ನಿಕಿತಾ ಓದಿದ ‘ಇಜಯಾ’

ನಿಕಿತಾ

ಇಜಯಾ ಕಾದಂಬರಿಯ ಬಗ್ಗೆ ನನಗೆ ತಿಳಿದಾಗ ಮೊದಲು ಇದೆಂಥಾ ಶೀರ್ಷಿಕೆ ಎಂದು ಕುತೂಹಲವಾಯಿತು. ಪುಸ್ತಕ ಓದಲು ಶುರು ಮಾಡಿದಾಗಲೇ ತಿಳಿದಿದ್ದು ಇಜಯಾ ಎನ್ನುವುದು ಕಥಾನಾಯಕಿಯ ಹೆಸರು ಎಂದು. ಈ ಹೆಸರನ್ನು ನಾನೆಂದೂ ಕೇಳಿರದ ಕಾರಣ ಕಾದಂಬರಿ ಮತ್ತಷ್ಟು ಕುತೂಹಲ ಮೂಡಿಸಿತು.  ಆದರೆ ಇದು ಯಾವ genreಕ್ಕೆ ಸೇರಿದ್ದು ಎಂದು ಹೇಳಲು ಸ್ವಲ್ಪ ಕಷ್ಟ. ಕಾದಂಬರಿ ಓದಲು ಪ್ರಾರಂಭಿಸಿದಾಗ ಇದು ತ್ರಿವೇಣಿ ಹಾಗೂ ಮತ್ತಿತರರ ಪುಸ್ತಕಗಳಂತೆ ಮಹಿಳಾ ಪ್ರಧಾನ ಕಾದಂಬರಿಯಂತೆ ಅನಿಸಿದರೂ, ಕಥೆ ರೋಚಕ ತಿರುವನ್ನು ಪಡೆದು psychological ಥ್ರಿಲ್ಲರ್ ಏನೋ ಅನ್ನಿಸಬಹುದು. ಹೆಸರು ಹೊಸದೆನಿಸಿದರು ಇಜಯಾ ನಮ್ಮಲ್ಲಿಯೇ ಒಬ್ಬಳು ಎನಿಸಿವಂತಹ ಪಾತ್ರವನ್ನು ಪೂರ್ಣಿಮಾ ಮಾಳಗಿಮನಿ ಕಟ್ಟುಕೊಟ್ಟಿದ್ದಾರೆ. 

ಬಹುತೇಕ ಮದುವೆಯಾದ working womenನಂತೆ ಇಜಯಾಳಿಗೂ ಸಾಂಸಾರ ಹಾಗೂ ವೃತ್ತಿ ಜೀವನದ ಜವಾಬ್ದಾರಿ ಮತ್ತು ಒತ್ತಡಗಳ ನಡುವೆ ತಾನು ಲೇಖಕಿಯಾಗುವ ಕನಸನ್ನು ಮುಂದುವರೆಸಲಾಗದ ಪರಿಸ್ಥಿತಿ. ಆದರೂ ಈ ನಿಟ್ಟಿನಲ್ಲಿ ಸಣ್ಣ ಸಣ್ಣ ಹೆಜ್ಜೆಯಿಟ್ಟರೂ ಅವಳ ಕನಸುಗಳಿಗೆ ಹೆಚ್ಚು ಬೆಂಬಲ ಕೊಡದ ಮನೆಯ ವಾತಾವರಣ. ಹೀಗೆ ಆರಕ್ಕೇರದ ಮೂರಕ್ಕಿಳಿಯದ ಇಜಾಯಾಳ ಜೀವನ, ಮಂಜನ ಪಾತ್ರ ಪ್ರವೇಶದಿಂದ ಸಿನಿಮೀಯ ರೀತಿಯಲ್ಲಿ ಬದಲಾಗುವುದರೊಂದಿಗೆ ಪುಸ್ತಕದ ದಿಕ್ಕನ್ನೂ ಬದಲಾಯಿಸುತ್ತದೆ. ಹಾಗಾದರೆ, ಮಂಜನ ಪಾತ್ರ ಇಜಯಾ ಮತ್ತವಳ ಕನಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಇಜಯಾ ತನ್ನ ಕನಸಿನ ಹಾದಿಯಲ್ಲಿ ಮುನ್ನಡೆಯುವಳೇ? ಕಾದಂಬರಿಯ ಮುಖಪುಟದ ಮೇಲಿರುವ ಚಿತ್ರಕ್ಕೂ ಹಾಗೂ ಈ ಕಥೆಗೂ ಏನು ಸಂಬಂಧ? ಇಂತಹ ಹತ್ತು ಹಲವು ಪ್ರಶ್ನೆಗಳನ್ನು ಕಾದಂಬರಿಯೇ ಉತ್ತರಿಸುತ್ತದೆ. 

