ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಳೆ ಮತ್ತೆ ಬಣ್ಣ ಹಚ್ಚಬೇಕು, ಕುಣಿಯಬೇಕು..

ಆದರ್ಶ

ಹೊಸ ಬ್ರಶ್ಶನ್ನು ತೆರೆದು ಗೀಚುವೆ,
ನೇರ ಮುಖದ ಮೇಲೆ ಬರೆವೆ,
ಕೆಂಪು, ಹಸಿರು, ಹಳದಿ ಬಣ್ಣಗಳ ಮುಖವಾಡ,
ಒಂದು ಕಣ್ಣಿನಿಂದ ನೇರ ಇನ್ನೊಂದಕ್ಕೆ ಗೀರು,
ನಾಸಿಕದ ಬಳಿ , ಕಿವಿಗಳ ಮಧ್ಯೆ , ಮೀಸೆ ದಾಡಿಗಳೆಲ್ಲದರ ಮೇಲೆ
ಸುಕ್ಕುಗಟ್ಟಿದ ಮುಖ ಇದರ ಹಿಂದೆ ಅಡಗಿ ಹೋಗುವಂತೆ …

ಹೊಸ ಬ್ರಶ್ಶನ್ನು ತೆರೆದು ಗೀಚುವೆ…

ನಂಗೀಗ ಅರವತ್ತು ವರ್ಷ,
ಎಪ್ಪತ್ತೇ ? ಎಂಭತ್ತೇ ? .. ಗೊತ್ತಿಲ್ಲ !
ಬಣ್ಣ ಹಚ್ಚಿದ್ದು, ಕುಣಿದದ್ದಷ್ಟೇ ಲೆಖ್ಖ ,
ಎದುರಿದ್ದವನ ಮೋರೆಯ ಆಧರಿಸಿ ಬಣ್ಣ
ಹಚ್ಚಿಕೊಳ್ಳುವುದು ಸಾಮಾನ್ಯವಲ್ಲ ,
ಅವನ ಮುಖದ ಸುಕ್ಕು ಸುಕ್ಕುಗಳಿಗೊಂದೊಂದು ಬಣ್ಣ
ಬಳಿದುಕೊಂಡು ನಾನು ರಂಗು-ರಂಗು

ಅಳು, ನಗು, ಸಿಟ್ಟು, ಸೆಡವು
ಎಲ್ಲವನ್ನೂ ಅಭಿನಯಿಸುತ್ತೇನೆ
ಸೆಟ್ಟಿನ ಲೈಟೆಲ್ಲವೂ ಆರುವವರೆಗೆ ,
ಆಮೇಲೆ ಬಾನಿನ ಲಾಟೀನಿನಡಿ ಬೀಡಿ ಹಚ್ಚಿ ಮಲಗುವೆ
ಅದರ ಹೊಗೆಯ ಬೆಚ್ಚಗಿನ ಮಬ್ಬಿನಲಿ ಕಣ್ಣು ಮುಚ್ಚಿ ,
ತಲೆಯ ತಪ್ಪಲೆಯಲ್ಲಿ ಅದೇ ಯೋಚೆನೆಯ ಗಿರಗಿಟ್ಟಲೆ ಸುತ್ತಿ ,

ನಾಳೆ ಮತ್ತೆ ಬಣ್ಣ ಹಚ್ಚಬೇಕು, ಕುಣಿಯಬೇಕು

‍ಲೇಖಕರು admin

25 March, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading