ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಕಾರಣವಿಲ್ಲದ ನಗುವಿಗೆ ಕ್ಷಮೆಯಿರಲಿ..

ಕವನ

-ಚಲಂ

ನಿಲ್ಲುವುದೇ ಇಲ್ಲ ಎಂಬ

ಮಳೆಯಲ್ಲಿ ಬೆಚ್ಚನೆ

ಮನೆಯಲ್ಲಿ ಕೂರುವ

ಸಂತಸವನ್ನು ಕೊಂದುಕೊಂಡ

ಹೃದಯದಲ್ಲೀಗ ಯಾವುದೇ ಬಡಿತವಿಲ್ಲ

ಮಳೆಯಲ್ಲಿ ಹೊರಗೋಗುವ ಧೈರ್ಯ

ಮಾಡಿದ್ದಕ್ಕಾಗಿ ಕ್ಷಮೆಯಿರಲಿ

ದಾರಿಯಲ್ಲಿ ಸಿಕ್ಕವರೊಂದಿಗೆಲ್ಲ

ದಿನವೆಲ್ಲಾ ಹರಟುವ,

ಮುಗಿಯದಿರುವ ನಗುವ ಬಂಧಿಸಿ

ಏನನ್ನೂ ಕೇಳದೆ ಅವರಿಗೆ

ಮತ್ತೊಬ್ಬನನ್ನು ಹುಡುಕುವಂತೆ

ಮಾಡಿದ್ದಕ್ಕಾಗಿ ಕ್ಷಮೆಯಿರಲಿ

ಸಂದ ಭಾವನೆಗಳ ಬಂಧ ಬೆಸೆಯುತ್ತಾ

ಊರಿನ ಜನಗಳ ಸೆಳೆಯುತ್ತಾ

ಅವರೇ ಕೊಟ್ಟ ಮಾತುಗಳ ಉಸಿರಾಗಿಸಿ

ಈಗ ಒಂಟಿಯಾಗಿ ನಾನೇ

ಬಂಧಿಯಾಗಿದುದಕ್ಕೆ ಕ್ಷಮೆಯಿರಲಿ

ನಿನ್ನ ಸೋಲಿನ ಹಠಕ್ಕೆ ಬಿದ್ದು

ಇದ್ದ ಗೆಲುವುಗಳ ಬಿಕರಿಗಿಟ್ಟೆ

್ಟ ಸೋಲನ್ನೇ ಅಪ್ಪಿ ಮುದ್ದಾಡುವ ಅದರ

ಗೆಲುವಿನ ಮುಖವಾಡವನ್ನು

ಗುರುತಿಸಲಾಗದಿದ್ದಕ್ಕಾಗಿ ಕ್ಷಮೆಯಿರಲಿ

ದಿನವೆಲ್ಲಾ ತೊದಲ ನುಡಿದ

ಮಕ್ಕಳ ನಡುವೆ ಹೊಸದಾಗಿ

ಎದ್ದು ಬರುತ್ತಾ ಅವೇ ಮಕ್ಕಳು

ಸ್ವಷ್ಟ ಮಾತನಾಡಿದಾಗ

ಸಂತಸ ಪಡದಿದ್ದುಕ್ಕಾಗಿ ಕ್ಷಮೆಯಿರಲಿ

ಬೆಕ್ಕನ್ನೆದೆಗವಚಿಕೊಂಡು ಬೆನ್ನ ಬಿಲ್ಲಾಗಿಸಲು ಬಿಡದೆ

ಎದೆಯ ಕೊರೆದು ಗುಂಡಿಗೆಯ

ಪರಚಲು ಅನುವು

ಮಾಡಿಕೊಟ್ಟಿದ್ದಕ್ಕಾಗಿ ಕ್ಷಮೆಯಿರಲಿ

ಅದೇ ದಾರಿಯಲಿ ತಿರುಗುತ್ತಾ

ಅಲ್ಲಲ್ಲೇ ಮನೆಮಾಡಿಕೊಂಡು

ಅಲೆಯುವವನಿಗೆ ಮನೆಕೊಟ್ಟ

ಅಮ್ಮಂದಿರ ಮನೆ ದಾರಿ ಬಿಟ್ಟು

ನಿನ್ನ ಮನೆಯ ದಾರಿಯಲಿ ಬಂದುದಕ್ಕೆ

ದಯವಿಟ್ಟು ಕ್ಷಮೆಯಿರಲಿ

ನಿಲ್ಲಲು ನೆಲಕೊಟ್ಟ ಭುವಿಯ

ಋಣವ ಮರೆತ ನನ್ನಲಿ.ಏನೂ ಇಲ್ಲ

ಎಂದು ಎದೆಗೆ ಜಾಡಿಸಿದ

ನಿನ್ನ ಮನೆಯ ದಾರಿಯಲಿ

ಇನ್ನೆಂದು ಬರುವುದಿಲ್ಲ

ಇನ್ನೇನೂ……ವಿಧಿಯಿಲ್ಲ

ನಿನ್ನ ಕಾರಣವಿಲ್ಲದ ನಗುವಿಗೆ ಕ್ಷಮೆಯಿರಲಿ

 

‍ಲೇಖಕರು G

23 December, 2012

1 Comment

  1. hethur nagaraj

    superb

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading