ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ಬರೀತಾರೆ: ರೂಪಾಯಿ ಅಪಮೌಲ್ಯ

ರೂಪಾಯಿ ಅಪಮೌಲ್ಯ ನವ ಉದಾರವಾದದ ಪ್ರತಿಫಲ
ಭಾರತ ವಿಶ್ವದ ಆಥರ್ಿಕತೆಯಲ್ಲಿ ಅಗ್ರ ಸ್ಥಾನ ಪಡೆಯಲಿದೆ
ಭಾರತ ವಿಶ್ವ ಆಥರ್ಿಕತೆಯಲ್ಲಿ ಮುಂಚೂಣಿ ರಾಷ್ಟ್ರವಾಗಿದೆ
ಜಾಗತೀಕರಣದ ಪುಟ್ಟ ವಿಶ್ವದಲ್ಲಿ ಭಾರತ ಬೃಹತ್ ಆಥರ್ಿಕ ಶಕ್ತಿಯಾಗಿ ಹೊರಹೊಮ್ಮಿದೆ
ನವ ಉದಾರವಾದ ನೀತಿಗಳು ಭಾರತವನ್ನು ಅಗ್ರಮಾನ್ಯ ರಾಷ್ಟ್ರವನ್ನಾಗಿ ಮಾಡುತ್ತವೆ
ಜಾಗತೀಕರಣದಿಂದ ಭಾರತ ಸಮೃದ್ಧ ರಾಷ್ಟ್ರವಾಗುತ್ತದೆ’
ಈ ಘೋಷಣೆಗಳು ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲ ಭಾರತದ ಮಾಧ್ಯಮ ವಲಯಗಳಲ್ಲಿ, ವಿದ್ಯುನ್ಮಾನ ಮಾಧ್ಯಮಗಳ ಚಚರ್ೆಗಳಲ್ಲಿ, ಪತ್ರಿಕೆಗಳ ಅಂಕಣಗಳಲ್ಲಿ,, ರಾಜಕೀಯ ಕ್ಷೇತ್ರದಲ್ಲಿ, ಶಾಸನ ಸಭೆಯ ಕಲಾಪಗಳಲ್ಲಿ , ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮೊಳಗುತ್ತಲೇ ಇವೆ. ಇವು ಕೇವಲ ಘೋಷಣೆಗಳಲ್ಲ, ಈ ದೇಶವನ್ನು ಆಳುತ್ತಿರುವ ಆಳುವ ವರ್ಗಗಳ ವೇದ ಮಂತ್ರವೂ ಹೌದು. ಬಂಡವಾಳ ವ್ಯವಸ್ಥೆಯ ಜಾಗತೀಕರಣ ಮತ್ತು ಇದನ್ನು ಪೋಷಿಸುವ ನವ ಉದಾರವಾದ ವಿಶ್ವದ ಹಲವು ರಾಷ್ಟ್ರಗಳನ್ನು ದಿವಾಳಿಯ ಅಂಚಿಗೆ ಕೊಂಡೊಯ್ದಿರುವ ನಿದರ್ಶನಗಳು ಸ್ಪಷ್ಟವಾಗಿ ಕಣ್ಣಮುಂದಿದ್ದರೂ ಜಾಗತೀಕರಣ ಸೃಷ್ಟಿಸಿರುವ ಭ್ರಮೆ ಮತ್ತು ಮಂಜಿನ ಪರದೆ ವಾಸ್ತವ ಸಂಗತಿಗಳನ್ನು ಜಾಣ್ಮೆಯಿಂದ ಮರೆಮಾಚಿದೆ. ಈ ಭ್ರಮಾಲೋಕದಲ್ಲಿ ವಿಹರಿಸುತ್ತಿರುವ ದಂತದರಮನೆಯ ನಿವಾಸಿಗಳಿಗೆ ನವ ಉದಾರವಾದ ಸೃಷ್ಟಿಸುವ ಅಭದ್ರತೆ ಮತ್ತು ಅನಿಶ್ಚಿತತೆಗಳೆಲ್ಲವೂ ತಾತ್ಕಾಲಿಕ ಸಮಸ್ಯೆಗಳಾಗಿ ಗೋಚರಿಸುತ್ತವೆ. ಆದರೆ ನವ ಉದಾರವಾದದ ಪ್ರಹಾರಕ್ಕೆ ಬಲಿಯಾಗುವ ಜನಸಾಮಾನ್ಯರಿಗೆ ಇವುಗಳು ಮಮರ್ಾಘಾತವಾಗಿ ಪರಿಣಮಿಸುತ್ತವೆ. ದೇಶ 1991ರ ಸ್ಥಿತಿಗೆ ಮರಳುವುದಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸ್ವಪ್ರೇರಣೆಯಿಂದ ಹೇಳಿರುವುದನ್ನು ನೋಡಿದರೆ, ಆಳ್ವಿಕರ ಮನಸ್ಸಿನಲ್ಲಿ ಆತಂಕ ಸೃಷ್ಟಿಯಾಗಿರುವುದು ಸ್ಪಷ್ಟವಾಗುತ್ತದೆ.
ಭಾರತ ಆಥರ್ಿಕ ಸಂಕಷ್ಟದಿಂದ ಪಾರಾಗಲು ಜಾಗತೀಕರಣವೊಂದೇ ಸೂತ್ರ ಎಂದು ಭಾವಿಸಿ ನವ ಉದಾರವಾದವನ್ನು ಬಿಗಿದಪ್ಪಿದ ಭಾರತದ ಆಳ್ವಿಕರಿಗೆ ಎರಡು ದಶಕಗಳ ನಂತರ ಜಾಗತೀಕರಣದ ಬಿಸಿ ತಾಕುತ್ತಿರುವುದು ಒಂದು ರೀತಿಯಲ್ಲಿ ಸ್ವಾಗತಾರ್ಹವೆಂದೇ ಹೇಳಬಹುದು. ದೇಶದ ಪ್ರಜೆಗಳು ಸಂಕಷ್ಟದ ಪರಿಸ್ಥಿತಿ ಎದುರಿಸಿದಾಗ ಅಥವಾ ಆಳ್ವಿಕರ ಆಡಳಿತ ನಡೆಸುವ ಸಾಮಥ್ರ್ಯವನ್ನು ಪ್ರಶ್ನಿಸಲು ಮುಂದಾದಾಗ ಪ್ರಭುತ್ವದ ರಕ್ಷಣೆಗೆ ನಿಲ್ಲುವ ವಲಯಗಳು ರೂಪಾಯಿ ಅಪಮೌಲ್ಯೀಕರಣದಿಂದ ಜನಸಾಮಾನ್ಯರ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂಬ ಹಸಿ ಸುಳ್ಳನ್ನು ಬಿತ್ತರಿಸುತ್ತಲೇ ಇರುತ್ತವೆ. ಅಥವಾ ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಆಹ್ವಾನಿತ ಆಸ್ಥಾನ ವಿದ್ವಾಂಸರ ಮೂಲಕ ಈ ಹಸಿ ಸುಳ್ಳನ್ನು ದೃಢೀಕರಿಸುತ್ತಿರುತ್ತವೆ. ರಾಜಕೀಯ ಪಕ್ಷಗಳ ಆಡಳಿತ ನೀತಿಯನ್ನು ಟೀಕಿಸುವ ಮೂಲಕ ಟಿವಿ ಚೌಕಟ್ಟಿನಲ್ಲಿ ಬರುವ ರಾಜಕೀಯ ನಾಯಕರು/ವಿಶ್ಲೇಷಕರು/ಅನ್ವೇಷಕರು ಪ್ರಭುತ್ವದ ನೀತಿಯಲ್ಲಿರುವ ಹುಳುಕುಗಳನ್ನು ಮುಚ್ಚಿಡಲು ಸತತ ಯತ್ನ ಮಾಡುತ್ತಿರುತ್ತಾರೆ. ಆದರೆ ರೂಪಾಯಿ ಅಪಮೌಲ್ಯವಾಗುವುದರಿಂದ ಆಮದು ಮಾಡಿಕೊಳ್ಳುವ ಎಲ್ಲ ವಸ್ತುಗಳ ಬೆಲೆಗಳೂ ಗಗನಕ್ಕೇರುತ್ತವೆ. ನಿತ್ಯಾವಶ್ಯಕ ವಸ್ತುಗಳ ಬೆಲೆಗಳ ಮೇಲೆ ನೇರ ಪ್ರಭಾವ ಬೀರುವ ಡೀಸೆಲ್-ಪೆಟ್ರೋಲ್ ಬೆಲೆಗಳು ಏರುತ್ತಿರುವಂತೆಯೇ ಆಹಾರ ಪದಾರ್ಥಗಳ ಬೆಲೆಗಳೂ ಗಗನಕ್ಕೇರುತ್ತವೆ. ಕೆಲವು ಪದಾರ್ಥಗಳನ್ನು ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉತ್ಪನ್ನಗಳನ್ನು ರಫ್ತು ಮಾಡುವ ಉದ್ಯಮಿಗಳಿಗೆ ಹೆಚ್ಚಿನ ವಿದೇಶಿ ವಿನಿಮಯ ದೊರೆಯುತ್ತವೆ. ಆದರೆ ಈ ಲಾಭಾಂಶವಾಗಲಿ, ವಿದೇಶಿ ಹಣವಾಗಲೀ ಭಾರತದ ಆಥರ್ಿಕತೆಗೆ ನೆರವಾಗುವುದಿಲ್ಲ. ಕಾರಣ ಇದು ಖಾಸಗಿ ಲಾಭಕೋರ ಉದ್ಯಮಿಗಳ ಪಾಲಾಗಿರುತ್ತದೆ. ದೇಶದಲ್ಲಿ ಉಳಿತಾಯದ ಪ್ರಮಾಣ ಕಡಿಮೆಯಾಗುತ್ತದೆ. ಸಣ್ಣ ಬಂಡವಾಳ ಹೂಡಿಕೆಯೂ ಸ್ಥಗಿತವಾಗುತ್ತದೆ. ಈ ವಾಸ್ತವ ಸಂಗತಿಗಳನ್ನು ಜನತೆಗೆ ತಿಳಿಸುವ ಬದಲು ಮಾಧ್ಯಮಗಳಲ್ಲಿ ಚಿನ್ನದ ಬೆಲೆ ಏರಿಕೆ, ಮಾರುಕಟ್ಟೆ ಸೂಚ್ಯಂಕದ ಕುಸಿತ ಮತ್ತು ಷೇರುಮಾರುಕಟ್ಟೆಯ ಬಿಕ್ಕಟ್ಟುಗಳನ್ನೇ ಬಿತ್ತರಿಸಲಾಗುತ್ತದೆ. ಇದನ್ನು ನಿವರ್ಿವಾದವಾಗಿ ಚಾಣಕ್ಯ ತಂತ್ರ ಎನ್ನಬಹುದು.
ಅಪಮೌಲ್ಯದ ಜಪದಲ್ಲಿ ಜನತೆ
ಉದಾರವಾದವನ್ನು ಆಲಂಗಿಸಿಕೊಂಡು ಪೂಜಿಸುತ್ತಿರುವ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘಟಿತ ಮಂಡಲಿ (ಂಠಛಿಚಿಟ).ತನ್ನ ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಆಳ್ವಿಕರ ಬೊಗಳೆ ಭರವಸೆಗಳನ್ನು ಜನತೆಯ ಮುಂದೆ ಬಿಚ್ಚಿಟ್ಟಿದೆ. ರೂಪಾಯಿ ಅಪಮೌಲ್ಯೀಕರಣ ಭಾರತದ ಮಧ್ಯಮ ವರ್ಗಗಳಿಗೆ ಮಮರ್ಾಘಾತ ನೀಡಿದೆ ಎಂದು ಮಂಡಲಿಯ ವರದಿಯಲ್ಲಿ ಹೇಳಲಾಗಿದೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಈರುಳ್ಳಿ, ತರಕಾರಿಗಳು, ಬೇಳೆ ಪದಾರ್ಥಗಳು, ಅಕ್ಕಿ , ರಾಗಿ , ಜೋಳ ಹೀಗೆ ಜನಸಾಮಾನ್ಯರು ದಿನನಿತ್ಯ ಬಳಸುವ ಪ್ರತಿಯೊಂದು ಅವಶ್ಯಕ ವಸ್ತುವಿನ ಬೆಲೆಯೂ ಗಗನಕ್ಕೇರಿದೆ. ತರಕಾರಿ=ಈರುಳ್ಳಿ=ಅಕ್ಕಿ=ಪೆಟ್ರೋಲ್ ಈ ಬೆಲೆ ಸಮೀಕರಣ ಆಳ್ವಿಕರ ದೃಷ್ಟಿಗೆ ಗೋಚರಿಸದಿದ್ದರೂ ದೇಶದ ಮಧ್ಯಮ ವರ್ಗದ ಜನತೆಗೆ ಇದರ ಬಿಸಿ ತಟ್ಟಿದೆ. ಮಂಡಲಿಯ ಸಮೀಕ್ಷೆಯ ಪ್ರಕಾರ ಶೇ 78ರಷ್ಟು ಮಧ್ಯಮ ವರ್ಗದ ಜನತೆ ತಮ್ಮ ಮಾಸಿಕ ವರಮಾನದಲ್ಲಿ ಸಂಸಾರ ತೂಗಿಸಲಾಗದೆ ಮನರಂಜನಾ ವೆಚ್ಚವನ್ನು ಕಡಿಮೆ ಮಾಡಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ರೂಪಾಯಿ ಮೌಲ್ಯ ಶೇ 13ರಷ್ಟು ಕುಸಿತ ಕಂಡಿದೆ. ಮéಾಧ್ಯಮಗಳು ಹೇಳುವಂತೆ ಕೇವಲ ಚಿನ್ನದ ಆಮದು ಸುಂಕ ಮಾತ್ರ ಜನತೆಯನ್ನು ಬಾಧಿಸುತ್ತಿಲ್ಲ. ವಿದ್ಯುನ್ಮಾನ ಉಪಕರಣಗಳು, ವಾಹನಗಳ ಬಿಡಿ ಭಾಗಗಳು ಸಹ ಆಮದಾಗುತ್ತವೆ. ಭಾರತದ ಶೇ 80ರಷ್ಟು ಕಚ್ಚಾತೈಲದ ಅವಶ್ಯಕತೆಯನ್ನು ಆಮದು ಮಾಡಿಕೊಳ್ಳುವ ಮೂಲಕ ಪೂರೈಸಲಾಗುತ್ತದೆ. ಹಾಗಾಗಿ ಆಮದು ಸುಂಕ ಹೆಚ್ಚಾಗದಿದ್ದರೂ ಡಾಲರ್ ಬೆಲೆ ಹೆಚ್ಚಾಗಿರುವುದರಿಂದ ತೈಲೋತ್ಪನ್ನಗಳ ಬೆಲೆಗಳೂ ಗಗನಕ್ಕೇರುತ್ತವೆ.
ವಿದೇಶಿ ಬಂಡವಾಳ ಹೂಡಿಕೆದಾರರು ಭಾರತದಲ್ಲಿ ಬಂಡವಾಳ ಹೂಡಲು ಹಿಂಜರಿಯುತ್ತಿದ್ದು ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿನ ಬಿಕ್ಕಟ್ಟಿನ ನಡುವೆಯೇ ತಮ್ಮ ಬಂಡವಾಳ ಹೂಡಿಕೆಯನ್ನೂ ಸರಿದೂಗಿಸುತ್ತಿದ್ದಾರೆ. ಬೃಹತ್ ಬಂಡವಾಳ ಹೂಡಿಕೆದಾರರು, ವಿದೇಶಿ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಸುರಕ್ಷಿತ ವಲಯಗಳನ್ನು ಶೋಧಿಸುತ್ತಿದ್ದು ತಮ್ಮ ಬಳಿ ಇರುವ ಯೂರೋಗಳನ್ನು ಮಾರಾಟ ಮಾಡಿ ಡಾಲರ್ ಕೊಳ್ಳುತ್ತಿದ್ದಾರೆ. ಹಾಗಾಗಿ ಡಾಲರ್ ಮೌಲ್ಯ ಹೆಚ್ಚಾಗುತ್ತಿದೆ. ಇದರ ಪರಿಣಾಮವೆಂದರೆ ಬಂಡವಾಳ ಹೂಡಿಕೆದಾರರು ಭಾರತದ ಮಾರುಕಟ್ಟೆಯಲ್ಲಿನ ಬಂಡವಾಳವನ್ನು ಹಿಂತೆಗೆದು ಚಿನ್ನ ಮತ್ತು ಅಮೆರಿಕದ ಡಾಲರ್ನಲ್ಲಿ ಹೂಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿನ ಆಥರ್ಿಕ ಅನಿಶ್ಚಿತತೆ, ದೇಶೀಯ ಕರೆನ್ಸಿಯಲ್ಲಿ ಬಂಡವಾಳ ಹೂಡುವುದರಲ್ಲಿನ ಅಪಾಯಗಳು ಮತ್ತು ಹಣಕಾಸು ಸಂಸ್ಥೆಗಳು ಮಾರುಕಟ್ಟೆಯಿಂದ ಹಣವನ್ನು ಹಿಂಪಡೆಯುತ್ತಿರುವುದು ಡಾಲರ್ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.
ಆಮದು ಮಾಡಿಕೊಳ್ಳುವ ಉದ್ಯಮಗಳಿಗೆ ರೂಪಾಯಿ ಅಪಮೌಲ್ಯೀಕರಣ ಆಘಾತಕಾರಿಯಾಗಿದ್ದರೆ ಭಾರತದ ರಫ್ತು ಉದ್ಯಮಗಳಿಗೆ ಇದು ವರದಾನವಾಗಲಿದೆ. ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಲಾಭ ಸೃಷ್ಟಿಯಾಗುತ್ತದೆ. ಐಟಿ ಕ್ಷೇತ್ರದ 70 ಶತಕೋಟಿ ಡಾಲರ್ ಮೌಲ್ಯದ ಆದಾಯದ ಪೈಕಿ ಶೇ 85ರಷ್ಟು ಆದಾಯ ವಿದೇಶಿ ಮಾರುಕಟ್ಟೆಗಳಿಂದಲೇ ಒದಗಿಬರುತ್ತದೆ. ಈಗ ಡಾಲರ್ ಮೌಲ್ಯ ಹೆಚ್ಚಾಗುತ್ತಿರುವುದರಿಂದ ಐಟಿ ಕ್ಷೇತ್ರದ ಆದಾಯ ದುಪ್ಪಟ್ಟಾಗುತ್ತದೆ. ಹಾಗೆಯೇ ಸಿದ್ಧ ಉಡುಪು ಕ್ಷೇತ್ರದಲ್ಲೂ ರಫ್ತು ಆದಾಯ ಹೆಚ್ಚಾಗುತ್ತದೆ. ಬಂಡವಾಳ ವ್ಯವಸ್ಥೆಯ ಮತ್ತು ಹಣಕಾಸು ಬಂಡವಾಳದ ಒಂದು ಲಕ್ಷಣವೆಂದರೆ ಬಿಕ್ಕಟ್ಟು ಸೃಷ್ಟಿಯಾದ ಕೂಡಲೇ ಬಂಡವಾಳಿಗರು ಸುರಕ್ಷಿತ ತಾಣಗಳನ್ನು ಅರಸಿ ತಮ್ಮ ಯಾತ್ರೆ ಆರಂಭಿಸಿಬಿಡುತ್ತಾರೆ. ದೇಶದ ಆಥರ್ಿಕ ಸದೃಢತೆಗಾಗಿ ತಮ್ಮ ಉದ್ಯಮವನ್ನು ಮುಡಿಪಾಗಿಸುವ ಬಣ್ಣದ ಮಾತುಗಳನ್ನಾಡುವ ಐಟಿ ಕ್ಷೇತ್ರ ಮತ್ತಿತರ ಔದ್ಯಮಿಕ ಕ್ಷೇತ್ರಗಳು ಕೊಂಚ ಮಟ್ಟಿಗೆ ನೆಲ ಅಲುಗಾಡಿದರೆ ಪರಾರಿಯಾಗಿರುತ್ತಾರೆ. ದೇಶಪ್ರೇಮ ಮತ್ತು ದೇಶದ ಬಗೆಗಿನ ಕಾಳಜಿ ಭೂಗತವಾಗಿರುತ್ತದೆ. ಡಾಲರ್ ಪ್ರೇಮ ರಾರಾಜಿಸುತ್ತದೆ. ಈ ಸಂದರ್ಭದಲ್ಲಿ ಬ್ಯಾಂಕುಗಳಲ್ಲಿನ ಅನಿವಾಸಿ ಠೇವಣಿ ವಿದೇಶಿ ಬ್ಯಾಂಕುಗಳಿಗೆ ಗುಳೇ ಹೋಗುವುದನ್ನು ಗಮನಿಸಿದಾಗ ಬಂಡವಾಳ ವ್ಯವಸ್ಥೆಯ ಧನಗಾಹಿತನದ ಅರಿವಾಗುತ್ತದೆ.
