ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನಷ್ಟೇ ಪ್ರೀತಿಸಿ ಭಗ್ನಳಾದೆ, ನೀ ಜಗತ್ತನೇ ಪ್ರೀತಿಸಿ ಬುದ್ಧನಾದೆ…

ಬೆಳಗಾಯಿತು.. ಪ್ರೀತಿಗೆ..

ಹರವು ಸ್ಫೂರ್ತಿಗೌಡ

ನಿನ್ನ ದನಿಯೊಂದು ದಿನ ಹಕ್ಕಿಯ ನಿನಾದವಾಗಲಿದೆ
ರೋಮ ಪುಳಕಗೊಂಡು ಕಣ್ಣುಗಳ ಬೆಳಕು ಬೆತ್ತಲಾಗುತ್ತವೆ
ಚಂದಿರನ ದಿಕ್ಕಿಗೆ ಮುಖಮಾಡಿ ಹೊರಟುಬಿಟ್ಟೆ
ನಿನ್ನ ದಿಗಂತಗಳ ಕೇಳಬೇಕು ನಿಲ್ಲು..
ನಿನ್ನ ಆಲಾಪಗಳು ನನ್ನ ಹೃದಯ ಗೀತೆಯಾಗುತ್ತಿವೆ..
 
ಭ್ರಾಂತಿಯೇನು ನನ್ನ ಪ್ರೀತಿ..?
ಬಯಕೆಗಳ ತೀವ್ರತೆಗೆ ನಿರ್ಲಿಪ್ತ  ನಡುರಾತ್ರಿ ನಡೆದೆ
ಆಸೆಗೆ ದುಃಖ ನೀಡಿ ಶಾಂತಿಧೂತನಾಗಿದ್ದು ಹೇಗೆ
ನಿನ್ನ ಪಾಲಿ ಭಾಷೆಗಳು ಗೊತ್ತಿಲ್ಲ ಬಿಡು
ಅನುರಾಗಗಳ ಎಚ್ಚರ ಸ್ಥಿತಿ ಅವಲೋಕಿತ ಧಮ್ಮಗಳು
ಅಸಹನೆ ನಡಿಗೆಗಳು ಸುಳ್ಳಿರಬಹುದು ವೈರಾಗ್ಯವಲ್ಲ
ಜಂಗಮ ಕಾಲುಗಳು ಕಾದ ಹೃದಯಗಳಿಂದ ಸುಡಬೇಕಿದ್ದವು
ಪಾದಗಳೇ ಹಾರುವ ಮುನ್ನ ಕೆಂಡದೂವುಗಳ ಮೇಲೆ ಕೂತುಹೋಗು
ಕಾಲಿಟ್ಟ ಬಂಡೆಯಲ್ಲಿ ಝರಿ ಹರಿಯಿತು
ಪಾದ ಚಿಟ್ಟೆ ಕೂತ ಕೆಂಡದೂವು ಜ್ವಲಿಸಿ ಬೆಳಗಾಯಿತ್ತು

ಎಲ್ಲರೂ ಮಣ್ಣು ಸೇರಿದೆವು; ಉತ್ತಿದಂತೆ ಘಾಸಿಗೊಳ್ಳುತ್ತಿದ್ದೆವು

ಎದೆ ಗಾಯಗಳು ಬೀದಿ ಅಲೆಯುತ್ತ ನಿನ್ನ ಹುಡುಕುತಿವೆ
ನೀನೂ ಮಣ್ಣಾದೆ; ನಿನ್ನ ಎದೆಯನ್ನ ಉಳುತ್ತಿದ್ದಾರೆ
ಉತ್ತಿದೆಂತಲ್ಲಾ ಮೊಳಕೆಯೊಡೆದೆ
ಪ್ರೀತಿ ಆತ್ಮ ಎದೆಯೊಳಗೆ ಇಸಿರಿಕೊಂಡೆದ್ದೆ ಬೋಧಿವೃಕ್ಷವಾಗಿ ಬೆಳೆದೆ
ಸೋಲು, ನೋವುಗಳ ಕಂಡು ತಟಸ್ಥನಾಗಿ ಅರೆಗಣ್ಣ ನಗುವೇಕೆ
ಬಾಯಿಬಿಟ್ಟು ಹೇಳಿದರೆ ಬರಿ ಸದ್ದಷ್ಟೇ ಕೇಳುತ್ತಿದೆ
ಭಾವರ್ಥಗಳ ಹೂ ಬಿರಿದು ಘಮ್ಮೆಂದದ್ದು ಸೊಕದೆ ಹೊಯ್ತು
ನಿನ್ನಷ್ಟೇ ಪ್ರೀತಿಸಿ ಭಗ್ನಳಾದೆ, ನೀ ಜಗತ್ತನೇ ಪ್ರೀತಿಸಿ ಬುದ್ಧನಾದೆ
 
ಬೆಳಗಾಯಿತು,
ನನ್ನದಷ್ಟೇಯಲ್ಲ ಎಲ್ಲಾ ವಿರಹಿಗಳ ರೆಕ್ಕೆ ಬಿಚ್ಚಿವೆ
ನಿನ್ನ ದಿಗಂತಗಳ ಕೇಳಬೇಕು, ನಿಲ್ಲು..
ನಿನ್ನ ಆಲಾಪಗಳು ನಮ್ಮೆಲ್ಲರ ಹೃದಯ ಗೀತೆಯಾಗುತ್ತಿವೆ..

‍ಲೇಖಕರು avadhi

14 February, 2014

3 Comments

  1. MOULYA M

    ಬುದ್ಧ ನಿಜಕ್ಕು ನಿ೦ತು ಓದಲೇ ಬೇಕಾದ ಸಾಲುಗಳು ಸ್ಪೂರ್ತಿ. ಉತ್ತಮ ಕವಿತೆಯನ್ನು ನಮಗೂ ದಾಟಿಸಿದ್ದಕೆ ವ೦ದನೆಗಳು.

  2. mmshaik

    super..!very touching..!!

  3. Ashok Shettar

    ಸರಳವಾಗಿದೆ, ಸುಂದರವಾಗಿದೆ. ಒಂದು ಅರ್ಥ ಒಂದು ಭಾವದ ಮಿತಿಗೆ ತೃಪ್ತಗೊಳ್ಳದೇ ಅರ್ಥವಲಯಗಳನ್ನು ಭಾವವಲಯಗಳನ್ನು ಸೃಷ್ಟಿಸಲೆತ್ನಿಸಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading