ನಿನ್ನೆ ಅವಧಿಯಲ್ಲಿ ಪ್ರವರ ಕುಂ ವೀ ಬರೆದ ಅಪ್ಪ, ನಿನ್ನ ಬುಜದೆತ್ತರಕ್ಕೆ ಬೆಳೆಯಬಾರದಿತ್ತು ಕವಿತೆ ಪ್ರಕಟವಾಗಿತ್ತು.
ಅದಕ್ಕೆ ಕುಂ ವೀರಭದ್ರಪ್ಪ ಅವರು ಪ್ರತಿಕ್ರಿಯಿಸಿದ್ದು ಹೀಗೆ.
ಇದು ಕುಂ ವೀ ಅವರ ಪ್ರತಿಕ್ರಿಯೆ ಅನ್ನುವುದಕ್ಕಿಂತಾ ಹೆಚ್ಚಾಗಿ ಒಬ್ಬ ತಂದೆಯ ಮನದ ಮಾತುಗಳಾಗಿ ಮನಸ್ಸನ್ನು ತಟ್ಟುತ್ತದೆ ….
ಇದನ್ನು ನೀವೂ ಓದಲಿ ಅಂತ…..

ಪ್ರವರ,
ನಿನ್ನ ಕವಿತೆಯನ್ನು ಓದಿದೆ …
ಕರುಳಲ್ಲಿ ಕತ್ತರಿಯಾಡಿದಂತಹ ಅನುಭವ ..
ನಿನ್ನ ಕೆನ್ನೆ ಮೇಲಿನ ನನ್ನ ಬೆರಳ ಗುರುತುಗಳನ್ನು ಉಪಸಂಹರಿಸಿಕೊಳ್ಳುವಂತಿದ್ದರೆ..
ನೀನು ನಿನ್ನನು ಹೆತ್ತವರ ಎತ್ತರಕ್ಕೂ ಮೀರಿ ಬೆಳೆಯಬೇಕು, ಇದು ಎಲ್ಲಾ ಹೆತ್ತವರ ಆಸೆ.
ಗಾಯಗಳು ಕವಿತೆಯ ರೂಪ ಪಡೆದಾಗಲೇ ಅವುಗಳ ಮಾಲಕರು ಹೆಮ್ಮೆ ಪಡುವುದು …
ಅಲ್ಲವೇ?
-ಕುಂ ವೀ






ಆಹಾ…! ‘ನಿನ್ನಂಥ ಅಪ್ಪ ಇಲ್ಲಾ..” ಎಂಬುದು ಈಗ ನಿಜಕ್ಕೂ ಅರ್ಥಪೂರ್ಣ… ಪ್ರವರ ನೀನು ಪುಣ್ಯವಂತ.