ಭಾರತದ ಆಥರ್ಿಕತೆ 1991ರ ಪರಿಸ್ಥಿತಿಗೆ ಮರಳುವುದಿಲ್ಲ ಎಂದು ಆಶ್ವಾಸನೆ ನೀಡುವ ದೇಶದ ಪ್ರಧಾನಿ ಮನಮೋಹನ್ ಸಿಂಗ್ ಭವಿಷ್ಯದಲ್ಲಿ ಉಂಟಾಗಬಹುದಾದ ವಿಪ್ಲವಗಳ ಬಗ್ಗೆ ಮೌನ ವಹಿಸುತ್ತಾರೆ. ಮಾರುಕಟ್ಟೆ ಸೂಚ್ಯಂಕ, ವಿದೇಶಿ ವಿನಿಮಯ, ವಿತ್ತೀಯ ಖಾತೆ ಕೊರತೆ, ಡಾಲರ್ ಹೆಚ್ಚಳ, ರೂಪಾಯಿ ಅಪಮೌಲ್ಯ ಇವೆಲ್ಲವೂ ದೇಶದ ಶೇ 70ರಷ್ಟು ಜನತೆಯ ಗ್ರಹಿಕೆಗೆ ನಿಲುಕದ ಸಂಗತಿಗಳು. ಈ ಜನಸಮುದಾಯಗಳಿಗೆ ಈರುಳ್ಳಿ ಬೆಲೆ, ಆಹಾರ ಪದಾರ್ಥಗಳ ಬೆಲೆ, ಅಕ್ಕಿ, ರಾಗಿ, ಗೋಧಿ, ಸೀಮೆ ಎಣ್ಣೆ, ಪೆಟ್ರೋಲ್ ಡೀಸೆಲ್ ಬೆಲೆ ಇವು ಮಾತ್ರ ಪ್ರಮುಖವಾಗುತ್ತವೆ. ಈ ದೇಶದ ಅರ್ಥ ವ್ಯವಸ್ಥೆ ಸದೃಢವಾಗಿರುವುದೂ ಈ ಜನತೆಯ ಬೆವರು, ಪರಿಶ್ರಮದಿಂದಲೇ ಎಂದು ಹೇಳಬೇಕಿಲ್ಲ. ಅರ್ಥ ವ್ಯವಸ್ಥೆಯಲ್ಲಿನ ಏರುಪೇರುಗಳು ಜನಸಾಮಾನ್ಯರನ್ನು ಹೇಗೆ ಬಾಧಿಸುತ್ತವೆ ಎಂಬ ಸಮೀಕ್ಷೆಯನ್ನು ಮಾಧ್ಯಮಗಳಾಗಲಿ, ಸಕರ್ಾರಿ ವಲಯದ ತಜ್ಞರಾಗಲಿ ಮಾಡುವುದಿಲ್ಲ. ಇಷ್ಟು ಬಿಕ್ಕಟ್ಟಿದ್ದರೂ ಚಿನ್ನದ ಖರೀದಿ ಕಡಿಮೆಯಾಗಿಲ್ಲ ಎಂದು ಹೆಡ್ಲೈನ್ಸ್ಗಳಲ್ಲಿ ಬಿಂಬಿಸುವ ಮಾಧ್ಯಮಗಳಿಗೆ ತಮ್ಮ ದಿನಗೂಲಿಯಿಂದಲೇ ಜೀವನ ಸಾಗಿಸುವ ದೇಶದ ಬಹುಸಂಖ್ಯಾತ ಜನತೆಗೆ ಚಿನ್ನದ ಬೆಲೆಯ ಬಗ್ಗೆ ಎಷ್ಟು ಕಾಳಜಿ ಇರಬಹುದು ಎಂಬ ಗ್ರಹಿಕೆಯೇ ಇರುವುದಿಲ್ಲ.
ಇದೀಗ ದೇಶ ಎದುರಿಸುತ್ತಿರುವ ಸಮಸ್ಯೆಯ ಪರಿಹಾರ ಮಾರುಕಟ್ಟೆ ವ್ಯವಸ್ಥೆಯಲ್ಲೇ ಅಡಗಿದೆ ಎಂದು ನಂಬಿರುವ ಆಳುವವರ್ಗದ ಪ್ರತಿನಿಧಿಗಳು ಮಾರುಕಟ್ಟೆಯ ನೇಪಥ್ಯದಲ್ಲಿ ತಮ್ಮ ಜೀವನವನ್ನೇ ಹರಾಜು ಮಾರುಕಟ್ಟೆಯಲ್ಲಿಟ್ಟು ಬಾಳ ಬಂಡಿಸಾಗಿಸುವ ಅಸಂಖ್ಯಾತ, ಕೋಟ್ಯಂತರ ಜನತೆಗೆ, ಕೃಷಿ ಕಾಮರ್ಿಕರಿಗೆ, ಕಟ್ಟಡ ಕಾಮರ್ಿಕರಿಗೆ, ಕಾಖರ್ಾನೆಯ ನೌಕರರಿಗೆ, ದಿನಗೂಲಿ ನೌಕರರಿಗೆ, ರಸ್ತೆ ಬದಿಯ ವ್ಯಾಪಾರಿಗಳಿಗೆ ಏನು ಉತ್ತರ ನೀಡಿಯಾರು. ಎಲ್ಲರನ್ನೂ ಒಳಗೊಳ್ಳುವ ಬ್ಯಾಂಕಿಂಗ್ ವ್ಯವಸ್ಥೆ ಹೆಚ್ಚು ಪ್ರಚಲಿತವಾಗುತ್ತಿರುವಂತೆಯೇ ಜನಸಾಮಾನ್ಯರ ಸುಲಿಗೆ ಮಾಡುವ ಚಿನ್ನದ ಸಾಲ ನೀಡುವ ಹಣಕಾಸು ಸಂಸ್ಥೆಗಳು ಮತ್ತು ಖಾಸಗಿ ಲೇವಾದೇವಿ ಅಂಗಡಿಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವುದರ ಅರ್ಥವೇನು ? ಮೀಟರ್ ಬಡ್ಡಿ ಇನ್ನೂ ಹೆಚ್ಚಾಗುತ್ತಿರುವುದರ ಅರ್ಥವೇನು ? ಅಂದರೆ ಜನತೆಗೆ ಅತ್ಯವಶ್ಯವಾದ ನಿತ್ಯವಶ್ಯವಾದ ಅಲ್ಪಪ್ರಮಾಣದ ಬಂಡವಾಳವನ್ನು ಒದಗಿಸಳು ನಮ್ಮ ದೇಶ ವಿತ್ತೀಯ ವ್ಯವಸ್ಥೆ ವಿಫಲವಾಗಿದೆ. ಇದನ್ನು ಖಾಸಗಿ ಸುಲಿಗೆದಾರರು ಪೂರೈಸುತ್ತಿದ್ದಾರೆ. ಇದಕ್ಕೆ ಪರಿಹಾರವೇನು ?

‍ಲೇಖಕರು G

2 September, 2013

3 Comments

  1. srinivasamurthy

    ನೀವು ಬರೆದಿರುವ ವಿಷಯ ಎಲ್ಲರು ಒಪ್ಪುವಂತದ್ದೆ. ಆದರೆ, ನೀವು ansi ಯಿಂದ unicode ಗೆ ಮಾರ್ಪಾಡುಗೊಳಿಸುವಾಗ ಒತ್ತಕ್ಶರಗಳು ತಪ್ಪಾಗಿರುವುದನ್ನು ಗಮನಿಸಿಲ್ಲವೆಂದು ತೋರುತ್ತದೆ. ನುಡಿ ತಂತ್ರಾಂಶದ ಬದಲು ಬರಹ ವನ್ನು ಬಳಸಿದರೆ ಒಳಿತು. ಆಂಗ್ಲ ಪದಗಳು ನುಡಿಯಲ್ಲಿ ಸರಿಯಾಗಿ ಮಾರ್ಪಾಡು ಆಗುವುದಿಲ್ಲ. ಬರಹದಲ್ಲೂ ನುಡಿಯಲ್ಲಿ ಬರೆಯುವ ಕೀಲಿಮಣೆ ಇದೆ. ದಯವಿಟ್ಟು ಒಮ್ಮೆ ಬರಹವನ್ನು ಬಳಸಿ ನೋಡಿ.

  2. Ananda Prasad

    ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಹೊರತು ಭಾರತಕ್ಕೆ ಅನ್ಯ ಆಯ್ಕೆ ಇರಲಿಲ್ಲ. ಭಾರತವು ಇದನ್ನು ಅನಿವಾರ್ಯವಾಗಿ ಒಪ್ಪಿಕೊಂಡಿದೆ ಎಂಬುದು ಸ್ಪಷ್ಟ. ಕಮ್ಯುನಿಷ್ಟ್ ಚೀನಾ ಕೂಡ ಮುಕ್ತ ಆರ್ಥಿಕ ನೀತಿಯನ್ನು ನಮ್ಮ ದೇಶಕ್ಕಿಂತ ಬಹಳ ಮೊದಲೇ ಅಳವಡಿಸಿಕೊಂಡಿತ್ತು. ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳಿಗೆ ತೆರೆದುಕೊಳ್ಳದೆ ಇದ್ದಿದ್ದರೆ ಇಂದು ಭಾರತದ ಸ್ಥಿತಿ ದಯನೀಯ ಹಾಗೂ ಈಗ ಇರುವುದಕ್ಕಿಂತಲೂ ಎಷ್ಟೋ ಪಟ್ಟು ಕೆಟ್ಟದಾಗಿರುತ್ತಿತ್ತು. ಸತತವಾಗಿ ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಬೇಕಾದ ಮೂಲಭೂತ ಸೌಲಭ್ಯ, ಉದ್ಯೋಗ ಒದಗಿಸುವುದು ಸರ್ಕಾರದಿಂದ ಸಾಧ್ಯವೇ ಇರಲಿಲ್ಲ. ನಾವು ಎಷ್ಟೇ ದೂಷಿಸಿದರೂ ಇಂದು ಖಾಸಗೀಕರಣ ಹಾಗೂ ಜಾಗತೀಕರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ನಾವು ಕೇವಲ ಕೃಷಿಯನ್ನೇ ಮಾಡಿಕೊಂಡು ಸರಳ ಜೀವನದಲ್ಲಿ ತೃಪ್ತಿ ಕಾಣುವ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ದೇಶದ ಜನ ತಯಾರಿಲ್ಲ. ಹಾಗಿದ್ದರೆ ಮಾತ್ರ ಜಾಗತೀಕರಣ, ಉದಾರೀಕರಣವನ್ನು ವಿರೋಧಿಸಿ ಬದುಕಬಹುದು. ಇಂದು ಸಾಕಷ್ಟು ಜಮೀನು ಇರುವ ಕೃಷಿಕರೂ ತಮ್ಮ ಮಕ್ಕಳನ್ನು ಕೃಷಿಯಲ್ಲಿ ಜೀವನ ಕಂಡುಕೊಳ್ಳಬೇಕೆಂದು ಬಯಸುತ್ತಿಲ್ಲ ಅಥವಾ ಅವರು ಬಯಸಿದರೂ ಯುವ ಜನಾಂಗ ಕೃಷಿಯಲ್ಲಿ ಜೀವನ ಕಂಡುಕೊಳ್ಳಲು ತಯಾರಿಲ್ಲ. ಇದು ಕೃಷಿಯಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ, ಅದರಲ್ಲಿ ಸಾಕಷ್ಟು ಆದಾಯ ಇಲ್ಲ ಎಂಬ ಕಾರಣದಿಂದ ಅಲ್ಲ. ಕೃಷಿಯಲ್ಲಿ ಸಾಕಷ್ಟು ಆದಾಯ ಗಳಿಸಿದ, ಗಳಿಸುತ್ತಿರುವ ಶ್ರೀಮಂತ ಕೃಷಿಕರ ಮಕ್ಕಳು ಕೂಡ ಇಂದು ಕೃಷಿಯಲ್ಲಿ ನಿಲ್ಲುವುದಿಲ್ಲ. ಹೀಗಿರುವಾಗ ಜಾಗತೀಕರಣ, ಉದಾರೀಕರಣ ವಿರೋಧಿಸುವುದರಿಂದ ಪ್ರಯೋಜನ ಇಲ್ಲ.
    ಜಾಗತೀಕರಣ, ಉದಾರೀಕರಣ ಜನರಿಗೆ ಬೇಡವಾಗಿದ್ದರೆ, ಮುಕ್ತ ಆರ್ಥಿಕ ನೀತಿ ಮಾರಕ ಎಂದಿದ್ದರೆ ಅದನ್ನು ವಿರೋಧಿಸುವ ಎಡ ಪಕ್ಷಗಳು ಮೂರನೇ ಎರಡು ಬಹುಮತ ಪಡೆದು ಅಧಿಕಾರಕ್ಕೆ ಬರಬೇಕಾಗಿತ್ತು ಆದರೆ ಹಾಗೆ ಆಗುತ್ತಿಲ್ಲ ಬದಲಿಗೆ ಎಡಪಕ್ಷಗಳ ಬಲ ಚುನಾವಣೆಯಿಂದ ಚುನಾವಣೆಗೆ ಕುಗ್ಗುತ್ತಲೇ ಬರುತ್ತಿದೆ ಹಾಗೂ ಹೀಗೇ ಮುಂದುವರಿದರೆ ಎಡ ಪಕ್ಷಗಳು ಭಾರತದ ರಾಜಕೀಯದಲ್ಲಿ ಅಪ್ರಸ್ತುತ ಎಂಬ ಸ್ಥಿತಿಯನ್ನು ತಲುಪಲು ಹೆಚ್ಚು ಸಮಯ ಬೇಕಾಗಲಾರದು. ಯಾರೇ ಅಧಿಕಾರಕ್ಕೆ ಬಂದರೂ ಜಾಗತೀಕರಣ, ಉದಾರೀಕರಣ, ಖಾಸಗೀಕರಣದಿಂದ ತಪ್ಪಿಸಿಕೊಳ್ಳಲು ಇಂದು ಸಾಧ್ಯವೇ ಇಲ್ಲ ಏಕೆಂದರೆ ಪರಿಸ್ಥಿತಿ ಹಾಗೆ ಇದೆ , ಜನರ ಜೀವ ಶೈಲಿ, ಚಿಂತನೆ, ಬೇಕುಗಳು ಹಾಗೆ ಇವೆ. ಇದನ್ನು ವಿರೋಧಿಸುವವರು ಅಪ್ರಸ್ತುತರಾಗುತ್ತಾರೆ.
    ರೂಪಾಯಿ ಅಪಮೌಲ್ಯ ಒಂದು ಹಂತಕ್ಕೆ ಬಂದು ಸ್ಥಿರಗೊಳ್ಳಬಹುದು. ಅಮೆರಿಕಾದ ಆರ್ಥಿಕ ಕುಸಿತದಿಂದ ಶುರುವಾದ ಜಾಗತಿಕ ಅರ್ಥಿಕ ಬಿಕ್ಕಟ್ಟು ಇಡೀ ಜಗತ್ತನ್ನೇ ಆವರಿಸಿದೆ. ಇದು ನಿಧಾನವಾಗಿ ಚೇತರಿಸಿಕೊಳ್ಳುವುದು ಖಚಿತ. ಅಮೆರಿಕಾದ ಆರ್ಥಿಕ ಸ್ಥಿತಿಯಲ್ಲಿ ಕಂಡುಬರುತ್ತಿರುವ ಚೇತರಿಕೆ ಅದರ ಸೂಚಕ. ಇದು ನಿಧಾನವಾಗಿ ಉಳಿದ ದೇಶಗಳ ಅರ್ಥಿಕ ಸ್ಥಿತಿಯ ಚೇತರಿಕೆಗೆ ಕಾರಣವಾಗಲಿದೆ. ಇವೆಲ್ಲ ಒಂದಕ್ಕೊಂದು ಸಂಬಂಧ ಹೊಂದಿರುವ ಕಾರಣ ಇದರಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಜಾಗತಿಕ ಆರ್ಥಿಕ ಸ್ಥಿರತೆ ಮೂಡುತ್ತಿದ್ದಂತೆ ಭಾರತದ ಆರ್ಥಿಕ ಸ್ಥಿತಿಯೂ ಚೇತರಿಸಿಕೊಳ್ಳುವುದು ಖಚಿತ. ಹೀಗಾಗಿ ನಿರಾಶೆಗೆ ಕಾರಣವಿಲ್ಲ.

  3. ರಂಗಸ್ವಾಮಿ ಮೂಕನಹಳ್ಳಿ

    ಪರಿಹಾರ ಬಹಳ ಸಿಂಪಲ್ ಆದರೆ ಅದನ್ನು ಜಾರಿಗೊಳಿಸುವುದು ಮಹಾ ಕಠಿಣ. ಪರಿಹಾರ ಏನು ಅಂದ್ರೆ , ನಮ್ಮ ಹಿರಿಯರಂತೆ ಹಣವಿದ್ದರೆ ವ್ಯಯಿಸುವುದು , ಇದಿದ್ದರಲ್ಲೇ ಬದುಕುವುದು . ಕ್ರೆಡಿಟ್ ಕಾರ್ಡ್ ಸೃಷ್ಟಿ , ಕೇಳಿದವರಿಗೆಲ್ಲ ಸಾಲ , ಮುಂದಿನ ಹತ್ತಾರು ವರ್ಷ ದುಡಿಯುವ ಹಣವನ್ನು ಇಂದೇ ಮುಂಗಡ (ಸಾಲ) ಪಡೆದು ವ್ಯಯಿಸುವುದು ಸಮಸ್ಯೆಯೇ ಮೂಲ ಕಾರಣ. ಈ ತಪ್ಪುಗಳನ್ನು ಮಾಡದಿದ್ದರೆ ಆಯ್ತು , ಸರಳ , ಸುಂದರ ಬದುಕನ್ನು ಇಷ್ಟು ಕ್ಲಿಷ್ಟ ಗೊಳಿಸುವ ಅವಶ್ಯಕತೆ ಇರಲಿಲ್ಲ.
    ಪ್ರೋಗ್ರೆಸ್ .., ಎಲ್ಲಿಯ ಪ್ರೋಗ್ರೆಸ್ ನೀವೇ ಹೇಳಿ , ಹತ್ತು -ಹದಿನೈದು ವರ್ಷದ ಹಿಂದೆ ಐದು ಸಾವಿರದ ಜಾಗದಲ್ಲಿ ಇಂದು ಐವತ್ತು ಸಾವಿರ ಸಂಬಳ , ಐದು ಸಾವಿರದಲ್ಲಿ ,ಐನುರೊ , ಸಾವಿರನೋ ಜನ ಉಳಿಸುತ್ತಿದರು ಈಗ ?
    ಬಡ್ಡಿ ಕಟ್ಟಲು ಬದುಕುತ್ತಿರುವ ಯುವ ಜನತೆಯನ್ನು ನೋಡಿದಾಗ ಪಾಪ ಅನಿಸುತ್ತದೆ , ಹಿಂದೆಯೇ ಮಾಡಿದ್ದುಣ್ಣೋ ಮಹರಾಯ ಎಂಬ ನುಡಿ ಕೇಳಿಸುತ್ತದೆ .
    ದೃಡಚಿತ್ತ , ಹಂಬಲದ ಬೆಂಬಲ ವಿದ್ದರೆ ಖಂಡಿತ ಬದಲಾವಣೆ ಸಾಧ್ಯ , ದಲ್ಲಾಳಿ ಮನಸ್ಥಿತಿ ನಮ್ಮ ಆಡಳಿತಗಾರರಿಂದ ದೊರವಾಗದ ಹೊರತು ಬದಲಾವಣೆ ಅಸಾಧ್ಯ.
    ಭಾರತದಂತ ದೊಡ್ಡ ದೇಶದ ಆರ್ಥಿಕ ಪರಿಸ್ಥಿತಿ ವಿಷ್ಲೇಸುವುದು ಸುಲುಬದ ಕೆಲಸವಲ್ಲ , ಲೇಖಕರು ಸರಳವಾಗಿ , ಸಮರ್ಥವಾಗಿ ಸಮಸ್ಯೆಯನ್ನು ಮಂಡಿಸಿದ್ದಾರೆ, ಅವಕ್ಕೆ ಒಂದೋ ,ಎರಡೋ , ಸರಳ ಪರಿಹಾರ ಸೂಚಿಸಿದ್ದರೆ ಚನ್ನಾಗಿತ್ತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading