ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಗಂಧ ಗಾಳಿಯಲಿ ಸುಳಿದಿದೆ..

sphoorti girish

ಸ್ಫೂರ್ತಿ ಗಿರೀಶ್ 

 

ಖಾಲಿ ಚೇರು…

 

ಈಗಷ್ಟೇ ಎದ್ದುಹೋದ
ಕುರುಹಿಗೆ
ನಿನ್ನ ಗಂಧ
ಗಾಳಿಯಲಿ ಸುಳಿದಿದೆ

pair paintingಸಂಜೆಯ ಹೂ
ನಿನ್ನ ಸ್ಪರ್ಶಕ್ಕೆ
ಮರಳಿ
ಮೊಗ್ಗಾಗಿದೆ

ನಿನ್ನ ಕಾಲ್ಬೆರಳು
ಕೆದರಿಹಾಕಿದ್ದ
ಮರಳುಗುಪ್ಪೆಯಲಿ
ಇರುವೆಗಳು ಹೊಸಕಾವ್ಯ ಬರೆದಿವೆ

ಮರದ ಎಲೆಗಳು ಬಾಗಿ
ನೀನು ಕುಳಿತುಹೋದ
ಖಾಲಿ ಚೇರುಗಳ ಸಂತೈಸಿ
ನಿಟ್ಟುಸಿರು ಕೇಳುತ್ತಿವೆ
ನನಗೆ ಕಿವಿಗಳಿಲ್ಲ
ಅವಕ್ಕೆ ಹೃದಯವಿಲ್ಲ.

ಗುಲಾಬಿಗೆ

ಎಲ್ಲಾ ಮುಳ್ಳುಗಳನ್ನು ದಾಟಿ ಬರುವೆ
ಗುಲಾಬಿ
ಕೂಳೆಯ ಪಸೆಯಲ್ಲಾದರು
ಜೀವ ಜಿಲ್ ಅನಿಸುವಂತೆ ಅರಳಿಬಿಡು
ಒಮ್ಮೆ ಕಣ್ಣು ತುಂಬಿಕೊಳ್ಳುವೆ
ಎದೆಗೆ ಒತ್ತಿಕೊಳ್ಳುವೆ

ಈಗ ಯುದ್ಧ ಮುಗಿದಿದೆ ನೋಡು
ನನ್ನ ಕೌದಿ ಹಚ್ಚ ಬಿಳಿಯದು
ಎಲ್ಲಾ ಗೆರೆಗಳನ್ನು ದಾಟಿ ಬರುವೆ ಗುಲಾಬಿ
ಕೂಳೆಯ ಪಸೆಯಲ್ಲಾದರು
ಜೀವ ಜಿಲ್ ಅನಿಸುವಂತೆ ಅರಳಿಬಿಡು
ಒಮ್ಮೆ ಕಣ್ಣು ತುಂಬಿಕೊಳ್ಳುವೆ
ಎದೆಗೆ ಒತ್ತಿಕೊಳ್ಳುವೆ

ಎಷ್ಟು ಆಸೆ ಎಷ್ಟು ಮೋಹ
ಮಾಯೆಯ ಬಲೆ ಈ ಲೋಕ
ಎಲ್ಲಾ ಕವಲು ದಾಟಿಬರುವೆ ಗುಲಾಬಿ
ಕೂಳೆಯ ಪಸೆಯಲ್ಲಾದರು
ಜೀವ ಜಿಲ್ ಅನಿಸುವಂತೆ ಅರಳಿಬಿಡು
ಒಮ್ಮೆ ಕಣ್ಣು ತುಂಬಿಕೊಳ್ಳುವೆ
ಎದೆಗೆ ಒತ್ತಿಕೊಳ್ಳುವೆ

‍ಲೇಖಕರು Admin

3 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading