ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ ಅವರ ಹೊಸ ಕವಿತೆ – ಬೆಳಕು ಕಾಣದ ಪಯಣ

ನಾ ದಿವಾಕರ

ಹೆಜ್ಜೆ ಗುರುತುಗಳೆಲ್ಲ ಚದುರಿಹೋಗಿವೆ
ಛಿದ್ರ ಭಾವಗಳ ನೆನಪಿನ ರಾಶಿಯಲಿ
ಅಂತರ್ದೀಪ  ನಂದಿ ಹೋಗುವ ಆತಂಕ…
ಮೂಡಿದ ಅಕ್ಷರಗಳ ನಡುವೆ
ಮರುಕಳಿಸುತಿಹ ಹಳೆಯ ಚಹರೆಗಳು;

ಕತ್ತಲ ಅಣಕಿಸುವ ಬೆಳಕಿಂಡಿಗಳು
ಕಾರ್ಗತ್ತಲ ಹಾದಿಬೇಲಿಯ ಮುಳ್ಳುಗಳು
ಸವೆದ ಹಾದಿಯ ಮೈಲಿಗಲ್ಲುಗಳಾಗಿವೆ
ಜೀವಭಾವದ ಘರ್ಷಣೆಯಲಿ
ಶಿಥಿಲವಾದ ಸಂಬಂಧದ ಸೇತುವೆಗಳು;



ಸುಡುವ ಹಣತೆಯ ಬಿಂಬದಲಿ
ಅನಾಥ ತರಗೆಲೆಗಳು ಸಂಭಾಷಿಸುತ್ತಿವೆ
ತೊಗಲಿಗಂಟಿದ ಹೆಗಲ ಹೆಗ್ಗುರುತು
ಹೆಜ್ಜೇನಿನಂತೆ ಕುಟುಕುತ್ತಿರುವಾಗ
ಬತ್ತಿ ಹೋದಂತಿವೆ ವಾತ್ಸಲ್ಯದ ಚಿಲುಮೆಗಳು;

ಎದೆಯ ಚಿತೆಯಲಿ ಬೆಂದ ಭಾವನೆಗಳು
ನಿರ್ವಾತದಲಿ ಪುಟಿದೇಳುವಾಗ
ಕಳೆದು ಹೋದ ಮುಖ ಚಹರೆಗಳಿಗೆ ಅಸ್ತಿತ್ವದ
ಹುಡುಕಾಟ; ದಿಕ್ಕುಗಾಣದ 
ಪಯಣದಲಿ ವಿಸ್ಮೃತಿಯ ತುಣುಕುಗಳು! 

‍ಲೇಖಕರು Adminm M

19 August, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading