ನಿನ್ನೆ ಟಿ ಎಸ್ ಗೊರವರ ಕೇಳಿದ್ದ ಪ್ರಶ್ನೆಗೆ ಉತ್ತರ ಇಲ್ಲಿದೆ

ಒಂದು ಫೋಟೋ ಹಾಕಿ, ಗೊರವರ ಒಂದು ಪ್ರಶ್ನೆ ಕೇಳಿದ್ದರು.

ಟಿ ಎಸ್ ಗೊರವರ

ಪ್ರಶ್ನೆಗೆ ಉತ್ತರವನ್ನು ಗೊರವರ ಅವರೇ ಕಳಿಸಿಕೊಟ್ಟಿದ್ದಾರೆ. ಇದು ನಿಮಗಾಗಿ :

ನಾನೂ ಯೋಚಿಸಿದ್ದೆ. ಇವರು ಯಾರೆಂದು ಯಾರಿಗೂ ಗೊತ್ತಾಗಲಿಕ್ಕಿಲ್ಲ ಅಂತ. ಅದಕ್ಕೇ ಲಂಕೇಶ್ ಹೇಳಿದ್ದು ಇವರು ‘ ಎಲೆ ಮರೆಯ ಘಮ ಘಮ ಹೂ’ ಎಂದು. ನಾನೇ ಹೇಳಿಬಿಡುತ್ತೇನೆ. ಇವರ ಕುರಿತು ಕಾಳೇಗೌಡ ನಾಗವಾರ ಬರೆದ ಪರಿಚಯ ಕತೆ ತುಂಬಾ ಜನಪ್ರಿಯವಾಗಿದೆ. ಇವರ ಕುರಿತು ಈಗಾಗಲೇ ಬೆಸಗರಹಳ್ಳಿ ರಾಮಣ್ಣ. ಸಿದ್ದಲಿಂಗಯ್ಯ., ಪಾಟೀಲ ಪುಟ್ಟಪ್ಪ, ಸನತ್ ಕುಮಾರ್ ಬೆಳಗಲಿ, ಶೂದ್ರ ಶ್ರೀನಿವಾಸ್, ಬಿ.ಜಿ.ಬಣಕಾರ, ಅಗ್ರಹಾರ ಕೃಷ್ಣಮೂರ್ತಿ… ಹೀಗೆ ಖ್ಯಾತನಾಮರೆಲ್ಲ ಅವರ ನೆನಪುಗಳನ್ನು ಅಲ್ಲಲ್ಲಿ ಬರೆದಿದ್ದಾರೆ. ಇವರು ದೇವರಾಜ ಅರಸು ಅವರ ಆತ್ಮೀಯ ಒಡನಾಡಿಗಳಲ್ಲಿ ಒಬ್ಬರು. ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಇವರ ಬೆಂಗಳೂರಿನ ಜನರಲ್ ಹಾಸ್ಟೇಲ್ (ಈಗಿನ ಕಾವೇರಿ ಅತಿಥಿಗೃಹ) ಕೊಠಡಿ ತುಂಬಾ ಸಮಾಜವಾದಿಗಳೇ ತುಂಬಿರುತ್ತಿದ್ದರು. ಕಾಳೇಗೌಡ ನಾಗವಾರ, ಡಿ.ಆರ್.ನಾಗರಾಜ, ಶೂದ್ರ ಶ್ರೀನಿವಾಸ, ಅಗ್ರಹಾರ ಕೃಷ್ಣಮೂರ್ತಿ, ಕರೀಗೌಡ ಬೀಚನಹಳ್ಳಿ, ಕಲ್ಲೂರು ಮೇಘರಾಜ ಸೇರಿದಂತೆ ಬೇರೆ ಊರುಗಳಿಂದ ಬಂದ ಬಡ ವಿದ್ಯಾರ್ಥಿಗಳು ಇವರ ಕೊಠಡಿಯಲ್ಲಿ ತಿಂಗಳುಗಟ್ಟಲೇ ಇರುತ್ತಿದ್ದರು. ಲಂಕೇಶ್ ಹೇಳುವಂತೆ ಇವರು ಅಯ್ಯೋ ಅನಿಸುವಷ್ಟು ಒಳ್ಳೆಯವರಾಗಿದ್ದರು.
ಇಂಥವರ ಸಾಮಾಜಿಕ ಹೋರಾಟಗಳನ್ನು ಪ್ರಭುತ್ವ ಉದ್ದೇಶಪೂರ್ವಕವಾಗಿ ಉದಾಸೀನ ಮಾಡುತ್ತಾ ಬಂದಿದೆ. ಪ್ರಭುತ್ವದ ಚಾಣಾಕ್ಷತನ, ಹುಸಿ ಸಂಶೋಧನೆಗಳಿಂದ ಶೂದ್ರ ಪ್ರತಿಭೆಗಳು ಚರಿತ್ರೆಯ ಮುಖ್ಯ ಪುಟಗಳಲ್ಲಿ ಕಾಣಿಸಿಕೊಂಡಿಲ್ಲ. ಪರಿಶ್ರಮ, ಪ್ರಾಮಾಣಿಕತೆಯಿಂದ ಶೂದ್ರರ, ದಲಿತರ ಬದುಕಿನಲ್ಲಿ ಆತ್ಮಗೌರವ ಹುಟ್ಟು ಹಾಕಲು ಶ್ರಮಿಸಿದ ಇವರು ಕೂಡ ಚರಿತ್ರೆ ಮರೆತಿರುವ ಮನುಷ್ಯರ ಸಾಲಿಗೆ ಸೇರಿದವರು. ಇವರು ಸದನದಲ್ಲಿ ಮಾತಾಡಿದ್ದು, ಬಡವರ, ದಲಿತರ, ಶೂದ್ರರ ಏಳಿಗೆಯ ಕುರಿತು. ಬಡವರ ಪ್ರತಿನಿಧಿಯಾಗಿದ್ದ ಪ್ರಗತಿಪರ ಆಲೋಚನೆಯ ಕಲಾವಿದರು, ಲೇಖಕರು ಹಾಗೂ ವಿದ್ಯಾರ್ಥಿಗಳ ಸಖನಂತಿದ್ದರು. ಇಂಥ ರಾಜಕಾರಣಿಯ ಬದುಕಿನ ಕೊನೆಯ ದಿನಗಳಲ್ಲಿ ಅವರ ಹತ್ತಿರ ಒಂದು ಮುರುಕು ಸೈಕಲ್ ಕೂಡ ಇರಲಿಲ್ಲವಂತೆ. ಇಂತಹ ಬದ್ಧತೆ ಈಗಿನ ರಾಜಕಾರಣಿಗಳಿಗೆ ಇಲ್ಲ ಬಿಡಿ.
ಇವರ ಹೆಸರು ಎನ್.ಎನ್.ಕಲ್ಲಣ್ಣವರ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ನಲವಡಿ ಇವರ ಊರು. ಇವರ ಕುರಿತಾಗಿ ಪಲ್ಲವ ವೆಂಕಟೇಶ ಅವರ ಸಂಪಾದನೆಯಲ್ಲಿ ಸದ್ಯದಲ್ಲೇ ಎಲೆ ಮರೆಯ ಘಮ ಘಮ ಹೂ ಎನ್ನುವ ಅನನ್ಯ ಪುಸ್ತಕ ಬರಲಿದೆ. ಓದಲೇಬೇಕಾದ ಪುಸ್ತಕ. ನಾನಂತೂ ಪಿಡಿಎಫ್ ನಲ್ಲಿ ಓದಿ. ಬೆರಗಾಗಿದ್ದೇನೆ. ತಳಮಳಿಸಿದ್ದೇನೆ.
 

‍ಲೇಖಕರು G

October 9, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: