ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ತಪ್ಪಿನಿಂದ ನೀನೆ ಬುದ್ಧನಾಗು..

ಕವಿತೆಗಳು

ಸಿ ವಿ ಶೇಷಾದ್ರಿ ಹೊಳವನಹಳ್ಳಿ

ತಾನು ಬರಲು ಆಗದ ದೇವನು ತಾನು ಬರಲು ಆಗದ ದೇವನು ಮಗುವಿನ ರೂಪದಿ ಬಂದನು. ಮಾತು ಆಡಲು ಆಗದ ಅವನು ಹಾಡಿನ ಜಾಡನು ಹಿಡಿದನು. ರೆಪ್ಪೆಯ ತೆಗೆಯಲು ಸಾಧ್ಯವಾಗದೆ ಹೂವಿನ ದಳವನು ದಬ್ಬಿದನು. ನಾಲಿಗೆ ಈಚೆ ತೆಗೆಯಲಾಗದೆ ಹಣ್ಣಿನ ಕಣ್ಣನು ತಬ್ಬಿದನು. ತಾನೆ ಬಂದು ಸಂತೈಸಲಾಗದೆ ಮಾತೆಗೆ ಮೊಲೆಯ ನೀಡಿದನು. ತಾನೆ ಬಂದು ತೂಗಲಾಗದೆ ಎಲ್ಲರಿಗೂ ಕೈ ಕೊಟ್ಟನು. ******* ಇದ್ದ ಸುದ್ದಿ ಹೇಳುತ್ತೇನೆ ಸಿದ್ಧನಾಗು . ಇದ್ದ ಸುದ್ದಿ ಹೇಳುತ್ತೇನೆ ಸಿದ್ಧನಾಗು . ನಿನ್ನ ತಪ್ಪಿನಿಂದ ನೀನೆ ಬುದ್ಧನಾಗು. ದಡದಲ್ಲಿ ನಿಂತರೆ ಸಿಗುವುದೆ ಸಾಲಿಗ್ರಾಮ? ಅಳಿಲನ್ನು ತಾತ್ಸಾರ ಮಾಡಿದನೆ ರಾಮ? ಬಿದ್ದ ಹಣ್ಣಿಗಿಂತ, ಕಿತ್ತ ಹಣ್ಣೆ ಚೆನ್ನ. ನೋವನ್ನೆತಿರುತಿರುಗಿ ನೋಡದಿರು. ನೆರಳಿದ್ದರೆ ಕೂತು ಅನುಭವಿಸು ಆನಂದ. ದೀಪವೇ ಬಂದು ಸುಟ್ಟಂತೆ ನಿಟ್ಟುಸಿರಿಡಬೇಡ. ಇದ್ದರೆತೇದು ಬಿಡು ಶ್ರೀಗಂಧ. ಹೆಜ್ಜೆಗಳನ್ನು ದಾರಿ ಜಜ್ಜುತ್ತಿದೆಯೇ? ಬೆಟ್ಟವಿದ್ದರೆ ನೋಡು ಕಲ್ಪಿಸಿಕೊ ಕೋಟೆ. ಆಡಲಿಬಿಡು ಹಾಲು ವಿಷದೊಡನೆಚಕ್ಕಂದ. ಇದ್ದರೆ ಹೂಣಿ ಬಿಡು ವಾಟೆ.  ]]>

‍ಲೇಖಕರು G

20 September, 2012

2 Comments

  1. Mohan V Kollegal

    ಚೆನ್ನಾಗಿವೆ… ಇಷ್ಟವಾಯಿತು… 🙂

  2. mmshaik

    nice…one

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading