದು ಎನ್ನುವ
ಕಾಳಜಿ ಮಾತ್ರ ನನ್ನದು






0 Comments