ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ನೆನಪ ಅಳಿಸಲಾಗಲಿಲ್ಲ…

ದೇವರಾಜ್ ಹುಣಸಿಕಟ್ಟಿ

ಕಂಗಳು ತುಂಬಿ ಸುರಿಸಿದ ಕಂಬನಿ ನಿನ್ನ ನೆನಪ ಅಳಿಸಲಾಗಲಿಲ್ಲ
ಗಂಟಲ ಪಸೆಯಾರಿ ಬಿಕ್ಕಿದ ಬಿಕ್ಕಳಿಕೆ ನಿನ್ನ ನೆನಪ ಅಳಿಸಲಾಗಲಿಲ್ಲ

ಅದೆಷ್ಟು ಲೋಕ ಸುತ್ತಿ ಹೃದಯದ ಗಾಯಕ್ಕೆ ಮುಲಾಮು ಹುಡುಕಿದೆ ಗೊತ್ತೇ
ಅದ್ಯಾವ ಮಠ ಮಂದಿರದ ದೇವರಿಂದಲೂ ನಿನ್ನ ನೆನಪ ಅಳಿಸಲಾಗಲಿಲ್ಲ

ರಚ್ಚೆ ಹಿಡಿದ ಮಗುವಂತೆ ಹೃದಯದ ಹಾಳೆಯಲಿ ಚಿತ್ರ ಬಿಡಿಸಿ ಹೋದೆ
ಕೊಚ್ಚಿ ಹೋಗುವಷ್ಟು ಸುರಿದ ಮಳೆಯಿಂದಲೂ ನಿನ್ನ ನೆನಪ ಅಳಿಸಲಾಗಲಿಲ್ಲ

ಬಟವಡೆಯಾಗದೆ ಉಳಿದ ರಾಶಿ ಮಾತಿವೆ ಎದೆಯ ಕಪಾಟಿನಲ್ಲಿ ಗೊತ್ತೇ
ಅದೆಷ್ಟು ಮಿಂದೆದ್ದರು ಗಂಗೆ ತುಂಗೆ ಯಮುನೆಯಲಿ ನಿನ್ನ ನೆನಪ ಅಳಿಸಿಲಾಗಲಿಲ್ಲ

‘ದೇವ’ರಾಗುವುದೆಂದರ ಮರಳಿ ಬಾರದೂರಿಗೆ ಹೋಗುವುದೇ ಇರಬೇಕಲ್ಲವೇ..?
ಪ್ರೀತಿಯೆಂದ್ರ ಬೇರೆನಲ್ಲ ನನ್ನ ಮರಣಶಯ್ಯವರೆಗೂ ನಿನ್ನ ನೆನಪ ಅಳಿಸಲಾಗಲಿಲ್ಲ

‍ಲೇಖಕರು Admin

23 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading