ನಿಂಗರಾಜ ಚಿತ್ತಣ್ಣವರ್, ರೂಪಾ ಮತ್ತೀಕೆರೆ ಅವರಿಗೆ ಪ್ರಕಾಶಕರ ಸಂಘದ ಪ್ರಶಸ್ತಿ

ಕರ್ನಾಟಕ ಪ್ರಕಾಶಕರ ಸಂಘವು ಕವಿ ಗೋಪಾಲಕೃಷ್ಣ ಅಡಿಗರಿಂದ ಪ್ರಾರಂಭಿಸಲ್ಪಟ್ಟು ಕಳೆದ ನಲವತ್ತು ವರ್ಷಗಳಿಂದ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಕೆಲಸಗಳನ್ನು ಮಾಡುತ್ತಾ ಬಂದಿದೆ. ಕನ್ನಡದ ಮಹತ್ವದ ಸಾಂಸ್ಕೃತಿಕ ಕಾಳಜಿಯ ತಾವು ಸದಾ ಪುಸ್ತಕೋದ್ಯಮವನ್ನು ಪ್ರೋತ್ಸಾಹಿಸುತ್ತಲೇ ಬಂದಿದ್ದೀರಿ, ಆದ್ದರಿಂದ ಕರ್ನಾಟಕ ಪ್ರಕಾಶಕರ ಸಂಘ (ರಿ) ನಿಮಗೆ ಹೃತ್ಪೂರ್ವಕ ಧನ್ಯವಾದಗಳನ್ನು ಈ ಮೂಲಕ ತಿಳಿಸುತ್ತದೆ.
* * *
ಕರ್ನಾಟಕ ಪ್ರಕಾಶಕರ ಸಂಘವು ಕೊಡ ಮಾಡುತ್ತಿರುವ ೨೦೨೩ ವಾರ್ಷಿಕ ಪ್ರಶಸ್ತಿಗೆ ರೂಪ ಮತ್ತೀಕೆರೆ (ನಂಜನಗೂಡು ತಿರುಮಲಾಂಭ ಪ್ರಶಸ್ತಿ) ಮತ್ತು ಮೈಸೂರಿನ ಚಿಂತನ ಚಿತ್ತಾರ ಪ್ರಕಾಶನದ ನಿಂಗರಾಜ್ ಚಿತ್ತಣ್ಣವರ್ (ಶ್ರೀ ಗೋಪಾಲ ಕೃಷ್ಣ ಪುಸ್ತಕ ಪರಿಚಾರಕ ಪ್ರಶಸ್ತಿ) ಆಯ್ಕೆಯಾಗಿದ್ದಾರೆ.

ಕನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಪ್ರಕಾಶ್ ಕಂಬತ್ತಳ್ಳಿ ಅವರ ಅಧ್ಯಕ್ಷತೆಯಲ್ಲಿ ೦೫.೦೪.೨೦೨೪ ರಂದು ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಂಜನಗೂಡು ತಿರುಮಲಾಂಬ ಪ್ರಶಸ್ತಿ ಮತ್ತು ಶ್ರೀ ಗೋಪಾಲ ಕೃಷ್ಣ ಪುಸ್ತಕ ಪರಿಚಾರಕ ಪ್ರಶಸ್ತಿಯನ್ನು ವಿಜಯಪುರದಲ್ಲಿ ಪುಸ್ತಕ ಸಂಸ್ಕೃತಿಯಲ್ಲಿ ತೊಡಗಿಕೊಂಡಿರುವ ಪುಸ್ತಕ ಪ್ರೀತಿ ಬಳಗದ ರೂಪ ಮತ್ತಿಕೆರೆ ಅವರನ್ನು, ಶ್ರೀ ಗೋಪಾಲ ಕೃಷ್ಣ ಪುಸ್ತಕ ಪರಿಚಾರಕ ಪ್ರಶಸ್ತಿಯನ್ನು ಮೈಸೂರಿನ ಚಿಂತನ ಚಿತ್ತಾರ ಪ್ರಕಾಶನ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಮಳಿಗೆಯ ನಿಂಗರಾಜ ಚಿತ್ತಣ್ಣ ಅವರನ್ನು ಆಯ್ಕೆಮಾಡಲಾಗಿದೆ.

ಪ್ರಕಾಶ್ ಕಂಬತ್ತಳ್ಳಿ. ಡಾ ವಸುಂಧರಾ ಭೂಪತಿ, ಕಾರ್ಯದರ್ಶಿ ನ. ರವಿಕುಮಾರ್, ಜಂಟಿ ಕಾರ್ಯದರ್ಶಿ ಸೃಷ್ಠಿ ನಾಗೇಶ್, ಜಿ.ಎನ್. ಮೋಹನ್, ರಮೇಶ್ ಉಡುಪ, ಕೆ ರಾಜಕುಮಾರ್, ಶ್ರೀಮತಿ ವಿಶಾಲಾಕ್ಷಿ, ಜನಾರ್ಧನ ಪೂಜಾರಿ ಅವರು ಆಯ್ಕೆ ಸಮಿತಿಯಲ್ಲಿದ್ದರು.

ದಿನಾಂಕ ೨೩.೪.೨೦೨೪ರ ವಿಶ್ವ ಪುಸ್ತಕ ದಿನದಂದು ಬೆಂಗಳೂರಿನ ಬಿ ಎಂಶ್ರೀ ಪ್ರತಿಷ್ಠಾನದ ಎಂ. ವಿ. ಸಿ .ಸಭಾಂಗಣದಲ್ಲಿ ಬೆಳಿಗ್ಗೆ ೧೧ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು. ಮುಖ್ಯ ಅತಿಥಿಗಳಾಗಿ ಸಾಹಿತಿ ಎನ್ ಗಣೇಶಯ್ಯ ಸಾಂಸ್ಕೃತಿಕ ಚಿಂಕಕರಾದ ಎಂ ಎಸ್ ಆಶಾದೇವಿ, ಬಿ ಎಂ ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಭೈರಮಂಗಲರಾಮೇಗೌಡ ಅವರು ಭಾಗವಹಿಸುವರು.ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಪ್ರಕಾಶ್ ಕಂಬತ್ತಳ್ಳಿ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಅಂದು ಉಚಿತ ಪುಸ್ತಕಗಳನ್ಮು ವಿತರಿಸಲಾಗುವುದು.

‍ಲೇಖಕರು avadhi

April 5, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: