ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನದೇ ಎದೆ ತೊಡೆಗಳಲ್ಲಿ ಪಸರಿಸುವವಳು..

ಬಳ್ಳಿಯಂಥವಳು

ಗೀರ್ವಾಣಿ

sheಮೊದಲೇ ಹೇಳಿ ಬಿಡುತ್ತೇನೆ
ನಾನು ಬಳ್ಳಿಯಂಥವಳು
ನಿನ್ನದೇ ತೇವದಿಂದ ಮೊಳಕೆಯೊಡೆದು
ಬೇರೂರುವವಳು.
ನಿನ್ನದೇ ಬುಡದಲ್ಲಿ ಗೊಬ್ಬರ ಕದಿಯುವವಳು
ನಿನ್ನದೇ ಅಗಾಧ ರೂಪಕ್ಕೆ ತಬ್ಬುವವಳು
ನಿನ್ನದೇ ಅಂಗಾಂಗಗಳ ರಸ ಹೀರಿ
ಮೇಲೇರುವವಳು
ನಿನ್ನದೇ ಎದೆ ತೊಡೆಗಳಲ್ಲಿ
ಪಸರಿಸುವವಳು
ನಿನ್ನದೇ ತೋಳಲ್ಲಿ ಹೂ ಬಿಡುವವಳು

ತಂಗಾಳಿಗೆ ನೀ ಬಾಗಿದಾಗ
ಅವುಚಿ ಕೂರುವವಳು
ಇನ್ಯಾರದೋ ಪರಿಮಳಕ್ಕೆ ಪಾಲು ಕೇಳುವವಳು
ನಿನ್ನದೇ ತಲೆಯೇರಿ ನಿನಗೇ ಭ್ರಮೆ ಹುಟ್ಟಿಸುವವಳು
ನಿನಗಿಂತ ಚಂದದ ಹೂ ಬಿಟ್ಟು ಮರುಳು ಮಾಡುವವಳು

ನಿನ್ನದೇ ಪ್ರೀತಿಗೆ ಹಬ್ಬಿದವಳು
ನಿನ್ನದೇ ತಿರಸ್ಕಾರಕ್ಕೆ ಒಣಗಿದವಳು
ನೀ ಧರಾಶಾಹಿಯಾದಾಗ
ನಿನ್ನದೇ ಕೊಂಬೆಗಳನ್ನು ಬಳಸಿ
ಇನ್ನೊಂದು ಮರಕ್ಕೆ ಹಬ್ಬುವವಳು
ಏಕೆಂದರೆ ನಾ ಬಳ್ಳಿಯಂಥವಳು.

 

‍ಲೇಖಕರು Admin

5 August, 2016

6 Comments

  1. ಚೈತ್ರಿಕಾ ಹೆಗಡೆ

    ಗೊಬ್ಬರ ಕದಿಯುವವಳು, ಇನ್ಯಾರದೋ ಪರಿಮಳಕ್ಕೆ ಪಾಲು ಕೇಳುವವಳು, ನಿನಗಿಂತ ಚಂದ ಹೂಬಿಟ್ಟು ಮರಳು ಮಾಡುವವಳು.. Nice lines..

  2. ನಾಗರಾಜ್ ಹರಪನಹಳ್ಳಿ

    ಕವಿತೆ ಸೊಗಸು. ತಾಯಿಯ ತೊಡೆಯ ಮೇಲೆ ಬೆಳೆದ ಮಗಳ ತೊದಲು ನುಡಿಯಂತಿದೆ

  3. Anonymous

    Ninnadee thiraskarakke onagidavalu…superrr

  4. Anonymous

    Kavite tumba sogasaagide

  5. Shankar bhat

    Excellent

  6. Anonymous

    Thanks to all.
    Geervani

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading