ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನಿನ್ನ ಅದಿಮ ಸ್ಥಿತಿಯಲ್ಲಿ ಕಂಡವನು ನಾನು' – ವಿದ್ಯಾಶಂಕರ ಹರಪನಹಳ್ಳಿ

ವಿದ್ಯಾಶಂಕರ್ ಹರಪನಹಳ್ಳಿ

ನೀ ಕತ್ತಲಿಂದ ಹೊರಬರುತಿದ್ದೆ
ಆಗ ನಿನ್ನ ಕೈಯಲ್ಲಿ ಪುಷ್ಪಗುಚ್ಛ
ಈಗ ಜನರ ಕಕರು-ಮಕರು ಮಾತು
ನಿನ್ನ ನಡತೆಯ ಇತಿಹಾಸದ ಸುತ್ತಾ

ನಿನ್ನ ಅದಿಮ ಸ್ಥಿತಿಯಲ್ಲಿ ಕಂಡವನು ನಾನು
ಕೋಪದಿ ಕಂಪಿಸಿದೆ, ಮಂದಿ ನಿನ್ನ ಆಡಿಕೊಂಡಾಗ
ಕೊಂಚ ತಂಗಾಳಿ ಸುಳಿದು ಮನಸು ಮೃದುವಾಗಲಿ
ಈ ಜಗ ಎಲೆಯಂತೆ ಒಣಗಿ ಮುರುಟಿ ಹೋಗಲಿ
ಅಥವಾ ಚಟಪಟನೆ ಸಿಡಿದು ಚೂರಾಗಲಿ…
ಆಗ ಮತ್ತೆ ನಿನ್ನಲ್ಲಿಗೆ ಮರಳುವೆ
ನಾನು,
ಕೇವಲ ನಿನಗಾಗಿ
ಮೂಲ : ’ಫ್ರಾನ್ಸೆಸ್ಕಾ’, ಎಜ್ರಾ ಪೌಂಡ್

Francesca

Ezra Pound

You came in out of the night

And there were flowers in your hand,
Now you will come out of a confusion of people,
Out of a turmoil of speech about you.
I who have seen you amid the primal things
Was angry when they spoke your name
In ordinary places.
I would that the cool waves might flow over my mind,
And that the world should dry as a dead leaf,
Or as a dandelion see-pod and be swept away,
So that I might find you again,
Alone.

 

‍ಲೇಖಕರು avadhi

21 March, 2014

3 Comments

  1. Swarna

    nice lines for a nice poem…
    ನಿಷೆಯಿಂದರಳಿದ ಸುಮದಂತೆ ನೀನು ಕಂಡಿದ್ದೆ
    ಸುಮದ ಕರದಲ್ಲೂ ಸುಮವಿತ್ತು
    ಜನರಾಡುತ್ತಿದ್ದ ಕೊಳಕು ಮಾತುಗಳಿಂದ
    ನೀನಿಂದು ಹೊರಗಾಗಬಹುದು
    ಕಾಲದ ಆದಿಯಿಂದಲೂ ನಿನ್ನ ಬಲ್ಲೆ ನಾನು,
    ಕುದಿಯುತ್ತಿದ್ದೆ ಅವರು ನಿನ್ನ ಹೆಸರೆತ್ತಿದ್ದಾಗ
    ಸರ್ವೇ ಸಾಮಾನ್ಯ ಸ್ಥಳಗಳಲ್ಲಿ
    ಶಿಶಿರದ ಹಳದಿ ಎಲೆಯಂತೆ ಈ ಜಗ ಉರುಳಲಿ
    ದೈತ್ಯ ಬೀಜವೊಂದು ಗಾಳಿಯಲ್ಲಿ ತೇಲಿ ಹೋಗಲಿ
    ಆಗ
    ಶೀತಲಲೆಗಳು ಮನವನಾವರಿಸಬಹುದು
    ಮತ್ತೆ ನನ್ನ ನಿನ್ನ ಭೇಟಿಯಾಗಬಹುದು

  2. samyuktha

    chendada translation 🙂

  3. mmshaik

    eraduu kavana chennaagive..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading