ಅಭಿಷೇಕ ಬಳೆ ಮಸರಕಲ್
ನಿನ್ನ ನೆನಪಿನ
ಬೆಳಕಲಿ ಕಳೆದುಕೊಂಡ ಖುಷಿಯ
ಹುಡುಕುತ್ತಿದ್ದೇನೆ
ದಕ್ಕಿದಷ್ಟೂ ದಕ್ಕಲಿ
ಹಾಗೆ ತುಟಿಯ ಮೇಲೆ ತಂದುಕೊಂಡು ಮುಗುಳ್ನಗುತ್ತೇನೆ
ನೀನೊಲಿದರು ಒಲಿಯದಿದ್ದರೂ ಸದಾ ನಿನ್ನ ಧ್ಯಾನದಲ್ಲಿರುವುದೇ ಪ್ರೇಮವೆಂದು ಭಾವಿಸಿದ್ದೇನೆ
ನಿನ್ನ ಉಸಿರು ತಾಕಿದ ಗಾಳಿ ನನ್ನ ಮನೆ ಮುಂದೆ ಹಾದು ಹೋಗಬಹುದು
ಅದರ
ಸ್ವಾಗತಕ್ಕೆಂದೆ ನಾನು ಕಾದು ಕುಳಿತಿದ್ದೇನೆ
ಮನದ ಅಂಗಳದಲ್ಲಿ ನೋವಿನ ಸಸಿಗಳು ಟಿಸಿಲೊಡಿಯುತ್ತಿವೆ ಕಣ್ಣ ಮಳೆಗೆ
ಹಾಯಾದ ಈ ನೋವುಗಳನ್ನು ಅಷ್ಟೇ ಅಕ್ಕರೆ ಕಾಳಜಿಯಿಂದ ಬದುಕ ಜೋಳಿಗೆಗೆ ತುಂಬಿಕೊಳ್ಳುತ್ತೇನೆ
ಪ್ರೀತಿ ಸೋತಿರುವೆ ಇನ್ನು ಮುಂದೆ ನೀನು ಒಂಟಿ ಎಂದರು
ನೀನು ಬಿಟ್ಟು ಹೋದ ನೆನಪುಗಳಿವೆ
ಎದೆಯಲಿ ಸಣ್ಣದೊಂದು ನೋವಿದೆ
ಸಾಕು
ಬದುಕುತ್ತೇನೆ ಎಂದೆ ಸುಮ್ಮನಾದರು
0 ಪ್ರತಿಕ್ರಿಯೆಗಳು