ಮೇಲ್ನೋಟಕ್ಕೆ ಕಥೆ ಸರಳವೆನಿಸಿದರೂ ಅದು ಸಮುದ್ರದಷ್ಟೇ ಆಳವಾಗಿದೆ. ಮನುಷ್ಯ ಹಾಗೂ ಅವನ ಕನಸುಗಳು ಈ ಕಥೆಯ ಕೇಂದ್ರಬಿಂದುವಾಗಿದ್ದರೂ,  ಸ್ನೇಹ-ಸಂಬಂಧ, ಗುಣ, ಸ್ವಭಾವ, ನಡುವಳಿಕೆ ಹೀಗೆ ಅವನ ಹಲವು ಮುಖಗಳ ಅನಾವರಣವಾಗಿದೆ. ಮನುಷ್ಯನ ಜೀವನ ಮತ್ತು ಕನಸುಗಳ ಬಗ್ಗೆ  ಈ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ಅತ್ಯಂತ ಸೂಕ್ಷ್ಮವಾಗಿ ತನ್ನ ನಿಲುವನ್ನು ತೆರೆದಿಡುತ್ತದೆ. ಇಜಯಾ ಹೇಳುವ ಹಾಗೆ ನಾವು  ಪರಿಸ್ಥಿತಿಯ ಕೈ ಗೊಂಬೆಯಾಗಿ ನಮ್ಮೆಲ್ಲಾ ಕನಸುಗಳನ್ನು ಸಾಕಾರಗೊಳಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅಥವಾ ಮಂಜ ಹೇಳುವಂತೆ ನಮಗೆ ನಾವೇ ಚೌಕಟ್ಟನ್ನು ಹಾಕಿಕೊಂಡು ಅದರಲ್ಲಿ ಬಂಧಿಯಾಗಿ ನಮ್ಮ ಕನಸುಗಳನ್ನು ಮುಂದುವರಿಸಲಾಗದೆ ಕುಂಟು ನೆಪವೊಡ್ಡುತ್ತಿವೋ ಎಂಬುದು ಓದುಗರನ್ನು ಆಲೋಚಿಸುವಂತೆ ಮಾಡುತ್ತದೆ.

ಈ ಕಾದಂಬರಿಯ ದೊಡ್ಡ plus point ಇದರ ಪಾತ್ರ ಚಿತ್ರಣ. ಕಾದಂಬರಿಯಲ್ಲಿರುವ ಎಲ್ಲಾ ಪಾತ್ರಗಳಿಗೂ ಅದರದೇ ಆದ ತೂಕವಿದೆ ಹಾಗೂ ಓದುಗರ ಮನಸ್ಸನ್ನು ಮುಟ್ಟುತ್ತದೆ. ತನ್ನ ಆಸೆ ಕನಸುಗಳಿಗೆ ತೋರ್ಪಡಿಕೆಗೆ ಬೆಂಬಲಿಸುವ ಇಜಾಯಳ ಗಂಡ ಸುಧೀ, ತನ್ನ ಬೇಡಿಕೆಗಳನ್ನು ಈಡೇರಿಸುವ ಅಮ್ಮನನ್ನೇ selfish ಎಂದು ದೂಷಿಸುವ ಮಗಳು ಶಾರ್ವರಿ, ಇಜಾಯಳ ಮನಸ್ಸಿನ ಮೇಲೆ ಬಲವಾದ ಪ್ರಭಾವವನ್ನು ಬೀರಿ ಅವಳ ಬರಹವನ್ನು ಮುಂದುವರೆಸಲು ಹೊಸ ಉತ್ತೇಜನವನ್ನು ನೀಡುವ ಬಸಪ್ಪ ಹೀಗೆ ಎಲ್ಲಾ ಪಾತ್ರಗಳು ಒಂದಲ್ಲಾ ಒಂದು ವೈಶಿಷ್ಟ್ಯವನ್ನು ಹೊಂದಿದೆ.  ಎಲ್ಲದಕ್ಕಿಂತ ಹೆಚ್ಚಾಗಿ ಮಂಜನದ್ದು ಒಂದು ಬೃಹತ್ ಪಾತ್ರ ಮತ್ತು ವಿವರಣೆಗೆ ಮೀರಿದ್ದು. ಪ್ರತಿ ಬಾರಿ ಓದಿಗಾಗಲು  ಹೆಚ್ಚು ಹೆಚ್ಚು ಪದರಗಳು ತೆರೆದುಕೊಳ್ಳುವಂತಹ ಮಂಜನ ಪಾತ್ರ ವೈಯಕ್ತಿಕವಾಗಿ ನನಗೆ ಬಹಳ intriguing ಅನಿಸಿತು. 

ಇದರೊಂದಿಗೆ, ಇಜಯಾಳ ಸ್ವಗತಗಳು ಹಾಗೂ ಮಂಜನ ಹಿತನುಡಿಗಳು ಮತ್ತೆ ಮತ್ತೆ ಮೆಲುಕು ಹಾಕುವಂತೆ ಒತ್ತಾಯಿಸುತ್ತದೆ ಹಾಗೂ ಎಷ್ಟೋ ಬಾರಿ ನನಗೆ ಮಂಜ ಇಜಯಾಳ alter ego ಎಂದೇ ಅನಿಸುತ್ತಿತ್ತು. ಒಟ್ಟಾರೆ, ಒಂದೇ ಗುಟುಕಿಗೆ ಕುಡಿದರೂ ಕಾಫಿಯ ರುಚಿ ಹೇಗೆ ಬಹಳ ಹೊತ್ತು ಹಾಗೆಯೇ ಉಳಿಯುತ್ತದೆಯೋ ಅದೇ ರೀತಿ ೧೬೦ ಪುಟಗಳ ಕಾದಂಬರಿ ವೇಗವಾಗಿ ಓದಿಸಿಕೊಂಡು ಹೋದರೂ, ಓದಿ ಮುಗಿಸಿದ ಮೇಲೂ  ಬಿಟ್ಟು ಬಿಡದ ‘ಹುಳದಂತೆ’ ಕಾಡುತ್ತದೆ.

‍ಲೇಖಕರು avadhi

February 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: