ನಾನೊಂದು ಜೇಡನ ಹುಳು
ಜಯಶ್ರೀ ಬಿ ಕದ್ರಿ

ನಾನೊಂದು ಜೇಡನ ಹುಳು
ನೋಯುತ್ತೇನೆ ಮತ್ತೆ
ನೇಯುತ್ತೇನೆ
ನಾನೊಂದು ಪುಟ್ಟ ಹಕ್ಕಿ
ಎದೆಯೊಳಗೆ ಕುಟುಕು
ಜೀವ
ನಾನೊಂದು ಟಿಸಿಲು
ಆಗೊಮ್ಮೆ ಈಗೊಮ್ಮೆ
ಅರಳು ಹೂವು
ನಾನೊಂದು ತೊರೆ
ಅಲ್ಲಲ್ಲಿ
ಕಲ್ಲು ಬಂಡೆ
ನಾನೊಂದು ಕವಿತೆ
ಒಮ್ಮೊಮ್ಮೆ
ಶ್ರುತಿಬದ್ಧ ಗೀತೆ






ಸೊಗಸಾದ ಪದ್ಯ.
nice poem madam..
very good kavya. marvellouus