ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಸಿರುದ್ದೀನ್ ಶಾ ರಿಂದ ‘ಹಲ್ಲಾ ಬೋಲ್’ ಬಿಡುಗಡೆ

ಮಹತ್ವದ ರಂಗಕರ್ಮಿ, ಜನಪರ ಹೋರಾಟಗಳ ಮುಂಚೂಣಿಯಲ್ಲಿದ್ದ, ಆಳುವವರ ಕೆಂಗಣ್ಣಿಗೆ ತುತ್ತಾಗಿ ನಾಟಕ ಪ್ರದರ್ಶನವಾಗುತ್ತಿರುವಾಗಲೇ ಕೊಲೆಯಾಗಿ ಹೋದ ಸಫ್ದರ್ ಹಷ್ಮಿ ಅವರ ಕುರಿತ ಕೃತಿಯನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.

ಬೆಂಗಳೂರು, ದೆಹಲಿ, ಮುಂಬೈ ಒಂದು ಕೊಂಡಿಯಾಗಿ ಬೆಸೆದುಕೊಂಡು ಜಾಲತಾಣದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

‘ಕ್ರಿಯಾ ಮಾಧ್ಯಮ’ ಹಾಗೂ ‘ಸಮುದಾಯ’ ಜಾಲ ತಾಣದಲ್ಲಿ ಜಂಟಿಯಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಖ್ಯಾತ ನಟ, ರಂಗಕರ್ಮಿ ನಾಸಿರುದ್ದೀನ್ ಶಾ ಅವರು ಮುಂಬೈನಲ್ಲಿ ಕೃತಿಯನ್ನು ಬಿಡುಗಡೆ ಮಾಡಿದರು.

ದೆಹಲಿಯಲ್ಲಿ ಕೃತಿಕಾರ ಸುಧನ್ವ ದೇಶಪಾಂಡೆ ಹಾಗೂ ಖ್ಯಾತ ರಂಗಕರ್ಮಿ, ಜನಮ್ ಸ್ಥಾಪಕರಲ್ಲೊಬ್ಬರಾದ ಹಾಗೂ ಸ್ಫದರ್ ಹಷ್ಮಿ ಅವರ ಪತ್ನಿ ಮಲಯಾಶ್ರೀ ಹಷ್ಮಿ ಅವರು ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ಕೃತಿಯ ಅನುವಾದಕರಾದ ಎಂ ಜಿ ವೆಂಕಟೇಶ್ ಹಾಗೂ ನಟ ಕೆ ಎಸ್ ಅಚ್ಯುತಕುಮಾರ್ ಪಾಲ್ಗೊಂಡಿದ್ದರು.

ಜನವಾದಿ ಮಹಿಳಾ ಸಂಘಟನೆಯ ಕೆ ಎಸ್ ವಿಮಲಾ ಕಾರ್ಯಕ್ರಮ ನಿರ್ವಹಿಸಿದರು.

‍ಲೇಖಕರು avadhi

30 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading