ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನಿನ್ನಿಂದ ದೂರವಾದ ಸುಧೀರ್ಘ ಅವಧಿಗೆ…' ಎಂ ಎಂ ಶೇಖ್ ಸಾನೆಟ್

ಸಾನೆಟ್

ಎಂ ಎಂ ಶೇಖ್ ಯಾದಗಿರಿ

ನಾ ನೆನಪಿಗಾಗಿ ಉಳಿಯಬಹುದು ಕೋಣೆಯಲ್ಲಿರುವ
ಮೂಲೆಯಲ್ಲಿ ಅದು ನೀ ಉಸಿರಾಡುವವರೆಗೂ. ನಂತರ
ಬದಲಾವಣೆಗೆ ಜೋತುಬಿದ್ದು ಕೆಡವಿಕಟ್ಟುವ
ಮಹಲ್ ಗಳ ಸತ್ಯ ಅದಾರೂ ಅರಿಯರು ಸಖಿ .
 
ಒಂದು ಹಳೆಯ ಸಾಲವನ್ನು ಹಳೆಯ
ಒಳ್ಳೆಯ ಕಾಲದಲ್ಲಿ ನೀಡಿದ್ದಕ್ಕೆ ನಾನೇ
ಇನ್ನಿಲ್ಲದಂತೆ ಶ್ರೀಮಂತಿಕೆಯಿಂದ ಮೆರೆದೆ.
ಮೆತ್ತಗಾದ ವೃದ್ದ್ಯಾಪ್ಯ ನೋಡು ಸವೆದ ಕೊರಡಿನಲ್ಲಿ

ನಿನ್ನಿಂದ ದೂರವಾದ ಸುಧೀರ್ಘ ಅವಧಿಗೆ
ಅಲ್ಲಲ್ಲಿ ನನ್ನದೇ ರಚನೆಯ ಕೃತಿಗಳನ್ನು ಗೋಡೆಗೆ
ತಗುಲಿಸಿದ್ದೇನೆ ನನ್ನ ಒಂಟಿತನಕ್ಕೆ ಜೊತೆಯಾಗಲು.
ನನ್ನ ಆದ್ಯತೆಯಲಿ ನೀ ಮರೆಯಾಗಬಾರದು .
 
ನುಗ್ಗಿದ್ದೆಲ್ಲಾ ನೋವುಗಳಿಗೆ ಕೈ ಹಿಡಿದೆಳೆದುಕೊಂಡೆ
ಬಯಕೆಗಳ ಅರಾಜಕತೆಗಳನ್ನು ಎದೆಗೆ ಒತ್ತಿಕೊಂಡೆ
 

‍ಲೇಖಕರು avadhi

22 April, 2014

3 Comments

  1. smitha Amrithraj

    wow!…chenda ide-smitha

  2. Anil Talikoti

    ‘ನನ್ನ ಆದ್ಯತೆಯಲಿ ನೀ ಮರೆಯಾಗಬಾರದು ‘ Nice one
    -Anil

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading