ನಾರಾಯಣ ರಾಯಚೂರ್ ಕವಿತೆ – ವಿಶ್ವ- ವಂದ್ಯ ಶೇಕ್ಸಪೀಯರ್…

ನಾರಾಯಣ ರಾಯಚೂರ್

ನಮಸ್ಕಾರ ಷೇಕ ಸ್ಪಿಯರನಿಗೆ
ವಿಶ್ವಮಾನ್ಯ ನಾಟಕಕಾರ -ಆರ್ಯನಿಗೆ .

ರಚಿಸಿದ ನಾಟಕಗಳು ಮೂವತ್ತೆಂಟು
ಒಂದೊಂದೂ ಅತಿಶ್ರೇಷ್ಠ, ಎಕ್ಸೆಲೆಂಟು !!.

“ಇರುವುದೋ ಇಲ್ಲದಿರುವುದೋ ?”–
ಹೊಯ್ದಾಟದ ಹಾಮ್ಲೆಟ್.
ಪ್ರಣಯ -ಕಾವ್ಯದ ಚಿರಂತನ ಕೃತಿ —
ರೋಮಿಯೋ ಜೂಲಿಯೆಟ್ .
ಪಾಸ್ಪೆರೋ ಮಾಯಾಜಾಲದ
ಸಮ್ಮೋಹಕ ಶಕ್ತಿಯ ‘ದಿ ಟೆಂಪೆಸ್ಟ್’.
ನಿಮ್ಮಿಷ್ಟದಂತಾಗಲಿ ಎನ್ನುವ —
“ಆಸ್ ಯೂ ಲೈಕ್ ಇಟ್”.!!

ರುದ್ರ ಪ್ರತಾಪ ನಾಯಕರು
ಒಥೆಲೋ, ಮ್ಯಾಕಬೆಥ್, ಸೀಸರ್,
ಮಗಳ ಮೋಹದಲಿ ಹುಚ್ಚಾದ
ವೃಧ್ಧ ದೋರೆ ಕಿಂಗ್ ಲಿಯರ್.

ಹರ್ಷ ನಾಟಕಗಳ ರಾಜ —
“ಕಾಮಿಡಿ ಆಫ್ ಎರರ್ಸ್”.
ಐತಿಹಾಸಿಕ ಸರಣಿ-
“ಹೆನ್ರಿ ಎಂಪರರ್ಸ್”.

ಸುನೀತಗಳೋ ?!
ಕಾವ್ಯ -ಪ್ರೌಢಿಮೆಯ ತಿರುಳೋ ?!
ನೂರೈವತ್ತಕ್ಕೂ ಮಿಗಿಲು –
ಹೊಳೆ -ಹೊಳೆವಂತೆ ತಾರೆ –
ತುಂಬಿದಾ ಮುಗಿಲು .!!

ಜಗವೇ ನಾಟಕ ರಂಗ
ಜನರೇ ನಟ-ವರ್ಗ!
ರಂಗದಲೇ ಸೃಟಿಸಿದ
ಭೂಮಿ -ನರಕ -ಸ್ವರ್ಗ!!

ನೀ ಬಳಸಿದ ಇಂಗ್ಲಿಷ್
ಜಗಕೆಲ್ಲ ಪಸರಿಸಿ
ಓದುಗರು /ನೋಟಕರು
ಸವಿವರು ಚಪ್ಪರಿಸಿ. .

ಬರೀ ನಾಟಕಕಾರನಲ್ಲ ನೀ
ನಟ- ಕೂಡ,
ಗ್ಲೋಬ್ ಥಿಯೇಟರ್ ಒಡೆಯ/
ನಿರ್ದೇಶಕ ನೋಡಾ !!

ಓ ಶಬ್ದ ಮಾಂತ್ರಿಕ !
ಮನೋಹರ, ರುದ್ರ, ಭೀಕರ-
ರಮಣೀಯ ದೃಶ್ಯ ಸಂಯೋಜಕ !!
ನಿನಗಿದೋ ನಮನ
ಈ ಕವನ
ಭಾವ -ಬುದ್ಧಿ ಸಮ್ಮಿಲನ
ಶತ -ಶತಮಾನದ ಚೇತನ,
ನೆನಪು ನಿನ್ನದು
ನಿತ್ಯ -ನೂತನ -ಚಿರಂತನ!!! .

‍ಲೇಖಕರು Admin

May 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: