ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಅಂಗಾಲು ಮುತ್ತಿಡುವ ನೆಲ ನಾನಾದೇನು!

ಗೆಜ್ಜೆ ಕಟ್ಟಿಕೊಂಡ ಕಾಲು ಕುಣಿಯಲೇ ಬೇಕೆಂದೇನೂ ಇಲ್ಲ

ಸಂತೋಷ್ ಬಾಗಿಲಗದ್ದೆ

ಘಲ್ಲೆಂದರೆ ಅದರರ್ಥ
ಬರೀ ಖುಷಿ ಮಾತ್ರವೇ ಅಲ್ಲ
ಗೆಜ್ಜೆ ಸದ್ದಿನ ಗರ್ಭದಲ್ಲೂ
ಇದ್ದೀತು ಸುಡು ನೋವು

leg-she-1-300x189ಕುಣಿವ ಮೃದು ಪಾದಕ್ಕೂ
ಒಮ್ಮೊಮ್ಮೆ ಒಜ್ಜೆ ಅನ್ನಿಸೀತು
ಗೆಜ್ಜೆ ಗೊಂಚಲ ಹಾರ
ಇದ್ದರೂ ಇದ್ದೀತು ಬೆಳಕಲ್ಲಿ
ಮಿಂದ ಪಾದದಾತ್ಮದಲಿ
ಬರೀ ಕತ್ತಲ ಪಸೆ, ಯಾರದೋ
ಮೋಸದಿರಿತದ ಗಾಯ

ಗೆಜ್ಜೆ ಕಟ್ಟಿಕೊಂಡ ಕಾಲು
ಕುಣಿಯಲೇ ಬೇಕೆಂದೇನೂ ಇಲ್ಲ
ಬೆಳಕಿನ ಬೆನ್ನಲ್ಲಿಯೇ
ಅವಿತಿದ್ದೀತು ಕತ್ತಲು

ಇದೆಲ್ಲದರಾಚೆ
ನೀನು ಬಿಕ್ಕಳಿಕೆಗಳನ್ನೂ
ಭರಿಸಿಕೊಂಡು ಕುಣಿಯುತ್ತೀಯಾದರೆ
ನಿನ್ನ ಅಂಗಾಲು ಮುತ್ತಿಡುವ
ನೆಲ ನಾನಾದೇನು!

‍ಲೇಖಕರು admin

26 August, 2016

8 Comments

  1. Sangeeta Kalmane

    ಕೊನೆಯೆರಡು ಸಾಲುಗಳು ಅತೀ ಅಪರೂಪ ಚಿತ್ತಕ್ಕೆ. ಸೂಪರ್ ಸರ್

  2. ಸದಾಶಿವ್ ಸೊರಟೂರು

    ಗೆಜ್ಜೆ ಕಟ್ಟಿಕೊಂಡ ಕಾಲು
    ಕುಣಿಯಲೇ ಬೇಕೆಂದೇನೂ ಇಲ್ಲ…
    ತುಂಬಾ ಕಾಡಿದ ಸಾಲು.

  3. Kusumapatelbangalore

    Subtle & touching. Very nice.

  4. S.p.vijaya Lakshmi

    Aha, ishtavaaythu….

  5. Anonymous

    ಅದ್ಭುತ ಸಾಲುಗಳು ಸಂತು..

  6. Anonymous

    ತುಂಬ ಚೆನ್ನಾಗಿದೆ ಸಂತೋಷ್ ಜೀ…

  7. prathi...savi

    Super….super…..Thumba channagide..

  8. mmshaik

    kaaduva kavite..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading