ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ಸೋಮೇಶ್ವರ ಅವರು ನೆನೆಸಿಕೊಂಡಂತೆ ಬೇಂದ್ರೆ

ನಾ ಸೋಮೇಶ್ವರ್

ಮಡುಗಟ್ಟಿದ ದುಃಖದ ಸನ್ನಿವೇಶಗಳಲ್ಲೂ ಪ್ರಾಸ, ಲಯ, ಶ್ಲೇಷೆಗಳ ಸಾಮರ್ಥ್ಯ ಬಹುಶಃ ಬೇಂದ್ರೆಯಂಥ ಸಹಜ ಕವಿಗಳಿಗಷ್ಟೇ ಸಾಧ್ಯ. 22 ವರ್ಷದ ಮಗ ರಾಮ ತೀರಿಕೊಂಡಾಗ ಅವರ ಸಂಕಟ ಹೇಗಿತ್ತು ನೋಡಿ…

‘ರಾಮ ರಾಮ ಏನು ಆಯಿತೊ ಆಯಿತಾಯಿತು
ನೀನು ಬಂದೆ ಬಂದೆಯಾ
ಏನು ಹೊರಟೆಯಾ ಈಗಲೇ
ಸತ್ತ ದಶರಥ ಇದ್ದ ರಾಮನಿಗಾಗಿ ಅತ್ತನು ಅಂದಿಗೆ
ಸತ್ತ ರಾಮಗೆ ಅತ್ತೇ ಅಳುವನು ಇರುವ ದತ್ತನು ಇಂದಿಗೆ’.
 
ಇದು ಬೇಂದ್ರೆಯವರ ಸಹಜಸ್ಫುರಣೆಯ ಶಕ್ತಿ. ಇಷ್ಟಾದರೂ ಕವಿಗೆ ಬದುಕಿನ ಬಗ್ಗೆ ಬೇಸರವಿಲ್ಲ.
ಬದಲಾಗಿ ಅದಮ್ಯ ಜೀವನಪ್ರೀತಿ. ‘ಒಂದೇ ಒಂದು ಜನ್ಮದಲಿ/ ಒಂದೇ ಬಾಲ್ಯ ಒಂದೇ ಹರೆಯ/ ನಮಗದಷ್ಟೇ ಏತಕೋ!’ ಎಂದು ನಿಸರ್ಗಕ್ಕೆ ಸವಾಲು ಹಾಕುವ ಚಿರಂತನ ಉತ್ಸಾಹ ಅವರದ್ದು.

***

ಒಮ್ಮೆ ಹುಡುಗಿಯೊಬ್ಬಳು ಬೇಂದ್ರೆಯವರಿಗೆ ‘ಅಜ್ಜಾ ನಾ ಕವಿತೆ ಬರೀಬೇಕಂತ ಅನ್ಕೋತ್ತೀನಿ, ನಾ ಎಷ್ಟು ಕವಿತಾ ಬರದ್ರ ನಾ ಕವಯಿತ್ರಿ ಆಗ್ತೀನಿ!’ ಎಂದಾಗ ಬೇಂದ್ರೆ ಥಟ್ಟನೆ ‘ಅಲ್ಲವಾ, ತಾಯಿಯಾಗಬೇಕಂದ್ರ ಎಷ್ಟು ಮಕ್ಕಳನ್ನು ಹಡೀತಾರವ್ವಾ?’ ಎಂದರು. ಆಕೆಗೆ ಉತ್ತರ ಸಿಕ್ಕಿಬಿಟ್ಟಿತು!

 

‍ಲೇಖಕರು G

25 February, 2014

2 Comments

  1. Lokesh Raj Mayya

    ಎಂಥಾ ಕವಿ ಮನಸ್ಸು…ಈ ರೀತಿಯ ಮನಸ್ಥಿತಿ ಬೇಂದ್ರೇ ಮಾಸ್ತರರಿಗೆ ಮಾತ್ರ ಸಾಧ್ಯ…
    ಧನ್ಯವಾದಗಳು ನಾ.ಸೋಮಶೇಖರ್‍ ರವರಿಗೆ……

  2. subbanna mattihalli

    ಬೇಂದ್ರೆ ಅಂದರೆ
    ನೋವಿಗೊಂದು ಸಾಂತ್ವನ
    ನೆನಪಿಸುತ್ತಾರೆ ಸಂತನ
    ಅವರ ಸ್ಮರಣ ಚಿರಂತನ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading