ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿವೋತ್ಸವದ ‘ಗಣೆ ಗೌರವ’ಕ್ಕೆ ಮೀರಸಾಬಿಹಳ್ಳಿ ಶಿವಣ್ಣ ಆಯ್ಕೆ

ಗೋಮಾರದಹಳ್ಳಿ ಮಂಜುನಾಥ್ ಸಿರಾ

ಸಿರಾ ಸೀಮೆ ಸಾಂಸ್ಕೃತಿಕ ವೇದಿಕೆ ಆಯೋಜಿಸುವ ಅಹೋರಾತ್ರಿ ಸಾಂಸ್ಕೃತಿಕ ಜಾಗರಣೆ ಶಿವೋತ್ಸವದ ‘ಗಣೆ ಗೌರವ’ಕ್ಕೆ ಜಾನಪದ ತಜ್ಞ ಡಾ.ಮೀರಸಾಬಿಹಳ್ಳಿ ಶಿವಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಡಾ.ಶಿವಣ್ಣನವರು ಕಾಡುಗೊಲ್ಲರ ಬುಡಕಟ್ಟು ಸಾಂಸ್ಕೃತಿಕ ವೀರರ ಬಗ್ಗೆ ಅಧ್ಯಯನ ಮಾಡಿದ್ದು, ಅದರಲ್ಲಿಯೂ ಎತ್ತಪ್ಪ ಮತ್ತು ಜುಂಜಪ್ಪನ ಕುರಿತು ಆಳವಾಗಿ ತಳಸ್ಪರ್ಶಿ ಅಧ್ಯಯನ ಮಾಡಿರುವುದೇ ‘ಗಣೆ ಗೌರವ’ ನೀಡಲು ಪ್ರಮುಖ ಕಾರಣವಾಗಿದೆ ಎಂದು ಶಿವೋತ್ಸವ ಸಮಿತಿಯ ಡಾ.ಹೊನ್ನಗಾನಹಳ್ಳಿ ಕರಿಯಣ್ಣ ಅಭಿಪ್ರಾಯ ಪಟ್ಟಿದ್ದಾರೆ.

ಒಂದು ನಾಡಿನ ಸಾಂಸ್ಕೃತಿಕ ಪರಂಪರೆಯ ಮುಖ್ಯಧಾರೆಯಿಂದಾಚೆಗೆ, ಅಂದರೆ ಪರಿಧಿಯಾಚೆಗೆ ತಳ್ಳಲ್ಪಟ್ಟ ಮೌಖಿಕ ರೂಪಗಳ ಬೆನ್ನು ಹತ್ತಿ ಅವುಗಳಿಗೆ ಸಾಂಸ್ಕೃತಿಕ ಅನನ್ಯತೆ ತಂದುಕೊಡುವುದು ಡಾ.ಶಿವಣ್ಣನವರ ಪ್ರಧಾನ ಆಸಕ್ತಿಯಾಗಿದೆ. ಜಾನಪದವನ್ನು ಶುದ್ಧಾಂಗ ಪಠ್ಯವನ್ನಾಗಿ ಗ್ರಹಿಸದೆ, ಅದನ್ನು ನಾಗರಿಕತೆ ಇತಿಹಾಸ ಸಮಾಜ ಸಂಸ್ಕೃತಿ ಆರ್ಥಿಕ ಮತ್ತು ಅಧಿಕಾರ ಸಂಬಂಧಗಳ ಮೊತ್ತವಾಗಿ ಅಧ್ಯಯನ ಮಾಡುವವರ ಸಾಲಿನಲ್ಲಿ ಡಾ.ಶಿವಣ್ಣ ಮುಖ್ಯರಾಗಿದ್ದಾರೆ.

‍ಲೇಖಕರು Admin

17 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading