ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನೊಲವ ರಭಸಕ್ಕೆ ನಲುಗಿದ್ದೆ..

ಮುಂಗಾರು ಮಳೆ

ಡಾ. ಪ್ರೇಮಲತ ಬಿ.

ಮಾಲೆ ಕಟ್ಟಿದರೆ

ಉರುಳಾಗಿ ಕೊರಳ ಬಿಗಿಯುತ್ತದೆ

ಧೋ ಎಂದು ಸುರಿವ ಮಳೆಗೆ

ತೋಯ್ದು ತಣಿವ ಭಾರಕ್ಕೆ

ನೆನಪುಗಳ ನೇಯ್ಗೆ ಜಗ್ಗುತ್ತದೆ

ಹನಿಗಳ ಬಿರುಸಿನ ರಭಸಕ್ಕೆ

ಪುಟಿದೇಳಿ ತುಂಬಿ ಕಣ್ಣ  ಆರ್ದ್ರ

ಮಳೆಹನಿಯೊಡಗೂಡಿ ಜಾರುತ್ತವೆ!!

ಹೀಗೇ…. ಬಂದಿದ್ದೆ ನೀನು

ಒಣಗಿದೆದೆಯಲ್ಲಿ ತಂಪ ಸುರಿಸಿ

ಆರ್ಭಟಿಸಿ ,ಮಿಂಚಿ ಗುಡುಗಿ

ಮನದ ಬಾನನೆಲ್ಲ ನಿನ್ನ ಬೆಚ್ಚಗಿನ ಕೌದಿಯಲ್ಲಿ ಮುಚ್ಚಿ

ಸುರಿದು, ನಿನ್ನದೇ ಲೋಕ ಸೃಷ್ಟಿಸಿ ನಲಿಸಿದ್ದೆ

ಹಾಗೇ  ತಟ್ಟನೆ ನಿಂತು ಮಾಯವಾದೆ

ಸುಖದ ಹನಿಗಳು ತಟತಟನೆ ತೊಟ್ಟಿಕ್ಕಿ ಒಣಗಿ

ಕುಳಿರ್ಗಾಳಿಯಲಿ ನಾ ತರತರನೆ ನಡುಗಿದ್ದೆ

ನಿನ್ನೊಲವ ರಭಸಕ್ಕೆ ನಲುಗಿದ್ದೆ!!

   ಪ್ರತಿ ಮುಂಗಾರು ನನ್ನೆದೆಯಲ್ಲೀಗ

ಹರಿದ ಹಾದಿಯ ಹಸಿರ ಕಬಳಿಸುತ್ತದೆ

ನೋವ ಪ್ರವಾಹ ಹರಿಸುತ್ತದೆ…… !!

 

‍ಲೇಖಕರು admin

8 June, 2017

2 Comments

  1. ರಾಜು ಭಟ್ಟ

    ಸೂಪರ್…. ಶಬ್ದಗಳ ಮಾಲೆ ಒಲವಿನ ರಭಸವನ್ನೂ ಮೀರಿಸಿದೆ.

  2. Sarojini Padasalagi

    ಚಂದದ ಕವನ.ಮುಂಗಾರು ಹರಿದ ಹಾದಿಯ ಹಸಿರು ಕಬಳಿಸುತ್ತದೆ . ಅದೆಷ್ಟು ಸುಂದರ ಅಭಿವ್ಯಕ್ತಿ !!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading