
ಕೆ ಅಕ್ಷತಾ
ಮೇಟಿ ಮಲ್ಲಿಕಾರ್ಜುನ ಸರ್ ನನಗೆ ಸಹ್ಯಾದ್ರಿ ಕಾಲೇಜ್ ನಲ್ಲಿ ಮೇಷ್ಟ್ರು.
ಸಭ್ಯ ವರ್ತನೆ ಮತ್ತು ಭಾಷೆ, ಅದ್ಭುತ ಓದು, ಮಾನವೀಯ ಅಂತಃಕರಣ, ವೈಚಾರಿಕ ಸ್ಪಷ್ಟತೆ ಎಲ್ಲವನ್ನು ಮೇಷ್ಟ್ರಾಗಿ ಮೇಟಿ ಸರ್ ನಮಗೆ ಕಲಿಸಿದ್ದಾರೆ..
ಮೊನ್ನೆ ಅಂಬೇಡ್ಕರ್ ಜಯಂತಿಯಂದು ಮೇಟಿ ಸರ್ ಸಾಗರದಲ್ಲಿ `ಇಂದು ಭಾರತ್ ಮಾತಾ ಕಿ ಜೈ’ ಎಂದು ಹೇಳಲೇಬೇಕೆಂದು ಎಲ್ಲರಿಗೂ ಒತ್ತಾಯಿಸಲಾಗುತ್ತಿದೆ. ಇದನ್ನು ರಾಜಕೀಯವಾಗಿ, ಸಾಂಸ್ಕೃತಿಕವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇಂಥದನ್ನು ಹೇಳಲೇಬೇಕೆನ್ನುವುದು ಪ್ರಜಾಪ್ರಭುತ್ವದಲ್ಲಿ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರೆಂದು ಬಿಜೆಪಿಯವರು ಮೇಟಿ ಸರ್ ವಿರುದ್ಧ ಪ್ರತಿಭಟನೆ ನಡೆಸಿ, ಅವರನ್ನು ಕೆಲಸದಿಂದ ತೆಗೆದು ಹಾಕಬೇಕು ಎಂದು ವರಾತ ಹಚ್ಚಿದ್ದಾರೆ.
ಮೇಟಿ ಸರ್ ಹೇಳಿದ್ದರಲ್ಲಿ ತಪ್ಪೇನು ಇಲ್ಲ. ಮೇಟಿ ಸರ್ ಅವರ ನಿಲುವನ್ನು ನಾನು ಸಮರ್ಥಿಸುತ್ತೇನೆ. ಇದು ನಮ್ಮ ವೈಯುಕ್ತಿಕ ಆಯ್ಕೆ ಮತ್ತು ಅಭಿವ್ಯಕ್ತಿಗೆ ಸಂಬಂಧಪಟ್ಟಿರುತ್ತದೆ. ಹಾಗೆಯೇ ಮೇಟಿ ಸರ್ ಅವರ ವೈಯುಕ್ತಿಕ ಅಭಿಪ್ರಾಯವನ್ನು ಅನಗತ್ಯವಾಗಿ ಕಾನೂನಿನ ವ್ಯಾಪ್ತಿಗೆ ಎಳೆದುತರುತ್ತಿರುವವರ ವಿರುದ್ಧವಾಗಿ ನಾವೆಲ್ಲಾ ಒಗ್ಗಟ್ಟಾಗಿ ನಿಲ್ಲಲೇಬೇಕು..
ಮೇಟಿ ಸರ್ ಅಂತ ಪ್ರಾಜ್ಞ ಪ್ರಾಧ್ಯಾಪಕರ ಸಂಖ್ಯೆ ಇಂದು ಬೆರಳೆಣಿಕೆಯಷ್ಟು.. ಅಂಥವರ ಅಭಿವ್ಯಕ್ತಿ ಸ್ವಾತಂತ್ರ್ಯ ಚ್ಯುತಿ ಬರುವುದಾದರೆ.. ಅಂಥವರ ಬಾಯಿಗಳು ಬಂದ್ ಆಗುವುದಾದರೆ.. ಅದು ಇಡೀ ವಿಧ್ಯಾರ್ಥಿ ಸಮುದಾಯಕ್ಕೆ ಆಗುವ ನಷ್ಟ.. ಆದ್ದರಿಂದ ಮೇಟಿ ಸರ್ ಜೊತೆ ನಾವೆಲ್ಲರೂ ನಿಲ್ಲೋಣ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ರಕ್ಷಿಸೋಣ..





0 Comments