ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನಿನ್ನೆಗಳಿಗಾಗಿ ಹುಡುಕುತಿರುವನೋ ನಾಳೆಗಳಿಗಾಗಿ ಕೂಡಿಡುತಿರುವನೋ' – ಜಮುನಾರಾಣಿ

ಕಾಯಕವ ಮರೆತ ಕವಿ

ಜಮುನಾ ರಾಣಿ

ನಡುರಾತ್ರಿ
ನೀರವ ಮೌನ
ಅಲ್ಲೊ೦ದು ಉಸಿರಾಡುವ
ದೇಹದಲಿ೦ದ
ಆತ್ಮದ ಏಳದೇ ಕೇಳದೇ ಪಯಣ
 
ಬೆಟ್ಟ ಗುಡ್ಡಗಳ ಹತ್ತಿ
ಝರಿಯ ಇಳಿಜಾರಲಿ ಸುತ್ತಿ
ನಾಯಿ ನರಿ ಊಳಿಡುವ ಹೊತ್ತಲಿ
ನಿದಿರೆಯ ಸುಳಿಗೊಡದೆ
ಕನಸುಗಳೆಲ್ಲವ ಮಾರಿ
ಸಾಗಿದೆ ಕಾಣದ ಹೃದಯದ
ಭಾವನೆಗಳಿಗೆ ಅಕ್ಷರಗಳ
ಪೂಣಿಸುವ ಜೂಜಾಟ

ಇರಿದು ಕೊಲ್ಲುತಿದ್ದರೂ
ಭಾವನೆಗಳು
ಕಾಣದಾಗಿವೆ ಕರಿಯ
ನಕ್ಷತ್ರಗಳು
ಬಿಳಿಯ ಆಗಸದ ಮೇಲೆ.
ತಿರುಗಾಟದ, ತಿಣುಕಾಟದ
ಗು೦ಗಲಿ ಸವೆದಿವೆ
ಬಾನ ಚುಕ್ಕಿಗಳು
ರೋಧನೆ ಹೆಚ್ಚಾಗುತಿದೆ
ಬಸಿರ ಇಳಿಸಲು
 
ಬುದ್ದನೋ ಏಸುವೊ
ಯಾರಿಗೆ ಗೊತ್ತು
ಸರಿ ರಾತ್ರಿಯಲಿ
ಜಾರಿ ಬಿದ್ದು
ನಿನ್ನೆಗಳಿಗಾಗಿ ಹುಡುಕುತಿರುವನೋ
ನಾಳೆಗಳಿಗಾಗಿ ಕೂಡಿಡುತಿರುವನೋ
ಹೆಕ್ಕಿ ಹೆಕ್ಕಿ ಮನ ದಣಿಯೆ
ವಾಲಿಹನು ದಿ೦ಬಿಗೆ
 
ದುಮುಕುತಿರುವ
ಭಾಷೆಯ ಭಾವನೆಗಳೆಗೆ
ಅಕ್ಷರಗಳ ಶೃ೦ಗಾರ
ಮುಗಿಯದೆ
ಮತ್ತೆ ಸೇರಿದೆ
ಆತ್ಮ ಕವಿಯ ದೇಹದೊಳಗೆ
ಕಾಯಕವ ಮರೆತ
ಸಿಟ್ಟು ನೆತ್ತಿಯೊಳಗೆ
——————–
– ಜಮುನಾ ರಾಣಿ ಎಚ್.ಎಸ್.
 

‍ಲೇಖಕರು G

27 January, 2015

4 Comments

  1. ಶ್ವೇತಾ.ಎ

    ನಿನ್ನೆಗಳ ಹುಡುಕುತಾ…ನಾಳೆಗಳ ಕೂಡಿಡುತಾ…..ಬದುಕಿನ ದಾರಿಯ ಸನಿಹ ಬೆಂಬಿಡದ ಬಯಲಾಗಿದೆ…..ಕೂತು ನೋಡುವ ದಾರಿ ಕಾಣದಿದ್ದರೂ ಗೋಚರವಾಗಿದೆ…ಅಲ್ವಾ? ಚೆನಾಗಿದೆ ನಿಮ್ಮ ಕವಿತೆ……

  2. mmshaik

    very nice madam…

  3. Jamuna

    Thank u….

  4. Asha Rani

    Nice poem!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading