ಪ್ರಿಯೆ..
– ಕೆ ಎಸ್ ಅಪ್ಪಣ್ಣ
ಪ್ರಿಯೆ,
ನಿನ್ನ ಮನೆಯೆದುರು ನಿನಗಾಗಿ ಕಾದು ನಿಂತಿದ್ದೇನೆ..
ಗೊತ್ತು ನೀ ಒಳಗಂತೂ ಕರೆಯಲಾರೆ..
ಬೇಕಾದರೆ ಬಯ್ದು ಬಾಗಿಲು ಮುಚ್ಚಿಬಿಡು..
ತಡೆದುಕೊಳ್ಳುತ್ತೇನೆ..
ನಿನ್ನ ಪ್ರೇಮಕ್ಕಾಗಿ ಹಂಬಲಿಸುತ್ತಿದೆ ಜೀವ..
ಪ್ರೀತಿಸಬೇಡ ಬಿಡು..ಒಮ್ಮೆ ಮಾತಾಡಿಸಿದರೂ ಸಾಕು ..
ನಿನ್ನ ಮನಸನ್ನು ತಾಕಿದ ಖುಷಿಯಲ್ಲೇ
ಬದುಕಿಕೊಳ್ಳುತ್ತೇನೆ..
ನಿನ್ನೊಂದು ಕಿರುನಗೆಗೆ ಕಾತರಿಸುತ್ತಿದ್ದೇನೆ..
ಬೇಕಾದರೆ ಉಗಿದು ಆಚೆಗಟ್ಟಿಬಿಡು
ಅವಮಾನ ತಾನೇ…
ಅವಡುಗಚ್ಚಿ ನುಂಗಿಬಿಡುತ್ತೇನೆ..
ನಿನ್ನ ಪ್ರೇಮವ ಬೇಡುತ್ತಿವೆ..ನನ್ನ ಕಂಗಳ ಭಿಕ್ಷೆಬಟ್ಟಲು
ನಿರಾಕರಿಸಿ ಸರಿದುಬಿದು ,ಒಪ್ಪಿಕೊಳ್ಳುತ್ತೇನೆ..
ಕಲ್ಲುಹೃದಯಿಯೆಂದು ನಕ್ಕು
ಸುಮ್ಮನಾಗುತ್ತೇನೆ..
ನಿನ್ನೊಂದು ಅಕ್ಕರೆಯ ನೋಟಕ್ಕೆ
ಪರಿತಪಿಸಿದೆ..ಹೃದಯ..
ಸುಮ್ಮನೆ ದಾಟಿ ಸಾಗುವ ಮುನ್ನ
ಒಮ್ಮೆ ಪ್ರೀತಿಯಲಿ ತಿರುಗಿ ನೋಡು..ತೃಪ್ತನಾಗುತ್ತೇನೆ..
ನಿನ್ನ ಬೆರಳ ಮೊನೆಯನೊಮ್ಮೆ ತಾಕುವಾಸೆ..
ಬೇಕಾದರೆ ಕಪಾಳಕ್ಕೆ ಹೊಡೆದುಬಿಡು
ನಿನ್ನ ಮೊದಲ ಉಡುಗೊರೆಯೆಂದು
ನೆನಪಿನಲ್ಲಿ ಜೋಪಾನ ಮಾಡುತ್ತೇನೆ..
ಆದರೆ ಹುಡುಗೀ,
ಹೀಗೆ ನೋಡಬೇಡ ಖಾಲಿ ಕಣ್ಣುಗಳಿಂದ….
ನಿನ್ನ ನಿರ್ಭಾವುಕ ನೋಟವ ಸಹಿಸಲಾರೆ.
ಕಡೆಗಣಿಸಬೇಡ ನನ್ನ , ನನ್ನಿರವನ್ನೇ ಅಲ್ಲಗೆಳೆವಂತೆ..
ನಿನ್ನೀ ನಿರ್ಲಕ್ಷ್ಯ ತಾಳಲಾರೆ…
ಪ್ರೇಮದಾಣೆ…
ನಾ ಬದುಕಲಾರೆ….]]>





0 Comments